Subscribe to Gizbot

ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಧಿ ವಿಸ್ತರಣೆ? ಕೊನೆ ದಿನಾಂಕ?

Written By:

ಕೇಂದ್ರ ಸರಕಾರವು ತನ್ನ ಎಲ್ಲಾ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಿದ ರೀತಿಯಲ್ಲಿಯೇ ಪ್ಯಾನ್ ಕಾರ್ಡ್ ಗಳಿಗೂ ಆಧಾರ್ ಕಾರ್ಡ್ ಲಿಂಕ್ ಮಾಡಿ ಎಂದು ಬಹಳ ಹಿಂದೆಯೇ ಮನವಿ ಮಾಡಿತ್ತು. ಆದರೆ ಸಾಕಷ್ಟು ಮಂದಿ ಈ ಕಾರ್ಯಕ್ಕೆ ಮುಂದಾಗಲಿಲ್ಲ. ಈ ಹಿನ್ನಲೆಯಲ್ಲಿ ಲಿಂಕ್ ಮಾಡಲು ಅವಧಿಯನ್ನು ವಿಸ್ತರಿಸಿದೆ.

ಆಧಾರ್-ಪ್ಯಾನ್ ಲಿಂಕ್ ಮಾಡಲು ಅವಧಿ ವಿಸ್ತರಣೆ

ಓದಿರಿ: ಬಂದಿದೆ ನೋಡಿ ಮಿನಿ ಸೆಲ್ಫಿ ಡ್ರೋನ್.! ಕೇವಲ ರೂ.2500ಕ್ಕೆ ಲಭ್ಯ

ಈಗ ಡೆಡ್ ಲೈನ್ ಹತ್ತಿರ ಬಂದಿದ್ದು, ಆಗಸ್ಟ್ 31ರಂದು ಆಧಾರ್-ಪ್ಯಾನ್ ಲಿಂಕ್ ಮಾಡಲು ಕೊನೆಯ ದಿನಾಂಕವಾಗಿತ್ತು. ಆದರೆ ಇದನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಿದೆ. ಅದರ ಒಳಗೆ ನಿಮ್ಮ ಆಧಾರ್-ಪ್ಯಾನ್ ಲಿಂಕ್ ಮಾಡದೆ ಹೋದರೆ ನಿಮ್ಮ ಪ್ಯಾನ್ ಕಾರ್ಡ್ ರದ್ದಾಗಲಿದೆ. ಬೇಗನೆ ಈ ಕಾರ್ಯಕ್ಕೆ ಮುಂದಾಗಿದೆ. ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿದುಕೊಳ್ಳುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಧಾರ್-ಪ್ಯಾನ್ ಲಿಂಕ್ ಯಾಕೆ?

ಆಧಾರ್-ಪ್ಯಾನ್ ಲಿಂಕ್ ಯಾಕೆ?

ಒಬ್ಬರು ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಗಳನ್ನು ಹೊಂದಿದ್ದು, ಇದಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಆಧಾರ್ ಸಂಖ್ಯೆಯನ್ನು ಪ್ಯಾನ್ ನೊಂದಿಗೆ ಲಿಂಕ್ ಮಾಡಿರಿ ಎಂದು ತಿಳಿಸಿದೆ. ಹೀಗೆ ಲಿಂಕ್ ಆಗದಾ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯವಾಗಲಿದೆ.

ಲೀಕ್ ಮಾಡಲು ತೆರಿಗೆ ಇಲಾಖೆಯ ವೆಬ್‌ಸೈಟ್ಗೆ ಹೋಗಿ:

ಲೀಕ್ ಮಾಡಲು ತೆರಿಗೆ ಇಲಾಖೆಯ ವೆಬ್‌ಸೈಟ್ಗೆ ಹೋಗಿ:

ಕೇಂದ್ರ ಸರಕಾರದ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ತೆರೆಯಿರಿ. incometaxindiaefiling.gov.in ಇದು ತೆರಿಗೆ ಪಾವತಿ ಮಾಡಲು ಇರುವ ವೈಬ್ ತಾಣವಾಗಿದ್ದು, ನೀವು ಇಲ್ಲಯೇ ಆಧಾರ್-PAN ಲಿಂಕ್ ಮಾಡಬಹುದಾಗಿದೆ.

ಲಿಂಕ್ ಆಧಾರ್ ಎಂಬ ಆಯ್ಕೆ ಇದೆ:

ಲಿಂಕ್ ಆಧಾರ್ ಎಂಬ ಆಯ್ಕೆ ಇದೆ:

ನೀವು ಆಧಾರ್-PAN ಲಿಂಕ್ ಮಾಡಲು ನೀವು ರಿಜಿಸ್ಟರ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಇದಕ್ಕಾಗಿ ವೆಬ್ ಸೈಟಿನ ಕೆಳಭಾಗದಲ್ಲಿ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ನೀಡಲಾಗಿದೆ. ಅದನ್ನು ನೇರಾವಾಗಿ ಕ್ಲಿಕ್ ಮಾಡಿರಿ.

ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ:

ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ:

ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರದಲ್ಲಿ ಪಾನ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಮತ್ತು ಹೆಸರನ್ನು ನಮೂದಿಸಬೇಕಾಗಿದೆ. ನಂತರ ಅಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಹೆಸರನ್ನೇ ನಮೂದಿಸಬೇಕಾಗಿದೆ.

ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!
ಆಧಾರ್ ವೆರಿಫಿಕೇಷನ್ ಆಗಲಿದೆ:

ಆಧಾರ್ ವೆರಿಫಿಕೇಷನ್ ಆಗಲಿದೆ:

ನಿಮ್ಮ ಮಾಹಿತಿಗಳನ್ನು ನೀಡಿದ ನಂತರದಲ್ಲಿ ನಿಮ್ಮ ಮಾಹಿತಿಗಳನ್ನು ಆಧಾರ್ ವೆರಿಫಿಕೇಷನ್ ಮಾಡಲಿದೆ. ನಿಮ್ಮ ಆಧಾರ್ ಮತ್ತು ಪ್ಯಾನ್ ನಡುವೆ ಲಿಂಕ್ ಮಾಡಲು ಅತ್ಯವಶ್ಯಕವಾಗಿದೆ. ಎರಡು ಕಾರ್ಡ್‌ಗಳಿಗೆ ನೀಡಿರುವ ಮಾಹಿತಿಯೂ ಒಂದೇ ಆಗಿರಬೇಕಾಗಿದೆ.

ಲಿಂಕ್ ಆಗಲಿಲ್ಲ ಎಂದರೆ?

ಲಿಂಕ್ ಆಗಲಿಲ್ಲ ಎಂದರೆ?

ಇದಾದ ನಂತರ ನಿಮ್ಮ ಎರಡು ಕಾರ್ಡ್ ಗಳ ನಡುವೆ ಲಿಂಕ್ ಆಗಲಿದ್ದು, ಆಧಾರ್ -ಪ್ಯಾನ್ ಎರಡರಲ್ಲೂ ನೀಡಿರುವ ಮಾಹಿತಿಯೂ ಸರಿಯಿದ್ದ ಪಕ್ಷದಲ್ಲಿ, ಇಲ್ಲವಾದರೆ ಎರಡರಲ್ಲಿ ಯಾವುದರಲ್ಲದರೂ ನಿಮ್ಮ ಮಾಹಿತಿಗಳನನ್ನು ಬದಲಾಯಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
the Unique Identification Authority of India(UIDAI) said that linking of Aadhaar to Permanent Account Number (PAN) is still mandatory. to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot