ಇಂದಿನಿಂದ BSNL 'ರಿಪಬ್ಲಿಕ್ ಡೇ' ಆಫರ್ ಶುರು!!
ಭಾರತದಲ್ಲಿ ಜಿಯೋ ಸಿಮ್ ಆಗಮನದ ನಂತರ ದೇಶದ ನೆಟವರ್ಕ ವಲಯ ಹೊಸ ತಿರುವು ಪಡೆದುಕೊಂಡಿತು. ಜಿಯೋನ ಹಾಗೇ ಉಳಿದ ಇತರೆ ನೆಟವರ್ಕ್ ಸಂಸ್ಥೆಗಳು ಸಹ ಗ್ರಾಹಕರಿಗೆ ಭಾರಿ ಆಫರ್ ಗಳನ್ನು ನೀಡಲಾರಂಭಿಸುದವು. ಪ್ರಸ್ತುತ ತೀವ್ರ ಪೈಪೋಟಿ ಇದ್ದು, ಗ್ರಾಹಕರನ್ನು ಆಕರ್ಷಿಸಲು ಆಫರ್‌ಗಳನ್ನು ಪರಿಚಯಿಸುತ್ತಲೆ ಬಂದಿವೆ. ಇದಕ್ಕೆ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (BSNL)ಸಹ ಹೊರತಾಗಿಲ್ಲ.

ಹೌದು, ಗಣರಾಜ್ಯೋತ್ಸವದ ಅಂಗವಾಗಿ ಬಿಎಸ್ಎನ್ಎಲ್ ಸಂಸ್ಥೆಯು ತನ್ನ ಬಳಕೆದಾರರಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದ್ದು, 269ರೂ.ಗಳ ಭರ್ಜರಿ ಆಫರ್ ಇದಾಗಿದೆ. ಇನ್ನೂ ಈ ಹೊಸ ಆಫರ್ ಜನವರಿ 26 ಗಣರಾಜ್ಯೋತ್ಸವದ ದಿನದಿಂದ ಆರಂಭವಾಗಿ ಜನವರಿ 31ರ ವರೆಗೂ ಗ್ರಾಹಕರಿಗೆ ಲಭ್ಯವಿರಲಿದೆ. ಇದೊಂದು ಸಿಮೀತ ಅವಧಿಯ ಆಫರ್ ಆಗಿದ್ದು, ಕೇವಲ ಐದು ದಿನಗಳವರೆಗೆ ಮಾತ್ರ ಲಭ್ಯವಿರಲಿದೆ.

ಬಿಎಸ್ಎನ್ಎಲ್‌ನ ವಿಶೇಷ 269ರೂ.ಗಳ ಕೊಡುಗೆಯಲ್ಲಿ ಪ್ರತೀ ದಿನ 2.6GB ಡೇಟಾ, 2600 ನಿಮಿಷದ ಉಚಿತ ಕರೆಗಳು, 260 ಎಸ್‌ಎಮ್‌ಎಸ್‌ಗಳು ಗ್ರಾಹಕರಿಗೆ ದೊರೆಯಲಿವೆ ಮತ್ತು ಈ ಹೊಸ 269 ರೂ.ಗಳ ಕೊಡುಗೆಯು 26 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎಂದು ಬಿಎಸ್ಎನ್ಎಲ್ ಜಾಹಿರಾತಿನಲ್ಲಿ ತಿಳಿಸಿದೆ. ಇನ್ನೂ ಈ ವಿಶೇಷ ಕೊಡುಗೆಯು ಬಿಎಸ್ಎನ್ಎಲ್ ಪ್ರಿಪೇಡ್ ಗ್ರಾಹಕರಿಗೆ ಮಾತ್ರ ಲಭ್ಯ ಎಂದು ಸಂಸ್ಥೆ ತಿಳಿಸಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ಭಾರತೀಯ ಬಿಎಸ್ಎನ್ಎಲ್ ಸಂಸ್ಥೆಯು ಈ ವಿಶೇಷ 269 ಪ್ಯಾಕ್ ಅನ್ನು ಬಿಡುಗಡೆ ಮಾಡಿದ್ದು, ಇದರ ಇನ್ನೊಂದು ವಿಶೇಷವೆಂದರೆ 26.!! ಹೌದು, ಈ ಆಫರ್ ನ ದರದಲ್ಲಿಯೂ 26 (269ರೂ.ಗಳು)ಇದೆ ಮತ್ತು 2.6GB ಡೇಟಾ, 2600 ನಿಮಿಷದ ಉಚಿತ ಕರೆಗಳು, 260 ಎಸ್‌ಎಮ್‌ಎಸ್‌ಗಳು ಮತ್ತು 26 ದಿನಗಳ ವ್ಯಾಲಿಡಿಟಿ ನೀಡಿರುವುದು. ಹಾಗಾದರೇ ಇನ್ಯಾಕೆ ತಡ, ಕೊಡುಗೆ ಮುಗಿಯುವುದರೊಳಗೆ ಇದರ ಲಾಭ ಪಡೆಯಿರಿ.


Click it and Unblock the Notifications








