ಕೆಟ್ಟ ಸೇವೆ ನೀಡಿದ್ದಕ್ಕೆ ಚೀನಾ ಗ್ರಾಹಕರಲ್ಲಿ ಕ್ಷಮೆಯಾಚಿಸಿದ ಸ್ಯಾಮ್‌ಸಂಗ್‌

Posted By:

ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ಕಂಪೆನಿ ಸ್ಯಾಮ್‌ಸಂಗ್‌ ಚೀನಾ ಮಾರುಕಟ್ಟೆಗೆ ಕಳಪೆ ಗುಣಮಟ್ಟದ ಸ್ಮಾರ್ಟ್‌‌ಫೋನ್‌ ಕಳುಹಿಸಿದ್ದಕ್ಕೆ ಚೀನಾ ಜನತೆಯಲ್ಲಿ ಕ್ಷಮೆಯಾಚಿಸಿದೆ.ಈ ಸಂಬಂಧ ಚೀನಾ ಸ್ಯಾಮ್‌ಸಂಗ್‌ ವೆಬ್‌ಸೈಟ್‌ ಸ್ಪಷ್ಟೀಕರಣ ನೀಡಿದ್ದು ಮುಂದಿನ ದಿನದಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌‌ ಉತ್ಪಾದಿಸಿ ಚೀನಾದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ.

ಚೀನಾದ ಸಿಎನ್‌ಟಿ (China Network Television) ವಾಹಿನಿ ಕಳೆದ ಸೋಮವಾರ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನಿನ ಸಮಸ್ಯೆಗಳನ್ನು ತೋರಿಸುವ 25 ನಿಮಿಷಗಳ ಸುದ್ದಿಯನ್ನು ಪ್ರಕಟಿಸಿತ್ತು.ಸುದ್ದಿಯಲ್ಲಿ ಸ್ಯಾಮ್‌ಸಂಗ್‌ ಗ್ರಾಹಕರು ನೀಡಿದ ಸಮಸ್ಯೆಗೆ ಯಾವ ರೀತಿ ಕೆಟ್ಟದ್ದಾಗಿ ಸೇವೆ ನೀಡುತ್ತಿದೆ ಎನ್ನುವುದನ್ನುವಿವರವಾಗಿ ತೋರಿಸಿದ್ದರು. ಈ ಸುದ್ದಿ ಪ್ರಸಾರವಾದ ಎರಡೇ ದಿನದಲ್ಲಿ ಸ್ಯಾಮ್‌ಸಂಗ್‌ ಚೀನಾ ವೆಬ್‌ಸೈಟ್‌ ಸ್ಪಷ್ಟೀಕರಣ ನೀಡಿ, ಸಮಸ್ಯೆಯಾಗಿರುವ ಸ್ಮಾರ್ಟ್‌ಫೋನ್‌ ಬದಲಾಯಿಸಿ ಹೊಸ ಸ್ಮಾರ್ಟ್‌ಫೋನನ್ನು ನೀಡಲಿದ್ದೇವೆ ಎಂದು ಹೇಳಿದೆ. (ಸ್ಪಷ್ಟೀಕರಣ ಚೀನಾ ಭಾಷೆಯಲ್ಲಿದ್ದು ವೆಬ್‌ಸೈಟ್‌ ಓಪನ್‌ ಮಾಡಿ, ಪುಟದ ಮೇಲೆ ಬಲಗಡೆಯ ಮೌಸ್‌ ಬಟನ್‌ ಕ್ಲಿಕ್‌ ಮಾಡಿ translate english ಆಯ್ಕೆಯನ್ನು ಆರಿಸಿ ಓದಬಹುದು)

 ಕೆಟ್ಟ ಸೇವೆ ನೀಡಿದ್ದಕ್ಕೆ ಚೀನಾ ಗ್ರಾಹಕರಲ್ಲಿ ಕ್ಷಮೆಯಾಚಿಸಿದ ಸ್ಯಾಮ್‌ಸಂಗ್‌

ಚೀನಾ ನಿಯಮದ ಪ್ರಕಾರ ಸ್ಯಾಮ್‌ಸಂಗ್‌ ತನ್ನ ಹ್ಯಾಂಡ್‌ ಸೆಟ್‌ಗಳಲ್ಲಿ ಯಾವುದೇ ಸಮಸ್ಯೆ ಸೃಷ್ಟಿಯಾದಲ್ಲಿ ಅದನ್ನು ಉಚಿತವಾಗಿ ರಿಪೇರಿ ಮಾಡಿ ಕೊಡುತ್ತೇವೆ ಎಂದು ಚೀನಾ ಸರ್ಕಾರಕ್ಕೆ ಹೇಳಿತ್ತು. ಆದರೆ ಈ ಹ್ಯಾಂಡ್‌ ಸೆಟ್‌ಗಳು ಸರ್ವಿಸ್‌ ಸೆಂಟರ್‌ನಲ್ಲಿ ರಿಪೇರಿಯಾದರೂ ಮತ್ತೆ ಮತ್ತೇ ಹಾಳಾಗುತಿತ್ತು. ಸ್ಯಾಮ್‌ಸಂಗ್‌ ಈ ಕೆಟ್ಟ ಸೇವೆಗೆ ರೋಸಿ ಹೋದ ಗ್ರಾಹಕರು ವಾಹಿನಿಯಲ್ಲಿ ದೂರು ಹೇಳಿದ್ದರು.

ಚೀನಾದ ವಾಹಿನಿ ಈ ರೀತಿ ಸ್ಮಾರ್ಟ್‌ಫೋನ್‌ ಕಂಪೆನಿಗಳ ಗುಣಮಟ್ಟವನ್ನು ದೂರುವುದು ಇದು ಹೊಸದೇನಲ್ಲ.ಈ ಹಿಂದೆ ಮಾರ್ಚ್‌ ತಿಂಗಳಿನಲ್ಲಿ ಆಪಲ್‌ ಕಂಪೆನಿ ಚೀನಾದ ಮಾರುಕಟ್ಟೆ ನೀತಿ ಮತ್ತು ಉಳಿದ ದೇಶಗಳಲ್ಲಿ ಅನುಸರಿಸುತ್ತಿರುವ ನೀತಿಯನ್ನು ಟೀಕೆ ಮಾಡಿ ಸುದ್ದಿಯನ್ನು ಪ್ರಸಾರ ಮಾಡಿತ್ತು. ಸುದ್ದಿ ಪ್ರಸಾರವಾದ ಬಳಿಕ ಆಪಲ್‌ನ ಸಿಇಒ ಟಿಮ್‌ ಕುಕ್‌‌ ಕ್ಷಮೆಯಾಚಿಸಿದ್ದರು.

ಇದನ್ನೂ ಓದಿ: ಚೀನಾದಲ್ಲಿ ವಿಶ್ವದ ದೊಡ್ಡ ಮೊಬೈಲ್‌ ಫ್ಯಾಕ್ಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot