Home
ಮೊಬೈಲ್

ಸಿಹಿ ಸುದ್ದಿ : 'ಗ್ಯಾಲ್ಯಾಕ್ಸಿ ಎ7' ಮತ್ತು 'ಗ್ಯಾಲ್ಯಾಕ್ಸಿ ಎ9' ಫೋನ್‌ಗಳ ಬೆಲೆ ಇಳಿಕೆ!

ಸ್ಯಾಮ್‌ಸಂಗ್ ಕಂಪನಿಯು ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಅವುಗಳಲ್ಲಿ 'ಗ್ಯಾಲ್ಯಾಕ್ಸಿ ಎ7' ಮತ್ತು 'ಗ್ಯಾಲ್ಯಾಕ್ಸಿ ಎ9' ಸ್ಮಾರ್ಟ್‌ಫೋನ್‌ ಈಗಲೂ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ ಹೊಂದಿವೆ. ಕಂಪನಿಯು ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭರ್ಜರಿ ದರ ಇಳಿಕೆ ಮಾಡಿದ್ದು, ಫೋನ್‌ ಖರೀದಿಸುವುದಿದ್ದರೇ ಇದುವೇ ರೈಟ್‌ ಟೈಮ್‌.

ಸಿಹಿ ಸುದ್ದಿ : 'ಗ್ಯಾಲ್ಯಾಕ್ಸಿ ಎ7' ಮತ್ತು 'ಗ್ಯಾಲ್ಯಾಕ್ಸಿ ಎ9' ಬೆಲೆ ಇಳಿಕೆ!

ಹೌದು, ಸ್ಯಾಮ್‌ಸಂಗ್‌ ಕಂಪನಿಯ 'ಗ್ಯಾಲ್ಯಾಕ್ಸಿ ಎ7' ಮತ್ತು 'ಗ್ಯಾಲ್ಯಾಕ್ಸಿ ಎ9' ಸ್ಮಾರ್ಟ್‌ಫೋನ್‌ಗಳು 2018ರಲ್ಲಿ ಲಾಂಚ್‌ ಆಗಿದ್ದವು. ಇದೀಗ ಬೆಲೆ ಇಳಿಕೆ ಕಂಡಿವೆ. ಬೆಲೆ ಇಳಿಕೆಯ ನಂತರ ಗ್ಯಾಲ್ಯಾಕ್ಸಿ ಎ9 6GB + 128GB ವೇರಿಯಂಟ್‌ 25,990ರೂ.ಗಳಿಗೆ ದೊರೆಯಲಿದ್ದು, ಈ ಮೊದಲು 28,990ರೂ.ಗಳು ಆಗಿತ್ತು. ಹಾಗೇ 31,990ರೂ.ಗಳಿಗೆ ಲಭ್ಯವಿದ್ದ 8GB + 128GB ವೇರಿಯಂಟ್ ಬೆಲೆ ಇಳಿಕೆಯಿಂದಾಗಿ 28,990ರೂ.ಗಳಿಗೆ ದೊರೆಯಲಿದೆ.

ಸಿಹಿ ಸುದ್ದಿ : 'ಗ್ಯಾಲ್ಯಾಕ್ಸಿ ಎ7' ಮತ್ತು 'ಗ್ಯಾಲ್ಯಾಕ್ಸಿ ಎ9' ಬೆಲೆ ಇಳಿಕೆ!

ಗ್ಯಾಲ್ಯಾಕ್ಸಿ ಎ7 ಸ್ಮಾರ್ಟ್‌ಫೋನಿನ 4GB + 64GB ವೇರಿಯಂಟ್‌ನ ಮಾದರಿಯು 15,990ರೂ.ಗಳಿಗೆ ಲಭ್ಯವಾಗಲಿದ್ದು, ಈ ಮೊದಲಿನ ಬೆಲೆಯು 18,990ರೂ.ಗಳು ಆಗಿತ್ತು. ಹಾಗೇ 6GB + 128GB ವೇರಿಯಂಟ್ ಬೆಲೆಯು 22,990ರೂ.ಗಳು ಆಗಿದ್ದು, ಬೆಲೆ ಇಳಿಕೆಯಿಂದ 19,990ರೂ.ಗಳಿಗೆ ದೊರೆಯಲಿದೆ. ಹಾಗಾದರೇ ಗ್ಯಾಲ್ಯಾಕ್ಸಿ ಎ7' ಮತ್ತು 'ಗ್ಯಾಲ್ಯಾಕ್ಸಿ ಎ9' ಸ್ಮಾರ್ಟ್‌ಫೋನ್‌ಗಳ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಗ್ಯಾಲ್ಯಾಕ್ಸಿ ಎ9 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ9 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ9 1080x2220 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.30 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ವಿಡಿಯೊ ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ. ಹಾಗೇ ಈ ಫೋನ162.50 x 77.00 x 7.80 ಸುತ್ತಳತೆಯ ರಚನೆಯನ್ನು ಪಡೆದಿಕೊಂಡಿದ್ದು, 183.00ಗ್ರಾಂ ತೂಕವನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಎ9 ಪ್ರೊಸೆಸರ್‌

ಗ್ಯಾಲ್ಯಾಕ್ಸಿ ಎ9 ಪ್ರೊಸೆಸರ್‌

ಆಕ್ಟಾ ಕೋರ್‌ ಸ್ನ್ಯಾಪ್‌ಡ್ರಾಗನ್ 660 ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿದ್ದು, ವೇಗದ ಕಾರ್ಯಕ್ಕೆ ಬೆಂಬಲ ನೀಡಲಿದೆ. ಹಾಗೇ 6GB + 128GB ಮತ್ತು 8GB + 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದ್ದು, ಈ ಫೋನಿನಲ್ಲೂ ಸಹ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 512GB ವರೆಗೂ ವಿಸ್ತರಿಸುವ ಅವಕಾಶವಿದೆ.

ಗ್ಯಾಲ್ಯಾಕ್ಸಿ ಎ9 ಕ್ಯಾಮೆರಾ

ಗ್ಯಾಲ್ಯಾಕ್ಸಿ ಎ9 ಕ್ಯಾಮೆರಾ

ಈ ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾವನ್ನು ನೀಡಲಾಗಿದ್ದು, ಅವುಗಳು ಕ್ರಮವಾಗಿ 24ಎಂಪಿ+ 10ಎಂಪಿ+8ಎಂಪಿ+5ಎಂಪಿ ಸಾಮರ್ಥ್ಯದಲ್ಲಿವೆ. ಮುಂಬದಿಯಲ್ಲಿ ಸೆಲ್ಫಿಗಾಗಿ 24 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ. ಕ್ಯಾಮೆರಾದಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದೆ.

ಗ್ಯಾಲ್ಯಾಕ್ಸಿ ಎ9 ಬ್ಯಾಟರಿ

ಗ್ಯಾಲ್ಯಾಕ್ಸಿ ಎ9 ಬ್ಯಾಟರಿ

ಈ ಸ್ಮಾರ್ಟ್‌ಫೋನಿನಲ್ಲಿ 3800mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನಿಗೆ ಉತ್ತಮ ಬ್ಯಾಕ್‌ಅಪ್‌ ನೀಡಲಿದೆ. ಇದರೊಂದಿಗೆ ಫೇಸ್‌ ಅನ್‌ಲಾಕ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಮತ್ತು ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ನೀಡಲಾಗಿದೆ.

ಗ್ಯಾಲ್ಯಾಕ್ಸಿ ಎ7 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ7 ಡಿಸ್‌ಪ್ಲೇ

ಗ್ಯಾಲ್ಯಾಕ್ಸಿ ಎ9 1080x2220 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.00 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇಯ ಅನುಪಾತವು 18:5:9 ಆಗಿದೆ. ವಿಡಿಯೊ ವೀಕ್ಷಣೆಗೆ ಅತ್ಯುತ್ತಮ ಎನಿಸಲಿದೆ. ಹಾಗೇ ಈ ಫೋನ 159.80 x 76.80 x 7.50 ಸುತ್ತಳತೆಯ ರಚನೆಯನ್ನು ಪಡೆದಿಕೊಂಡಿದ್ದು, 168.00 ಗ್ರಾಂ ತೂಕವನ್ನು ಹೊಂದಿದೆ.

ಗ್ಯಾಲ್ಯಾಕ್ಸಿ ಎ7 ಪ್ರೊಸೆಸರ್‌

ಗ್ಯಾಲ್ಯಾಕ್ಸಿ ಎ7 ಪ್ರೊಸೆಸರ್‌

ಆಕ್ಟಾ ಕೋರ್‌ ಸ್ನ್ಯಾಪ್‌ಡ್ರಾಗನ್ 660 ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿದ್ದು, ವೇಗದ ಕಾರ್ಯಕ್ಕೆ ಬೆಂಬಲ ನೀಡಲಿದೆ. ಹಾಗೇ4GB + 64GB ಮತ್ತು 6GB + 128GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಸಹ ಪಡೆದುಕೊಂಡಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯವಾಗಿ 512GB ವರೆಗೂ ವಿಸ್ತರಿಸುವ ಅವಕಾಶವಿದೆ.

ಗ್ಯಾಲ್ಯಾಕ್ಸಿ ಎ7 ಕ್ಯಾಮೆರಾ

ಗ್ಯಾಲ್ಯಾಕ್ಸಿ ಎ7 ಕ್ಯಾಮೆರಾ

ಈ ಸ್ಮಾರ್ಟ್‌ಫೋನಿನಲ್ಲಿಲೂ ಸಹ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾವನ್ನು ನೀಡಲಾಗಿದ್ದು, ಅವುಗಳು ಕ್ರಮವಾಗಿ 24ಎಂಪಿ+ 8ಎಂಪಿ+ 5ಎಂಪಿ ಸಾಮರ್ಥ್ಯದಲ್ಲಿವೆ. ಮುಂಬದಿಯಲ್ಲಿ ಸೆಲ್ಫಿಗಾಗಿ 24ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಒದಗಿಸಲಾಗಿದೆ. ಕ್ಯಾಮೆರಾದಲ್ಲಿ ಹಲವು ಆಯ್ಕೆಗಳನ್ನು ನೀಡಲಾಗಿದೆ.

ಗ್ಯಾಲ್ಯಾಕ್ಸಿ ಎ7 ಬ್ಯಾಟರಿ

ಗ್ಯಾಲ್ಯಾಕ್ಸಿ ಎ7 ಬ್ಯಾಟರಿ

ಈ ಸ್ಮಾರ್ಟ್‌ಫೋನಿನಲ್ಲಿ 3300 mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಒದಗಿಸಲಾಗಿದ್ದು, ಸ್ಮಾರ್ಟ್‌ಫೋನಿಗೆ ಉತ್ತಮ ಬ್ಯಾಕ್‌ಅಪ್‌ ನೀಡಲಿದೆ. ಇದರೊಂದಿಗೆ ಫೇಸ್‌ ಅನ್‌ಲಾಕ್‌, ಫಿಂಗರ್‌ಪ್ರಿಂಟ್ ಸೆನ್ಸಾರ್‌ ಮತ್ತು ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ನೀಡಲಾಗಿದೆ.

Best Mobiles in India

English summary
Samsung Galaxy A7 (2018), Galaxy A9 (2018) Price in India Cut; Now Start at Rs. 15,990.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+