Subscribe to Gizbot

ಕೊನೆಗೂ ಜಿಯೋ ಫೋನ್ ನಿಮ್ಮ ಮನೆ ಬಾಗಿಲಿಗೆ ಬರುವ ದಿನಾಂಕ ಫಿಕ್ಸ್.!

Written By:

ಭಾರೀ ಕುತೂಹಲವನ್ನು ಕೆರಳಿಸಿರುವ ಜಿಯೋ ಫೋನ್ ಅಧಿಕೃತವಾಗಿ ಬುಕಿಂಗ್ ಅಧಿಕೃವಾಗಿ ಶುರುವಾಗಿದ್ದು, ಈಗಾಗಲೇ ಟೋಕನ್ ಆಡ್ವಾನ್ ನೀಡಿದ ಅನೇಕ ಮಂದಿ ಫೋನ್ ಬರುವಿಕೆಯನ್ನು ಕಾಯುತ್ತಿದ್ದಾರೆ. ಈ ಕಾತುರತೆ ಶೀಘ್ರವೇ ಕೊನೆಯಾಗಲಿದೆ.

ಕೊನೆಗೂ ಜಿಯೋ ಫೋನ್ ನಿಮ್ಮ ಮನೆ ಬಾಗಿಲಿಗೆ ಬರುವ ದಿನಾಂಕ ಫಿಕ್ಸ್.!

ಓದಿರಿ: ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಧಿ ವಿಸ್ತರಣೆ? ಕೊನೆ ದಿನಾಂಕ?

ಜಿಯೋ ಫೋನ್ ಎಂದು ನಮ್ಮ ಕೈ ಸೇರಲಿದೆ ಎನ್ನುವವರಿಗೆ ಶುಭಸುದ್ಧಿಯೂ ಇಲ್ಲಿದ್ದು, ಜಿಯೋ ಫೋನ್ ಸೆಪ್ಟೆಂಬರ್ ತಿಂಗಳಿನ 25ನೇ ತಾರೀಕಿನಂದು ಮೊದಲ ಹಂತದಲ್ಲಿ ಡೆಲಿವರಿಯಾಗಲಿದೆ. ಮೊದಲಿಗೆ ಯಾರು ಫೋನ್ ಬುಕ್ ಮಾಡಿದ್ದಾರೆಯೋ ಅವರಿಗೆಲ್ಲರಿಗೂ ಇದು ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೆಹಲಿ ಭಾಗದಲ್ಲಿ ಮೊದಲು:

ದೆಹಲಿ ಭಾಗದಲ್ಲಿ ಮೊದಲು:

ಜಿಯೋ ಫೋನ್ ಸೆಪ್ಟೆಂಬರ್ 25 ರಂದು ಮೊದಲ ಹಂತದಲ್ಲಿ ಡಿಲಿವರಿಯಾಗಲಿದ್ದು, ಅದುವೇ ದೆಹಲಿಯಲ್ಲಿ ಮೊದಲಿಗೆ. ಕಾರಣ ದೆಹಲಿಯಲ್ಲಿ ಮೊದಲಿಗೆ ಅಧಿಕೃತವಾಗಿ ಆಫ್‌ಲೈನ್ ಸ್ಟೋರ್ ಗಳಲ್ಲಿ ಬುಕಿಂಗ್ ಶುರುವಾಗಿತ್ತು. ಈ ಹಿನ್ನಲೆಯಲ್ಲಿ ಅಲ್ಲಿ ಮೊದಲು.

ಹಿಂದೆ ಹೇಳಿದ್ದಕ್ಕಿಂತ ಸ್ವಲ್ಪ ನಿಧಾನ:

ಹಿಂದೆ ಹೇಳಿದ್ದಕ್ಕಿಂತ ಸ್ವಲ್ಪ ನಿಧಾನ:

ಈ ಹಿಂದೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಈ ಫೋನ್ ಬಿಡುಗಡೆಯಾಗಲಿದೆ ಎನ್ನುವ ಮಾತು ಕೇಳಿಬಂದಿತ್ತು. ಇದಾದ ನಂತರಲ್ಲಿ ಹೆಚ್ಚಿನ ಬೇಡಿಕೆ ಇಂದಾಗಿ ಫೋನ್ ಇನಷ್ಟು ನಿಧಾನವಾಗಿ ಗ್ರಾಹಕರ ಕೈಸೇರಲಿದೆ.

ರೂ.500 ಬುಕ್ಕಿಂಗ್:

ರೂ.500 ಬುಕ್ಕಿಂಗ್:

ಜಿಯೋ ಫೋನ್ ಬೆಲೆ ಶೂನ್ಯವಾಗಿದ್ದು, ಆದರೆ ರೂ.1500 ಡೆಪಾಸಿಟ್ ಇಡಬೇಕಾಗಿದೆ. ಇದುವೇ ಹಿಂಪಡೆಯುವ ಅವಕಾಶವನ್ನು ಮಾಡಿಕೊಡಲಾಗಿದೆ. ಜಿಯೋ ಫೋನ್ ಬುಕ್ಕಿಂಗ್ ವೇಳೆಯಲ್ಲಿ ರೂ.500 ಪಾವತಿ ಮಾಡಬೇಕಾಗಿದ್ದು, ಫೋನ್ ಖರೀದಿಸುವ ವೇಳೆಯಲ್ಲ ಉಳಿದ ರೂ.1000 ಪಾವತಿ ಮಾಡಬೇಕಾಗಿದೆ.

ಒಂದಕ್ಕಿಂತ ಹೆಚ್ಚು ಜಿಯೋ ಉಚಿತ ಫೋನ್ ಬುಕ್ ಮಾಡುವುದು ಹೇಗೆ?
ಪ್ರೀಬುಕ್ಕಿಂಗ್ ಸ್ಥಗಿತ:

ಪ್ರೀಬುಕ್ಕಿಂಗ್ ಸ್ಥಗಿತ:

ಜಿಯೋ ಫೋನ್ ಬೇಡಿಕೆ ಹೆಚ್ಚಾಗಿದ್ದು, ಈಗಾಗಲೇ 40 ಲಕ್ಷ ಮಂದಿ ಈ ಫೋನ್ ಖರೀದಿಸಲು ಕ್ಯೂನಲ್ಲಿ ನಿಂತಿದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ಸದ್ಯ ಫೋನ್ ಬುಕ್ಕಿಂಗ್ ಸ್ಥಗಿತಗೊಳಿಸಿದ್ದು, ಶೀಘ್ರವೇ ಮತ್ತೆ ಬುಕ್ಕಿಂಗ್ ಓಪನ್ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
It won’t be easy to secure a Reliance JioPhone unit, as the delivery date has been pushed to September 25 in Delhi-NCR area. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot