ದೀಪಾವಳಿಯಂದು ಕೈ ಸೇರಿದ ಜಿಯೋ ಫೋನ್ ಬ್ಲಾಸ್ಟ್: ಕಾರಣ ತಿಳಿಯಿರಿ, ನೀವು ಎಚ್ಚರವಹಿಸಿ.!
ರಿಲಯನ್ಸ್ ಜಿಯೋ ಫೋನ್ ಕಾಶ್ಮೀರದಲ್ಲಿ ಸ್ಟೋಟಗೊಂಡಿದೆ ಎನ್ನಲಾಗಿದೆ. ಈ ಹಿಂದೆ ಸ್ಯಾಮ್‌ಸಂಗ್, ಶಿಯೋಮಿ ಮತ್ತು ಆಪಲ್ ಫೋನ್‌ಗಳು ಇದೇ ಮಾದರಿಯಲ್ಲಿ ಸ್ಪೋಟಗೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.
ದೀಪಾವಳಿಯ ಅಂಗವಾಗಿ ಗ್ರಾಹಕರ ಕೈ ಸೇರಿದ್ದ ರಿಲಯನ್ಸ್ ಜಿಯೋ ಫೋನ್ ದೀಪಾವಳಿಯಂದೆ ಪಟಾಕಿ ಮಾದರಿಯಲ್ಲಿ ಢಮಾರ್ ಆಗಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ಫೋನ್‌ಗಳು ಬ್ಲಾಸ್ಟ್ ಆಗುತ್ತಿದ್ದು, ಇದೇ ಸಾಲಿಗೆ ಜಿಯೋ ಸಹ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಓದಿರಿ: ವಾಟ್ಸ್‌ಆಪ್ ಬಿಟ್ಟು ಬೇರೆ ಯಾಕೆ?: ಬರುತ್ತಿದೆ ಗ್ರೂಪ್ ಆಡಿಯೋ-ವಿಡಿಯೋ ಕಾಲಿಂಗ್
ರಿಲಯನ್ಸ್ ಜಿಯೋ ಫೋನ್ ಕಾಶ್ಮೀರದಲ್ಲಿ ಸ್ಟೋಟಗೊಂಡಿದೆ ಎನ್ನಲಾಗಿದೆ. ಈ ಹಿಂದೆ ಸ್ಯಾಮ್‌ಸಂಗ್, ಶಿಯೋಮಿ ಮತ್ತು ಆಪಲ್ ಫೋನ್‌ಗಳು ಇದೇ ಮಾದರಿಯಲ್ಲಿ ಸ್ಪೋಟಗೊಂಡಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಜಿಯೋ ಫೋನ್ ಬ್ಯಾಟರಿ ಬ್ಲಾಸ್ಟ್:
ಕಾಶ್ಮೀರದಲ್ಲಿ ಜಿಯೋ ಫೋನ್ ಬ್ಲಾಸ್ಟ್ ಗೊಂಡಿರುವುದು ಸತ್ಯ ಎನ್ನಲಾಗಿದ್ದು, ಬ್ಲಾಸ್ಟ್ ಆಗಿರುವ ಚಿತ್ರಗಳು ಸಹ ಲಭ್ಯವಾಗಿದೆ. ಅಲ್ಲದೇ ಫೋನಿನ ಬ್ಯಾಟರಿಯೇ ಬ್ಲಾಸ್ಟ್ ಆಗಿರುವುದು ಎನ್ನಲಾಗಿದೆ.

ಹಿಂಭಾಗ ಸಂಫೂರ್ಣ ನಾಶ:
ಜಿಯೋ ಫೋನ್ ಸ್ಪೋಟಗೊಂಡು ಹಿಂಭಾಗದಲ್ಲಿ ಬ್ಯಾಕ್ ಕವರ್ ಸೇರಿದಂತೆ ಬ್ಯಾಟರಿಯೂ ನಾಶವಾಗಿದ್ದು, ಪ್ಲಾಸ್ಟಿಕ್ ಸಂಫೂರ್ಣವಾಗಿ ಕರಗಿ ಹೋಗಿದೆ ಎನ್ನಲಾಗಿದೆ.

ಸ್ಪೋಟಕ್ಕೆ ಬ್ಯಾಟರಿ ಕಾರಣ:
ಬ್ಯಾಟರಿ ತೊಂದರೆಯಿಂದಲೇ ಈ ಫೋನ್ ಸ್ಪೋಟಗೊಂಡಿದೆ ಎನ್ನಲಾಗಿದೆ. ಚಾರ್ಜಿಂಗ್ ಸಂದರ್ಭದಲ್ಲಿ ಈ ಘಟನೆ ನಡೆದಿರುವ ಸಾಧ್ಯತೆ ಇದ್ದು, ಚಾರ್ಜಿಂಗ್ ಕೇಬಲ್ ಸಹ ಸುಟ್ಟು ಹೋಗಿದೆ ಎನ್ನಲಾಗಿದೆ.


ಜಿಯೋ ಲೈಪ್ ಫೋನ್ ಸಹ ಬ್ಲಾಸ್ಟ್ ಆಗಿತ್ತು:
ಈ ಹಿಂದೆ ಜಿಯೋ ಬಿಡುಗಡೆ ಮಾಡುತ್ತಿರುವ ಲೈಫ್ ಫೋನ್ ಸಹ ಬ್ಲಾಸ್ಟ್ ಆಗಿತ್ತು ಎನ್ನಲಾಗಿದೆ . ಈ ಹಿನ್ನಲೆಯಲ್ಲಿ ಜಿಯೋ ಫೋನ್ ಸಹ ಸ್ಪೋಟಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಚಾರ್ಜ್ ಮಾಡುವ ಸಂದರ್ಭದಲ್ಲಿ ಎಚ್ಚರ:
ಜಿಯೋ ಫೋನ್ ಚಾರ್ಜ್ ಮಾಡುವ ಸಂದರ್ಭದಲ್ಲಿ ಎಚ್ಚರ ವಹಿಸುವುದು ಎಚ್ಚರ ಎನ್ನಲಾಗಿದೆ. ಚಾರ್ಜ್ ಗೆ ಹಾಕುವ ಸಂದರ್ಭದಲ್ಲಿ ಹೆಚ್ಚು ಬಿಸಿಯಾದರೆ ಚಾರ್ಜ್ ನಿಂದ ತೆಗೆಯುವುದು ಸೂಕ್ತ ಎನ್ನಲಾಗಿದೆ.


Click it and Unblock the Notifications








