ಸದ್ದಿಲ್ಲದೇ Samsung Galaxy A06 ಲಾಂಚ್; ಅದೂ ಕಡಿಮೆ ಬೆಲೆಗೆ!
ದಕ್ಷಿಣ ಕೊರಿಯಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ಬ್ರಾಂಡ್ ಸ್ಯಾಮ್‌ಸಂಗ್ (Samsung) ಸದ್ದಿಲ್ಲದೆ ತನ್ನ ಹೊಸ Samsung Galaxy A06 ಫೋನನ್ನು ಬಿಡುಗಡೆ ಮಾಡಿದೆ. ಸ್ಯಾಮ್‌ಸಂಗ್ ಪ್ರಿಯರಿಗೆ ಇದೊಂದು ಸಿಹಿಸುದ್ದಿಯಾಗಿದ್ದು, ಈ ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಇದು ಉತ್ತಮ ಗುಣಮಟ್ಟದ ವಿನೂತನ ಫೀಚರ್ಸ್‌ಗಳನ್ನು ಒಳಗೊಂಡಿದೆ. ಈ ಫೋನ್ ಡಿಸೈನ್ ಈಗಾಗಲೇ ಬಿಡುಗಡೆಯಾಗಿರುವ Samsung Galaxy A05 ನಂತೆಯೇ ಇದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ, ಆಫರ್‌ಗಳು ಮತ್ತು ಇನ್ನಿತರ ಫೀಚರ್ಸ್‌ಗಳನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ.
ಸ್ಯಾಮ್‌ಸಂಗ್‌ನ ಈ ಹೊಸ ಗ್ಯಾಲಕ್ಸಿ A06 (Samsung Galaxy A06) ಫೋನ್ 6.7 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಹೆಲಿಯೊ G85 ಚಿಪ್‌ಸೆಟ್, 5000mAh ಬ್ಯಾಟರಿ, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಮತ್ತು 50MP ಪ್ರಾಥಮಿಕ ಕ್ಯಾಮೆರಾ, 4GB RAM ಮತ್ತು 64GB ಸ್ಟೋರೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಬೆಲೆ ಮತ್ತು ಲಭ್ಯತೆ
4GB RAM ಮತ್ತು 64GB ಸ್ಟೋರೇಜ್ ಬೆಲೆ = 10,600 ರೂ.
6GB RAM ಮತ್ತು 128GB ಸ್ಟೋರೆಜ್ ಬೆಲೆ = 12,500 ರೂ.
ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಸ್ಮಾರ್ಟ್‌ಫೋನ್ ಅನ್ನು ವಿಯೆಟ್ನಾಂನಲ್ಲಿ ಎರಡು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಫೋನ್‌ನ ಬೇಸ್ ಮಾಡೆಲ್, 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯ ಬೆಲೆ 10,600 ರೂ. ಇದೆ. 6GB RAM ಮತ್ತು 128GB ಸ್ಟೋರೆಜ್‌ನ ಬೆಲೆ 12,500 ರೂ. ಆಗಿದೆ. ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನಿನ ಮಾರಾಟವು ಮುಂದಿನ ವಾರದಿಂದ ಪ್ರಾರಂಭವಾಗಲಿದೆ.
ಈ ಸುದ್ದಿ ಓದಿದ್ದೀರಾ?: Samsung Galaxy F14: ಕೇವಲ 9 ಸಾವಿರಕ್ಕೆ 5G ಫೋನ್.. ಅದೂ ಸ್ಯಾಮ್‌ಸಂಗ್‌ನಿಂದ!
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನಿನ ಫೀಚರ್ಸ್
ಡಿಸ್ಪ್ಲೇ: ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಮೊಬೈಲ್‌ನಲ್ಲಿ ದೊಡ್ಡ 6.7 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಒದಗಿಸಿದೆ. ಇದು 90Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ನೀವು ಕಡಿಮೆ ಬೆಲೆಯಲ್ಲಿ ಉತ್ತಮ ಅನುಭವವನ್ನು ಪಡೆಯಬಹುದು.
ಪ್ರೊಸೆಸರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೊನ್ MediaTek Helio G85 ಚಿಪ್ಸೆಟ್ ಅನ್ನು ಹೊಂದಿದೆ. ಇದು 2GHz ನ ಹೆಚ್ಚಿನ ಗಡಿಯಾರದ ವೇಗವನ್ನು ಒದಗಿಸುತ್ತದೆ. ನೀವು ಸುಗಮ ಕಾರ್ಯಾಚರಣೆ ಮತ್ತು ಬಹುಕಾರ್ಯಕ ಸೌಲಭ್ಯವನ್ನು ಪಡೆಯಬಹುದು.
ಸ್ಟೋರೇಜ್: ಕಂಪನಿಯು 6 GB RAM ಮತ್ತು 128 GB ವರೆಗಿನ ಇಂಟರ್ನಲ್ ಸ್ಟೋರೇಜ್ ಸೌಲಭ್ಯವನ್ನು ಒದಗಿಸಿದೆ. ಬೆಲೆಯನ್ನು ನೋಡಿದರೆ, ಬಜೆಟ್ ಬೆಲೆಯಲ್ಲಿ ಹೊಸ ಫೋನ್ ಖರೀದಿಸುವ ಗ್ರಾಹಕರಿಗೆ ಇಷ್ಟು ಸ್ಟೋರೇಜ್ ಉತ್ತಮ ಆಯ್ಕೆಯಾಗಿದೆ.
ಓಎಸ್: ಆಪರೇಟಿಂಗ್ ಸಿಸ್ಟಮ್‌ಗೆ ಸಂಬಂಧಿಸಿದಂತೆ, ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಸ್ಮಾರ್ಟ್‌ಫೋನ್ ಅನ್ನು ಇತ್ತೀಚಿನ ಆಂಡ್ರಾಯ್ಡ್ 14 ನೊಂದಿಗೆ ಬಿಡುಗಡೆ ಮಾಡಲಾಗಿದೆ.

ಕ್ಯಾಮೆರಾ: ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ ಮತ್ತು ಇನ್ನೊಂದು ದ್ವಿತೀಯ ಸಂವೇದಕವನ್ನು ಹೊಂದಿದೆ.
ಬ್ಯಾಟರಿ: ಈ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಿಂದಾಗಿ ನೀವು ದೀರ್ಘ ಬ್ಯಾಕಪ್ ಪಡೆಯಬಹುದು. ಇದನ್ನು ಚಾರ್ಜ್ ಮಾಡಲು, ಕಂಪನಿಯು 25W ವೇಗದ ಚಾರ್ಜಿಂಗ್ ಬೆಂಬಲದ ಸೌಲಭ್ಯವನ್ನು ಒದಗಿಸಿದೆ. ಈ ಫೋನನ್ನು ತ್ವರಿತವಾಗಿ ಚಾರ್ಜ್ ಮಾಡಬಹುದು.
ಇತರೆ ಫೋಚರ್ಸ್: ಇತರೆ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಈ ಸ್ಮಾರ್ಟ್‌ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಡ್ಯುಯಲ್ ಸಿಮ್ 4G, ವೈ-ಫೈ, ಬ್ಲೂಟೂತ್‌ನಂತಹ ಆಯ್ಕೆಗಳೊಂದಿಗೆ ಬರುತ್ತದೆ.


Click it and Unblock the Notifications








