ವಾಟ್ಸ್‌ಆಪ್ ಬಿಟ್ಟು ಬೇರೆ ಯಾಕೆ?: ಬರುತ್ತಿದೆ ಗ್ರೂಪ್ ಆಡಿಯೋ-ವಿಡಿಯೋ ಕಾಲಿಂಗ್

ಈಗಾಗಲೇ ವಿಡಿಯೋ ಕಾಲ್ ಸೇವೆಯನ್ನು ನೀಡಿರುವ ವಾಟ್ಸ್‌ಆಪ್ ನಿಂದಾಗಿ ಅನೇಖ ವಿಡಿಯೋ ಕಾಲಿಂಗ್ ಆಪ್‌ಗಳ ಬಳಕೆಯೂ ಕಡಿಮೆಯಾಗಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ತನ್ನ ವಿಡಿಯೋ ಕಾಲಿಂಗ್‌ಗೆ ಮತ್ತೊಂದು ಹೊಸ ಆಯ್ಕೆಯನ್ನು ಸೇರಿಸಲು ಮುಂದಾಗಿದೆ.

|

ವಿಶ್ವದಲ್ಲೇ ಅತೀ ಹೆಚ್ಚು ಬಳಕೆ ಮಾಡಿಕೊಳ್ಳುವ ಸೋಶಿಯಲ್ ಮೇಸೆಜಿಂಗ್ ಆಪ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಮತ್ತೊಂದು ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಈ ಆಯ್ಕೆಯಿಂದ ಗ್ರಾಹಕರು ಬೇರೆ ಆಪ್‌ಗಳ ಬಳಕೆಯನ್ನು ನಿಲ್ಲಿಸುವ ಸಾಧ್ಯತೆ ಇದೆ.

ವಾಟ್ಸ್‌ಆಪ್ ಬಿಟ್ಟು ಬೇರೆ ಯಾಕೆ?: ಬರುತ್ತಿದೆ ಗ್ರೂಪ್ ಆಡಿಯೋ-ವಿಡಿಯೋ ಕಾಲಿಂಗ್

ಓದಿರಿ: ರೂ.6000ಕ್ಕೆ ದೊರೆಯುತ್ತಿದೆ ನೋಕಿಯಾ 2 ಸ್ಮಾರ್ಟ್‌ಫೋನ್..!

ಈಗಾಗಲೇ ವಿಡಿಯೋ ಕಾಲ್ ಸೇವೆಯನ್ನು ನೀಡಿರುವ ವಾಟ್ಸ್‌ಆಪ್ ನಿಂದಾಗಿ ಅನೇಕ ವಿಡಿಯೋ ಕಾಲಿಂಗ್ ಆಪ್‌ಗಳ ಬಳಕೆಯೂ ಕಡಿಮೆಯಾಗಿದೆ. ಇದೇ ಮಾದರಿಯಲ್ಲಿ ವಾಟ್ಸ್‌ಆಪ್ ತನ್ನ ವಿಡಿಯೋ ಕಾಲಿಂಗ್‌ಗೆ ಮತ್ತೊಂದು ಹೊಸ ಆಯ್ಕೆಯನ್ನು ಸೇರಿಸಲು ಮುಂದಾಗಿದೆ.

ಗ್ರೂಪ್ ವಿಡಿಯೋ ಕಾಲಿಂಗ್:

ಗ್ರೂಪ್ ವಿಡಿಯೋ ಕಾಲಿಂಗ್:

ಈಗಾಗಲೇ ಭಾರತದಲ್ಲಿ ಹೈ ಸ್ಪೀಡ್ ಡೇಟಾ ಬಳಕೆಗೆ ದೊರೆಯುತ್ತಿರುವ ಹಿನ್ನಲೆಯಲ್ಲಿ ಆಡಿಯೋ ಬದಲಿಗೆ ವಿಡಿಯೋ ಕಾಲಿಂಗ್ ಮಾಡುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲಿಂಗ್ ಸೇವೆ ಸೇರಿಸಲಿದೆ.

ಗ್ರೂಪ್ ಆಡಿಯೋ ಕಾಲಿಂಗ್:

ಗ್ರೂಪ್ ಆಡಿಯೋ ಕಾಲಿಂಗ್:

ಗ್ರೂಪ್ ವಿಡಿಯೋ ಕಾಲ್ ಮಾಡುವ ಮಾದರಿಯಲ್ಲಿ, ವಾಟ್ಸ್‌ಆಪ್ ಗ್ರೂಪ್ ಆಡಿಯೋ ಕಾಲಿಂಗ್ ಸಹ ಮಾಡಬಹುದಾಗಿದೆ ಎನ್ನಲಾಗಿದೆ. ಇದು ಕಾನ್ಫರೆನ್ಸ ಕಾಲ್ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ.

ಗ್ರೂಪ್ ವಿಡಿಯೋ ಕಾಲಿಂಗ್‌ಗೆ ಹೆಚ್ಚಿನ ಬೇಡಿಕೆ:

ಗ್ರೂಪ್ ವಿಡಿಯೋ ಕಾಲಿಂಗ್‌ಗೆ ಹೆಚ್ಚಿನ ಬೇಡಿಕೆ:

ಈಗಾಗಲೇ ಸ್ಕೈಪ್‌ ಲೈಟ್‌ ಆಪ್‌ನಲ್ಲಿ ಈ ಗ್ರೂಪ್‌ ವಿಡಿಯೋ ಕಾಲಿಂಗ್ ಆಯ್ಕೆಯನ್ನು ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ತನ್ನ ಬಳಕೆದಾರರ ಬೇಡಿಕೆಯಾಗಿದ್ದ ಗ್ರೂಪ್ ವಿಡಿಯೋ ಕಾಲಿಂಗ್ ಅನ್ನು ವಾಟ್ಸ್‌ಆಪ್ ಬಿಡುಗಡೆ ಮಾಡುತ್ತಿದೆ.

ಬಿಲಿಯನ್ ಬಳಕೆದಾರರು:

ಬಿಲಿಯನ್ ಬಳಕೆದಾರರು:

ಈಗಾಗಲೇ ವಾಟ್ಸ್‌ಆಪ್ ಬಳಕೆ ಮಾಡುತ್ತಿರುವವರ ಸಂಖ್ಯೆ ಬೆಳಯುತ್ತಾ ಸಾಗುತ್ತಿದ್ದು, ಸರಿ ಸುಮಾರು ಒಂದು ಬಿಲಿಯನ್ ಬಳಕೆದಾರರು ವಿಶ್ವದಾದ್ಯಂತ ವಾಟ್ಸ್‌ಆಪ್ ಬಳಕೆ ಮಾಡುತ್ತಿದ್ದಾರೆ.

ಸದ್ಯ ಪರೀಕ್ಷಾಹಂತದಲ್ಲಿದೆ:

ಸದ್ಯ ಪರೀಕ್ಷಾಹಂತದಲ್ಲಿದೆ:

ವಾಟ್ಸ್‌ಆಪ್ ಹೊಸದಾಗಿ ಬಿಡುಗಡೆ ಮಾಡಲು ಮುಂದಾಗಿರುವ ಆಯ್ಕೆಯ ಪರೀಕ್ಷೆ ನೆಡೆಯುತ್ತಿದ್ದು, ಶೀಘ್ರವೇ ಈ ಆಯ್ಕೆಯು ಬಳಕೆದಾರರಿಗೆ ಲಭ್ಯವಿರಲಿದೆ ಎನ್ನಲಾಗಿದೆ.

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!
ಐಫೋನ್ ಬಳಕೆದಾರರಿಗೆ ಮೊದಲು:

ಐಫೋನ್ ಬಳಕೆದಾರರಿಗೆ ಮೊದಲು:

ಈ ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲಿಂಗ್ ಆಯ್ಕೆಯೂ ಮೊದಲಿಗೆ ಐಫೋನ್ ಬಳಕೆದಾರರಿಗೆ ದೊರೆಯಲಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗೆದ ದೊರೆಯಲಿದೆ.

Best Mobiles in India

English summary
WhatsApp Group Voice, Video Calls Coming Soon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X