ರೂ ನಾಲ್ಕು ಲಕ್ಷ ಬೆಲೆಯ ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ತೊರೀನೊ ಲ್ಯಾಂಬೊರ್ಗಿನಿ 88 ಸೂಪರ್ ಪ್ರೀಮಿಯಮ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದ್ದು ಟೊರಿನೊ ಲ್ಯಾಂಬೊರ್ಗಿನಿ ಈ ಫೋನ್ ಅನ್ನು ಬಿಡುಗಡೆ ಮಾಡಿದೆ. ದುಬಾರಿ ಕಾರು ತಯಾರು ಮಾಡುವ ಕಂಪೆನಿ ಲ್ಯಾಂಬೊರ್ಗಿನಿ ಸ್ಮಾರ್ಟ್‌ಫೋನ್ ತಯಾರಿಕೆಗೆ ತೊಡಗಿದ್ದು ಫೋನ್ ಕ್ಷೇತ್ರದಲ್ಲಿ ಈ ಫೋನ್ ಕಮಾಲು ಮಾಡುವುದು ನಿಜವಾಗಿದೆ.
ಇದನ್ನೂ ಓದಿ: ಸ್ಮಾರ್ಟ್‌ಫೋನ್ ಸುರಕ್ಷತೆಗೆ ಟಾಪ್ 10 ಟಿಪ್ಸ್‌ಗಳು
ಬನ್ನಿ ಇಂದಿನ ಲೇಖನದಲ್ಲಿ ಈ ಅತಿವಿಶಿಷ್ಟ ದುಬಾರಿ ಫೋನ್ ಲ್ಯಾಂಬೊರ್ಗಿನಿ ಬಗ್ಗೆ ಇನ್ನಷ್ಟು ಮಾಹಿತಿ ಮತ್ತು ಅದ್ಭುತ ಫೋಟೋಗಳನ್ನು ನೋಡೋಣ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಲ್ಯಾಂಬೊರ್ಗಿನಿ ತೌರಿ ಸೂಪರ್ ಪ್ರೀಮಿಯಮ್ ಆಂಡ್ರಾಯ್ಡ್ ಫೋನ್ ಆಗಿದೆ. ಸಂಸ್ಥೆ ಸ್ಥಾಪಕರು ಫೆರ್ರಿಕೊ ಲ್ಯಾಂಬೊರ್ಗಿನಿಯಾಗಿದ್ದಾರೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಎಂಟು ಬಣ್ಣಗಳಲ್ಲಿ ಬಂದಿರುವ ಈ ಫೋನ್ ಸೀಮಿತ ಉತ್ಪಾದನೆಯನ್ನು ಹೊಂದಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಮೆಟಲ್ ಮತ್ತು ಚರ್ಮದ ಆವೃತ್ತಿಗಳಲ್ಲಿ ಈ ಫೋನ್ ಬಂದಿದ್ದು ವಿವಿಧ ಬಣ್ಣಗಳಲ್ಲಿ ಈ ಫೋನ್ ಸ್ಮಾರ್ಟ್‌ಫೋನ್ ಪ್ರಿಯರ ಕೈ ಸೇರಲಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಇದರ ಕ್ಯಾಮೆರಾ ಲ್ಯಾಂಬೊರ್ಗಿನಿ ಕಾರು ಡೋರ್ ತೆರೆದಂತೆ ಓಪನ್ ಆಗಲಿದ್ದು ಇದರ ಕೇಸ್ ಜೊತೆಗೆ, ಹೆಡ್‌ಫೋನ್ಸ್, ಯುಎಸ್‌ಬಿ ಚಾರ್ಜರ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
250 ಗ್ರಾಮ್ ಉಳ್ಳ ಈ ಫೋನ್, ನಿಮ್ಮ ಪಾಕೆಟ್‌ಗೆ ಸರಿಹೊಂದುವುದು ಖಚಿತವಾಗಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಇದರ ಚರ್ಮದ ಆವೃತ್ತಿ ಚಿನ್ನದಿಂದ ಮಾಡಿದ ಆಕಾರ ನಿಜಕ್ಕೂ ಅತ್ಯುತ್ತಮ ನೋಟವನ್ನು ಫೋನ್‌ಗೆ ನೀಡಲಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಫೋನ್‌ನ ಮುಂಭಾಗದಲ್ಲಿ 5 ಇಂಚಿನ ಕಸ್ಟಮ್ ಶಟರ್ ಮತ್ತು ಸ್ಕ್ರಾಚ್ ಪ್ರೂಫ್ ಗ್ಲಾಸ್ ಅನ್ನು ನೋಡಬಹುದಾಗಿದ್ದು ಡಿಸ್‌ಪ್ಲೇ ಪೂರ್ಣ ಎಚ್‌ಡಿ ಐಪಿಎಸ್ ಪ್ಯಾನೆಲ್‌ನೊಂದಿಗೆ ಬಂದಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಫೋನ್‌ನ ಬಲಮೂಲೆಯಲ್ಲಿ ಮೆಟಲ್ ಫ್ಲಾಪ್ ಅನ್ನು ಹೊಂದಿದ್ದು ಇಲ್ಲಿ ನಿಮಗೆ ಎರಡು ಸಿಮ್ ಸ್ಲಾಟ್ ಕಾಣಬಹುದು ಜೊತೆಗೆ ಫೋನ್‌ನಲ್ಲಿ ಪ್ಲಾಸ್ಟಿಕ್ ಬಟನ್ ಇದ್ದು ಧ್ವನಿ ನಿಯಂತ್ರಣವನ್ನು ಈ ಬಟನ್ ಮಾಡಲಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಇನ್ನು ಫೋನ್‌ನ ಹಿಂಭಾಗದಲ್ಲಿ ಸ್ಟಿಚ್ ಮಾಡಿರುವ ಲೆದರ್ ಕೇಸ್ ಅನ್ನು ನಿಮಗೆ ಕಾಣಬಹುದಾಗಿದ್ದು 20 ಎಮ್‌ಪಿ ಕ್ಯಾಮೆರಾ ಮಾಡ್ಯುಲ್, ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಮತ್ತು ಎರಡು ಸ್ಪೀಕರ್ ಗ್ರಿಲ್‌ಗಳನ್ನು ಕಾಣಬಹುದಾಗಿದೆ.

ಲ್ಯಾಂಬೋರ್ಗಿನಿ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಫೋನ್ 2.26GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಮತ್ತು 3ಜಿಬಿ RAM ಅನ್ನು ಒಳಗೊಂಡಿದೆ.


Click it and Unblock the Notifications








