ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

|

ಭಾರತೀಯ ಮಾರುಕಟ್ಟೆಗೆ ಅತ್ಯುತ್ತಮ ಫೀಚರ್‌ ಸ್ಮಾರ್ಟ್‌ಫೋನ್‌ ನೀಡುತ್ತಿರುವ ಚೀನಾದ ಮೊಬೈಲ್ ಕಂಪೆನಿ ಶ್ಯೋಮಿ ವರ್ಷದ ಕೊನೆಯ ಕ್ರಿಸ್‌ಮಸ್‌ ಆಫರ್‌ ಬಿಡುಗಡೆ ಮಾಡಿದೆ!. ಶ್ಯೋಮಿ ತನ್ನೆಲ್ಲಾ ಪ್ರಾಡೆಕ್ಟ್‌ಳ ಮೇಲೆ ಡಿಸ್ಕೌಂಟ್ಸ್, ಕೂಪನ್‌ಗಳನ್ನು ಬಿಡುಗಡೆ ಮಾಡಿದ್ದು, ತನ್ನ ಗ್ರಾಹಕರಿಗೆ ಕ್ರಿಸ್‌ಮಸ್‌ ಉಡುಗೊರೆ ನಿಡಿದೆ.

ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

ಶ್ಯೋಮಿ ಇದೇ ಮೊದಲ ಬಾರಿಗೆ ತನ್ನ ಗ್ರಾಹಕರಿಗಾಗಿ ಒಂದು ವರ್ಷ ಉಚಿತ ಮ್ಯೂಸಿಕ್‌ ಮೆಂಬರ್‌ಶಿಪ್ ನೀಡಲಿದೆ. ಜೊತೆಗೆ, ತನ್ನ ಒಂದು ಬಿಲಿಯನ್ ಬಳಕೆದಾರರಿಗೆ ಮೂರು ತಿಂಗಳ ಹಂಗಾಮ ಪ್ಲೇ ಮೆಂಬರ್‌ಶಿಪ್ ನೀಡಿದೆ. ರೆಡ್‌ಮಿ 3 ಎಸ್‌ ,ರೆಡ್‌ಮಿ ನೋಟ್‌3, ಮೈ ಮ್ಯಾಕ್ಸ್ ಮತ್ತು ಮೈ5 ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಆಫರ್‌ ಪಡೆಯಲಿದ್ದಾರೆ.

ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

ಐಡಿಯಾದಿಂದ 1 ರೂಗೆ 1GB 4G ಡೇಟಾ! ಉಪಯೋಗಿಸಲು ತಲೆ ಬೇಕು!?

ಇನ್ನು ಅತ್ಯುತ್ತಮ ಎಂಬುವಂತೆ ನೂತನ ಶ್ಯೋಮಿ ಎಂಐ5 ಸ್ಮಾರ್ಟ್‌ಫೋನ್ ಮೇಲೆ 3000 ಸಾವಿರ ರೂಪಾಯಿಗಳ ಡಿಸ್ಕೌಂಟ್ಸ್ ನೀಡಿದೆ.! ಶ್ಯೋಮಿ ಇತ್ತೀಚಿಗೆ ಬಿಡುಗಡೆ ಮಡಿರುವ ಮೈ ವರ್ಚುವಲ್ ರಿಯಾಲಿಟಿ ಪ್ಲೇ ಹೆಡ್‌ ಸೆಟ್‌ ಕೇವಲ 999 ರೂಪಾಯಿಗಳಲ್ಲಿ ದೊರೆಯಲಿದೆ. 20000Mah ಶಕ್ತಿ ಹೊಂದಿರುವ ಶ್ಯೋಮಿ ಮೈ ಪವರ್‌ಬ್ಯಾಂಕ್ 600 ರೂಪಾಯಿಗಳ ಡಿಸ್ಕೌಂಟ್ಸ್‌ನೊಂದಿಗೆ ಕೇವಲ 1,899 ರೂಪಾಯಿಗಳಲ್ಲಿ ದೊರೆಯಲಿದೆ.

ಶ್ಯೋಮಿ ನೀಡುತ್ತಿದೆ ಕ್ರಿಸ್‌ಮಸ್‌ ಗಿಫ್ಟ್!! ಏನೇನು ಆಫರ್?

10000Mah ಶಕ್ತಿ ಪವರ್‌ಬ್ಯಾಂಕ್ ಕೇವಲ 999 ರೂ ಮತ್ತು ಮೈ ಇನ್‌-ಏರ್ ಹೆಡ್‌ ಫೋನ್‌ ಮೇಲೆ 500 ರೂಪಾಯಿಗಳ ಡಿಸ್ಕೌಂಟ್ಸ್ ಬೆಲೆ ನೀಡಿದ್ದು, ಇನ್ನು ಹೆಚ್ಚಿನ ಎಲ್ಲಾ ಆಫರ್‌ಗಳು , ಶ್ಯೋಮಿ ಕಂಪೆನಿಯ ಅಫಿಷಿಯಲ್ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿದೆ. ಇನ್ನು ಶ್ಯೋಮಿ ಕ್ರಿಸ್‌ಮಸ್ ಆಫರ್ ಸೋಮವಾರದಿಂದ ಬುಧವಾರದವರೆಗೂ ಮಾತ್ರ ಇರಲಿದೆ.

Best Mobiles in India

English summary
Mi Christmas offer available for consumers from Monday to Wednesday. to know more visit to kannada.Gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X