ಜಿಯೋ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ LYF ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ಸೇಲ್!

Written By:

LYF ಸ್ಮಾರ್ಟ್‌ಫೋನ್‌ಗಳು ಎನ್ನುವುದಕ್ಕಿಂತ ಜಿಯೋ ಸ್ಮಾರ್ಟ್‌ಫೋನ್‌ಗಳು ಎಂದರೆ ಎಲ್ಲರಿಗೂ ಬೇಗ ಅರ್ಥವಾಗುತ್ತದೆ. ಅಂಬಾನಿ ಒಡೆತನದ LYF ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಿಡುಗಡೆಯಾಗಿ 4 ತಿಂಗಳು ಕಳೆದಿವೆ. ಇನ್ನು ಉಚಿತ ಇಂಟರ್‌ನೆಟ್‌ ಹೊಂದಿರುವ ಜಿಯೋ ಸಿಮ್ ಸಪೋರ್ಟ್ ಹೊಂದಿದ್ದ LYF ಸ್ಮಾರ್ಟ್‌ಫೋನ್‌ಗಳು ಹೇಳಿಕೊಳ್ಳುವಂತಹ ಸದ್ದೇನು ಮಾಡಲಿಲ್ಲ.

ಕಡಿಮೆ ಬೆಲೆಗೆ 4G ಸಪೋರ್ಟ್ ಮಾಡುವ LYF ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದರೂ ಜಿಯೋ ಸ್ಮಾರ್ಟ್‌ಫೋನ್‌ ಬಳಕೆದಾರರ ಮನಗೆಲ್ಲುವಲ್ಲಿ ವಿಫಲವಾಯಿತು. ಇನ್ನು LYF ಸ್ಮಾರ್ಟ್‌ಫೋನ್‌ ಏಕೆ ಹೆಚ್ಚು ಮಾರಾಟವಾಗಲಿಲ್ಲ ಎನ್ನುವ ಹಲವು ಕಾರಣಗಳನ್ನು ಜಿಯೋ ಹುಡುಕಿದೆ ಎನ್ನಲಾಗಿದೆ.

ಜಿಯೋ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ LYF ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ಸೇಲ್!

ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

ಹಾಗಾಗಿ, ಇದೀಗ ತನ್ನದೇ ಅಫಿಶಿಯಲ್ ವೆಬ್‌ಸೈಟ್‌ ತೆರೆದಿರುವ ಜಿಯೋ , ಮಾರುಕಟ್ಟೆಯಲ್ಲಿ LYF ಸ್ಮಾರ್ಟ್‌ಫೋನ್‌ಗಳ ಮೇಲೆ ಇರುವ ಪ್ರಸ್ತುತ ದರಕ್ಕಿಂತ ಭಾರಿ ಕಡಿಮೆ ದರದಲ್ಲಿ ಆನ್‌ಲೈನ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಈ ಮೂಲಕ LYF ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನೀಡಿದೆ.!

ಜಿಯೋ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ LYF ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ಸೇಲ್!

ನೀವು Jio.com ವೆಬ್‌ಸೈಟ್ ತೆರೆದು 'devices' ಐಕಾನ್ ಕ್ಲಿಕ್ ಮಾಡಿದರೆ ಡಿಸ್ಕೌಂಟ್ ಇರುವ LYF ಸ್ಮಾರ್ಟ್‌ಫೋನ್‌ಗಳ ಲೀಸ್ಟ್‌ ಕಾಣಿಸುತ್ತದೆ. ಜಿಯೋ ಈ ಡಿಸ್ಕೌಂಟ್ಸ್ ಆಫರ್‌ಗಳನ್ನು ಮೊದಲಿಗೆ ಮೂರು ಸ್ಮಾರ್ಟ್‌ಫೋನ್‌ಗಳ ಮೇಲೆ ನೀಡಿದ್ದು, LYF Water 11 ಸ್ಮಾರ್ಟ್‌ಫೋನ್‌ 7,999 ರೂಪಾಯಿ, LYF Water 8 ಸ್ಮಾರ್ಟ್‌ಫೋನ್‌ ಬೆಲೆ 8,999 ಮತ್ತು LYF Earth 1 ಸ್ಮಾರ್ಟ್‌ಫೋನ್‌ ಬೆಲೆ 19,399 ರೂಪಾಯಿಗಳಾಗಿವೆ.

ಜಿಯೋ ಅಫಿಶಿಯಲ್ ವೆಬ್‌ಸೈಟ್‌ನಲ್ಲಿ LYF ಸ್ಮಾರ್ಟ್‌ಫೋನ್‌ ಡಿಸ್ಕೌಂಟ್‌ ಸೇಲ್!

LYF ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯಂತ ಹೆಚ್ಚಿನ ಫೀಚರ್‌ಗಳನ್ನು ಹೊಂದಿರುವ ಮೂರು ಸ್ಮಾರ್ಟ್‌ಫೋನ್‌ಗಳು ಇದೀಗ ಬಜೆಟ್‌ ಬೆಲೆಯಲ್ಲಿ ಗ್ರಾಹಕರ ಕೈ ಸೆರುತ್ತವೆ. ಇನ್ನು ಜಿಯೋ ವೆಬ್‌ಸೈಟ್‌ನಲ್ಲಿ "Jio Fi" 4G ಹಾಟ್‌ಸ್ಪಾಟ್ ಸಹ ಡಿಸ್ಕೌಂಟ್ ದರದಲ್ಲಿ ದೊರೆಯಲಿದ್ದು, ಬೆಲೆ 1,999 ರೂಪಾಯಿಗಳಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Yes, you can now purchase and get LYF smartphones and JioFi 2 hotspot online and get it delivered at your doorstep. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot