ರೂ.999 ಬೆಲೆಯ ರಿಲಯನ್ಸ್ ಜಿಯೋ 4G VoLTE ಪೋನು ಹೇಗಿದೆ..? ಇಲ್ಲಿದೆ ನೋಡಿ ಫಸ್ಟ್ ಪೋಟೋ..!
ಜಿಯೋ ಬಿಡುಗಡೆಗೊಳಿಸಿ ದೇಶಿಯ ಟೆಲಿಕಾಂ ವಲಯದಲ್ಲಿ ಧೂಳೆಬ್ಬಿಸಿದ್ದ ರಿಲಯನ್ಸ್ ಈ ಬಾರಿ ಕಡಿಮೆ ಬೆಲೆಗೆ 4G VoLTE ಸಪೋರ್ಟ್ ಮಾಡುವ ಫೀಚರ್ ಪೋನುಗಳನ್ನು ಬಿಡುಗಡೆಮಾಡಿದೆ.
ಮೊನ್ನೆ ತಾನೇ ರಿಲಯನ್ಸ್ ಜಿಯೋ ಸಾವಿರ ರೂ.ಗೆ 4G VoLTE ಬಳಸುವ ಫಿಚರ್ ಪೋನನ್ನು ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಈಗ ಆ ಪೋನ್ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದ್ದು, ಪೋನಿನ ಮೊದಲ ಪೋಟೊ ಸಿಕ್ಕಿದೆ. ಇನ್ನು ಕೆಲವೇ ದಿನಲ್ಲಿ ಈ ಪೋನು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಓದಿರಿ..:ರೂ.17,999 ಮೌಲ್ಯದ Moto M ಫ್ಲಿಪ್‌ಕಾರ್ಟ್ ಏಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ ರೂ 2,999ಕ್ಕೆ ಲಭ್ಯ
ಜಿಯೋ ಬಿಡುಗಡೆಗೊಳಿಸಿ ದೇಶಿಯ ಟೆಲಿಕಾಂ ವಲಯದಲ್ಲಿ ಧೂಳೆಬ್ಬಿಸಿದ್ದ ರಿಲಯನ್ಸ್, ಈ ಬಾರಿ ಕಡಿಮೆ ಬೆಲೆಗೆ 4G VoLTE ಸಪೋರ್ಟ್ ಮಾಡುವ ಫೀಚರ್ ಪೋನುಗಳನ್ನು ಬಿಡುಗಡೆ ಮಾಡುವ ಮೂಲಕ ಮೊಬೈಲ್ ಮಾರುಕಟ್ಟೆಯಲ್ಲಿಯೂ ಅಧಿಪತ್ಯವನ್ನು ಸ್ಥಾಪಿಸಲು ಮುಂದಾಗಿದೆ ಎನ್ನಲಾಗಿದೆ.
ಈ ಸಾವಿರ ರೂ ಬೆಲೆಯ ಜಿಯೋ ಪೋನಿನಲ್ಲಿ T9 ಕೀ ಪ್ಯಾಡ್ ಇದೆ, ಅಲ್ಲದೇ ಪೋನಿನಲ್ಲೇ MyJio, Jio Live TV, Jio Video and Jio Music ಆಪ್ ಗಳ ಶಾರ್ಟ್‌ಕಟ್ ಕೀಗಳನ್ನು ನೀಡಲಾಗಿದೆ. ಅಲ್ಲದೇ ಟಾರ್ಚ್ ಲೈಟ್ ಸಹ ಪೋನಿನಲ್ಲಿದ್ದು, ಅದಕ್ಕಾಗಿಯೇ ಕೀ ಸಹ ನೀಡಲಾಗಿದೆ.

ಓದಿರಿ..: ಪೋನಿಲ್ಲವಾದರು ಡಾಂಗಲ್ ನಲ್ಲಿ ಜಿಯೋ 4G ಬಳಸಬಹುದು..!
ಜಿಯೋ ಫೀಚರ್ ಪೋನ್ ಬಳಸುವವರು ಅದರಲ್ಲಿಯೂ ಅನ್‌ಲಿಮಿಟೆಡ್ ಕರೆ ಮಾಡುವ ಆಫರ್ ಬೇಕಾದಲ್ಲಿ ಪ್ರತಿ ತಿಂಗಳು 149 ರೂಗಳನ್ನು ಪಾವತಿ ಮಾಡಬೇಕಾಗಿದೆ. ಒಟ್ಟಿನಲ್ಲಿ ಕೊಟ್ಟಕಾಸಿಗಂತೂ ಈ ಪೋನ್ ಮೋಸವಿಲ್ಲ.


Click it and Unblock the Notifications








