ರಿಲೀಸ್‌ಗೆ ಸಿದ್ಧವಾದ ಶಿಯೋಮಿಯ 'ರೆಡ್ಮಿ Y3' ಸ್ಮಾರ್ಟ್‌ಫೋನ್!.32MP ಸೆಲ್ಫಿ ಸ್ಪೆಷಲ್!
ಶಿಯೋಮಿ ಕಂಪನಿಯ ಹೊಸ ಸುದ್ದಿ ಬಂದರೆ ಅದರಲ್ಲೆನೋ ಅಚ್ಚರಿ ಕಾದಿದೆ ಎಂದರ್ಥ ಎನ್ನುವಷ್ಟು ಕುತೂಹಲವನ್ನು ಕಂಪನಿಯು ಗ್ರಾಹಕರಲ್ಲಿ ಮೂಡಿಸಿದ್ದು, ಇತ್ತೀಚಿಗೆ ಬಿಡುಗಡೆ ಆಗಿರುವ 'ರೆಡ್ಮಿ ನೋಟ್ 7' ಮತ್ತು 'ನೋಟ್ 7 ಪ್ರೋ' ಸ್ಮಾರ್ಟ್‌ಫೋನ್‌ಗಳು ಇದಕ್ಕೆ ಉತ್ತಮ ಉದಾಹರಣೆ ಎನ್ನಬಹುದು. ಇದೀಗ ಕಂಪನಿ ಮತ್ತೊಂದು ಅಗ್ಗದ ಹೊಸ ಸ್ಮಾರ್ಟ್‌ಫೋನ್ ರಿಲೀಸ್‌ಗೆ ಸಜ್ಜಾಗುತ್ತಿದ್ದು, ಮಾರುಕಟ್ಟೆಯಲ್ಲಿ ಭಾರಿ ನಿರೀಕ್ಷೆಗಳನ್ನು ಹುಟ್ಟಿಸಿದೆ.

ಹೌದು, ಶಿಯೋಮಿ ಕಂಪನಿಯು 'ರೆಡ್ಮಿ Y3' ಹೆಸರಿನ ಸ್ಮಾರ್ಟ್‌ಫೋನ್ ಅನ್ನು ಆಫೀಶಿಯಲಿ ಲಾಂಚ್ ಮಾಡಿದ್ದು, ಮಾರುಕಟ್ಟೆಗೆ ಬಿಡುಗಡೆ ಮಾಡಲು ಮೂಹೂರ್ತ ಫಿಕ್ಸ್ ಆಗಬೇಕಿದೆ. 'Y' ಸರಣಿಯಲ್ಲಿ ಹೊರಬರಲಿರುವ ಈ ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 32ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಕುರಿತು ಶಿಯೋಮಿ ಕಂಪನಿಯ ಭಾರತದ ಮುಖ್ಯಸ್ಥ 'ಮನು ಕುಮಾರ ಜೈನ್' ಸೆಲ್ಫಿ ಕ್ಲಿಕ್ಕಿಸಿ ಟ್ವಿಟ್ಟ್ ಮಾಡಿದ್ದಾರೆ. ಹಾಗಾದರೇ ರೆಡ್ಮಿ ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ
720 x 1520 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಂಚುರಹಿತ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ವಾಟರ್‌ಡ್ರಾಪ್ ನಾಚ್ ಸಹ ಇರಲಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತವು 19:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆ 280 ppi ಆಗಿದೆ.

ಪ್ರೊಸೆಸರ್
ಕ್ವಾಲ್ಕಂ ಚಿಪ್ ಸೆಟ್ಟಿನೊಂದಿಗೆ, ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಅಂಡ್ರಿನೊ 512 ಗ್ರಾಫಿಕ್ಸ್ ಇರಲಿದೆ. 3 GB RAM ಮತ್ತು 32GB ಆಂಗರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ
ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಇದ್ದು, ಪ್ರಾಥಮಿಕ ಕ್ಯಾಮೆರಾವು 12 ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸಾಮರ್ಥ್ಯದಲ್ಲಿ ಇರಲಿವೆ. ಎಲ್‌ಇಡಿ ಫ್ಲ್ಯಾಶ್ ಸಹ ಒದಗಿಸಲಾಗಿದ್ದು, ಇಮೇಜ್ ಪಿಕ್ಸಲ್ ರೆಸಲ್ಯೂಶನ್ 4000 x 3000 ಆಗಿರಲಿದೆ.

32 ಎಂಪಿ ಸೆಲ್ಫಿ
ಶಿಯೋಮಿ ಕಂಪನಿಯು ಇದೀಗ ಸೆಲ್ಫಿ ಕ್ಯಾಮೆರಾದತ್ತ ಹೆಚ್ಚಿನ ಒಲವು ಹರಿಸಿದ್ದು, ಹೀಗಾಗಿ ಈ ಸ್ಮಾರ್ಟ್‌ಫೋನಿನ ಮುಖ್ಯ ಆಕರ್ಷಣೆ ಸೆಲ್ಫಿ ಕ್ಯಾಮೆರಾ ಆಗಿದೆ. 32 ಎಂಪಿ ಸಾಮರ್ಥ್ಯದಲ್ಲಿದ್ದು, ಅತ್ಯುತ್ತಮ ಗುಣಮಟ್ಟದಲ್ಲಿ ಸೆಲ್ಫಿ ಫೋಟೊಗಳು ಮೂಡಿಬರಲು ಬೆಂಬಲಿಸಲಿದೆ.

ಬ್ಯಾಟರಿ
ಶಿಯೋಮಿ Y3 ಸ್ಮಾರ್ಟ್‌ಫೋನ್ 3300mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಸುಮಾರು ಒಂದು ದಿನದವರೆಗೂ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿಯು ಹೊಂದಿರಲಿದೆ. ಫಾಸ್ಟ್ ಚಾರ್ಜರ್ ತಂತ್ರಜ್ಞಾನ ಸೌಲಭ್ಯವನ್ನು ನೀಡಿರುವ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications








