ಜಿಯೋ-ನೋಕಿಯಾ ಒಪ್ಪಂದ: ಗ್ರಾಹಕರಿಗೆ ಆಚ್ಚರಿಯ ಕೊಡುಗೆಗಳ ಸುರಿಮಳೆ..!
ನೋಕಿಯಾ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಉಳಿಸಿಕೊಂಡಿದೆ. ಇದನ್ನ ಮುಂದುವರೆಸಿಕೊಂಡು ಹೋಗಲು ಮತ್ತು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಸಲುವಾಗಿ ರಿಲಯನ್ಸ್ ಜಿಯೋದೊಂದಿಗೆ ಮಹತ್ವದ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಮೂಲಕ ನೋಕಿಯಾ ಖರೀದಿಸಿದವರಿಗೆ ಹೆಚ್ಚಿನ ಡೇಟಾ ಕೊಡುಗೆಯನ್ನು ನೀಡುವಂತೆ ಮಾಡಿದೆ.

ಓದಿರಿ: ಬ್ಲಾಕ್ ಫ್ರೈಡೇ ಡೀಲ್‌ನಲ್ಲಿ ಕಡಿಮೆ ಬೆಲೆಗೆ ಅಮೆರಿಕಾದ ಶಾಪಿಂಗ್ ತಾಣದಲ್ಲಿ ಖರೀದಿಸಿ ತರಿಸಿಕೊಳ್ಳುವುದು ಹೇಗೆ?
ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಸಾಕಷ್ಟು ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದ್ದು, ಇದೇ ಮಾದರಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಕೊಳ್ಳುವ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೆಚ್ಚಿನ ಡೇಟಾ ಆಫರ್ ಘೋಷಣೆ ಮಾಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ನೋಕಿಯಾ ಗ್ರಾಹಕರಿಗೆ ಗಾಳ ಹಾಕಿದೆ.

100GB ಮತ್ತು 50GB ಡೇಟಾ:
ನೋಕಿಯಾ ಸ್ಮಾರ್ಟ್‌ಪೋನ್ ಕೊಳ್ಳುವವರಿಗೆ ಜಿಯೋ 100GB ಇಲ್ಲವಾದರೆ 50GB ಡೇಟಾವನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ. ಇದರಿಂದಾಗಿ ನೋಕಿಯಾ ಗ್ರಾಹಕರು ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇದು 4G ವೇಗದ ಡೇಟಾವಾಗಿದೆ ಎನ್ನಲಾಗಿದೆ.

ಸದ್ಯ ನೋಕಿಯಾ 8 ಮತ್ತು 5 ಮೇಲೆ ಮಾತ್ರವೇ ಆಫರ್:
ಜಿಯೋ ಸದ್ಯ ಕೇವಲ ನೋಕಿಯಾ 8 ಮತ್ತು 5 ಸ್ಮಾರ್ಟ್‌ಫೋನ್ ಕೊಂಡವರಿಗೆ ಮಾತ್ರವೇ ಈ ಆಫರ್ ಘೋಷಣೆ ಮಾಡಿದ್ದು, ಶೀಘ್ರವೇ ಎಲ್ಲಾ ನೋಕಿಯಾ ಸ್ಮಾರ್ಟ್‌ಫೋನ್ ಮೇಲೆಯೂ ಈ ಆಫರ್ ಘೋಷಣೆಯಾಗುವ ಸಾಧ್ಯತೆಗಳಿದೆ.

ಪ್ರತಿ ತಿಂಗಳು 10 GB:
ಜಿಯೋ ಒಂದೇ ಬಾರಿಗೆ ಈ ಪ್ರಮಾಣದ ಡೇಟಾವನ್ನು ಬಳೆಕೆಗೆ ನೀಡುವುದಿಲ್ಲ, ಬದಲಾಗಿದೆ ಪ್ರತಿ ರೀಚಾರ್ಜ್ ಮೇಲೆಯೂ 10GB ಹೆಚ್ಚಿನ ಡೇಟಾವನ್ನು ಬಳಕೆ ನೀಡುವ ಯೋಜನೆಯನ್ನು ಮಾಡಿದೆ ಎನ್ನಲಾಗಿದೆ.

ನೋಕಿಯಾ ಮಾತ್ರವಲ್ಲ:
ಜಿಯೋ ಕೇವಲ ನೋಕಿಯಾದೊಂದಿಗೆ ಮಾತ್ರವೇ ಒಪ್ಪಂದವನ್ನು ಮಾಡಿಕೊಂಡಿಲ್ಲ, ಇದರ ಬದಲಾಗಿ ಸ್ಯಾಮ್‌ಸಂಗ್, ಶಿಯೋಮಿ, ಆಸುಸ್, ವಿವೋ, ಒಪ್ಪೋ ಸೇರಿದಂತೆ ಹಲವು ಸ್ಮಾರ್ಟ್‌ಫೋನ್ ತಯಾರಕ ಕಂಪನಿಗಳೊಂದಿಗೆ ಒಂಪ್ಪದ ಮಾಡಿಕೊಂಡು ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡುತ್ತಿದೆ.


Click it and Unblock the Notifications








