ಸದ್ದಿಲ್ಲದೆ Samsung Galaxy A06 ಬಿಡುಗಡೆ: ಅತೀ ಕಡಿಮೆ ಬೆಲೆ.. ಹೇಗಿದೆ?
ಸದ್ದಿಲ್ಲದೆ ಸ್ಯಾಮ್‌ಸಂಗ್‌ನ ಹೊಚ್ಚ ಹೊಸ ಫೋನ್ ಬಿಡುಗಡೆ. ಅದೂ ಕಡಿಮೆ ಬೆಲೆಗೆ! ಹೌದು, ಸ್ಯಾಮ್‌ಸಂಗ್ (Samsung) ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 (Samsung Galaxy A06) ಫೋನನ್ನು ಲೋಕಾರ್ಪಣೆಗೊಳಿಸಿದೆ. ಇದರ ಬೆಲೆ 10 ಸಾವಿರಕ್ಕಿಂತ ಕಡಿಮೆ ಇದೆ. ಈ ಮೊಬೈಲ್ ಅನ್ನು ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಈ ಫೋನಿನ ವಿನ್ಯಾಸ ಈ ಹಿಂದೆ ಬಿಡುಗಡೆಯಾಗಿರುವ Samsung Galaxy A05 ನಂತೆಯೇ ಇದೆ. ಬನ್ನಿ, ಈ ಫೋನಿನ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.
ಸ್ಯಾಮ್‌ಸಂಗ್‌ನ ಈ ಹೊಸ ಗ್ಯಾಲಕ್ಸಿ A06 (Samsung Galaxy A06) ಫೋನ್ 6.7 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದೆ. 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಇದೆ. ಮಿಡಿಯಾಟೆಕ್ ಹೆಲಿಯೊ G85 ಪ್ರೊಸೆಸರ್, 5000mAh ಬ್ಯಾಟರಿ, 4GB RAM ಮತ್ತು 64GB ಸ್ಟೋರೇಜ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನಿನ ಬೆಲೆ
4GB + 64GB ಸ್ಟೋರೇಜ್ ಬೆಲೆ = 9,999 ರೂ.
4GB + 128GB ಸ್ಟೋರೇಜ್ ಬೆಲೆ = 11,499 ರೂ.
ಕಂಪನಿಯು ಈ ಫೋನನ್ನು 9,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಅಂದರೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನಿನ 4GB ಮತ್ತು 64GB ಸ್ಟೋರೇಜ್ ವೇರಿಯಂಟ್ 9,999 ರೂ.ಗೆ ಲಭ್ಯವಿದೆ. 4GB ಮತ್ತು 128GB ಸ್ಟೋರೇಜ್ ವೇರಿಯಂಟ್‌ನ ಬೆಲೆ 11,499 ರೂ. ಇದೆ. ನೀವು ಈ ಫೋನನ್ನು ಸ್ಯಾಮ್‌ಸಂಗ್ ಇಂಡಿಯಾ ಇ-ಸ್ಟೋರ್‌ನಿಂದ ಖರೀದಿಸಬಹುದು. ಮುಂಬರುವ ದಿನಗಳಲ್ಲಿ ಇ ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯವಿರುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನಿನ ವೈಶಿಷ್ಟ್ಯಗಳು
ಡಿಸ್ಲ್ಪೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನ್ 6.7 ಇಂಚಿನ IPS LCD ಡಿಸ್ಲ್ಪೇಯನ್ನು ಹೊಂದಿದೆ. ಇದು HD + ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದರಲ್ಲಿ, 60Hzನ ರಿಫ್ರೆಶ್ ದರವನ್ನು ಪಡೆಯಬಹುದು.
ಪ್ರೊಸೆಸರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಮೊಬೈಲ್ ಮಿಡಿಯಾಟೆಕ್ ಹೆಲಿಯೊ G85 ಪ್ರೊಸೆಸರ್ ಹೊಂದಿದೆ. ಫೋನಿನಲ್ಲಿ Mali-G52 MP2 GPU ಅನ್ನು ಬಳಸಲಾಗಿದೆ. ಇದು 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಒಳಗೊಂಡಿದೆ. 1TB ವರೆಗಿನ ಮೈಕ್ರೊ ಎಸ್‌ಡಿ ಕಾರ್ಡ್ ಸಹ ಅದರಲ್ಲಿ ಸೇರಿಸಬಹುದು.
ಈ ಸುದ್ದಿ ಓದಿದ್ದೀರಾ?: ಇಂದು Google Pixel 9 Pro Fold ಸೇಲ್: ದುಬಾರಿ ಬೆಲೆ.. 20,000ಕ್ಕಿಂತ ಹೆಚ್ಚು ಆಫರ್!
ಕ್ಯಾಮೆರಾ: ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಅನ್ನು ಡ್ಯುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಇದರಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.
ಬ್ಯಾಟರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ One UI 6.1 ಆಧಾರಿತ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಎರಡು OS ನವೀಕರಣಗಳನ್ನು ಪಡೆಯುತ್ತದೆ. 3 ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಸಹ ಪಡೆಯುತ್ತದೆ.
ಇತರೆ ವೈಶಿಷ್ಟ್ಯಗಳು: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A06 ಮೊಬೈಲ್ ಬ್ಲೂಟೂತ್ v5.3, GPS ಮತ್ತು USB ಟೈಪ್-C ಪೋರ್ಟ್ ಅನ್ನು ಹೊಂದಿದೆ. ಈ ಬಜೆಟ್ ಸ್ನೇಹಿ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್‌ಲಾಕ್ ಸಿಸ್ಟಮ್ ಅನ್ನು ಒಳಗೊಂಡಿದೆ.


Click it and Unblock the Notifications








