ಮೊಬೈಲ್ ಪ್ರಿಯರೇ ದಯವಿಟ್ಟು ಗಮನಿಸಿ!..'ಗ್ಯಾಲ್ಯಾಕ್ಸಿ A7' ಖರೀದಿಗೆ ಇದುವೇ ಸಕಾಲ!!
ಪ್ರಿಯ ಸ್ಮಾರ್ಟ್‌ಫೋನ್ ಗ್ರಾಹಕರೇ ದಯವಿಟ್ಟು ಗಮನಿಸಿ. ಜನಪ್ರಿಯ ಸ್ಮಾರ್ಟ್‌ಫೋನ್ ಸಂಸ್ಥೆಯಾದ ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ A7 ಮತ್ತು A9 ಸ್ಮಾರ್ಟ್‌ಫೋನ್ ಖರೀದಿಸಲು ಇದುವೇ ಸಕಾಲ.! ವಿಷಯ ಏನೆಂದರೇ, ಸ್ಯಾಮ್ಸಂಗ್‌ನ ಗ್ಯಾಲ್ಯಾಕ್ಸಿ ಸರಣಿಯ ಈ ಎರಡು ಪ್ರಮುಖ ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಭಾರಿ ಕಡಿತವಾಗಿದ್ದು, ಈ ಸಿಹಿಸುದ್ದಿ ಸ್ಯಾಮ್ಸ್ಂಗ್ ಪ್ರೇಮಿಗಳಿಗೆ ಖುಷಿ ಸುದ್ದಿ ತಂದಿದೆ.

ಹೌದು, 4GB RAM ಮತ್ತು 64GB ಆಂತರಿಕ ಸಾಮರ್ಥ್ಯದ ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ A7 ಸ್ಮಾರ್ಟ್‌ಫೋನ್ ದರ ಭಾರೀ ಇಳಕೆಯಾಗಿದ್ದು, ಮಾರುಕಟ್ಟೆಗೆ ಲಾಂಚ್ ಆಗಿದ್ದಾಗ 23,990 ರೂ. ಬೆಲೆಯನ್ನು ಹೊಂದಿದ್ದ ಸ್ಮಾರ್ಟ್‌ಫೋನ್ ಬೆಲೆ ಈಗ 18,990 ರೂ.ಗಳಿಗೆ ಇಳಿಕೆಯಾಗಿದೆ. ಹಾಗೆಯೇ ಗ್ಯಾಲ್ಯಾಕ್ಸಿ A9 ಸ್ಮಾರ್ಟ್‌ಫೋನ್ ದರ ಕೂಡ ಭಾರೀ ಇಳಿಕೆ ಮಾಡಿರುವುದನ್ನು ನಾವು ನೋಡಬಹುದುದಾಗಿದೆ.

ಆರಂಭದಲ್ಲಿ 39,990 ರೂಪಾಯಿಗೆ ಬಿಡುಗಡೆಯಾಗಿದ್ದ 6GB RAM ಮತ್ತು 128GB ಆಂತರಿಕ ಮೆಮೊರಿ ಸಾಮರ್ಥ್ಯದ ಗ್ಯಾಲ್ಯಾಕ್ಸಿ A9 ಸ್ಮಾರ್ಟ್‌ಫೋನ್ ಈಗ ಕೇವಲ 33,990 ರೂಪಾಯಿಗಳಿಗೆ ಖರೀದಿಗೆ ಲಭ್ಯವಿದೆ. ಹಾಗಾದರೆ, ಭಾರೀ ಬೆಲೆಗಳನ್ನು ಕಳೆದುಕೊಂಡಿರುವ ಸ್ಯಾಮ್ಸಂಗ್ ಗ್ಯಾಲ್ಯಾಕ್ಸಿ A7 ಮತ್ತು A9 ಸ್ಮಾರ್ಟ್‌ಫೋನ್‌ಗಳು ಏನೆಲ್ಲಾ ವಿಶೇಷತೆಗಳನ್ನು ಹೊಂದಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಗ್ಯಾಲ್ಯಾಕ್ಸಿ A7 ಡಿಸ್‌ಪ್ಲೇ ಮತ್ತು ವಿನ್ಯಾಸ
6 ಇಂಚಿನ ಸೂಪರ್ AMOLED ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್, 1080 x 2220 ಪಿಕ್ಸಲ್ ರೆಸಲ್ಯೂಶನನ್ನು ಒಳಗೊಂಡಿರುವಜತೆಗೆ 18.5:9 ಅನುಪಾತದ ಸಾಮರ್ಥ್ಯದ್ದಾಗಿದೆ. ಫೋನಿನ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದ್ದು, ಹಿಂಬಾಗದಲ್ಲೂ ಕೂಡ ಗ್ಲಾಸ್ ಪ್ರೊಟೆಕ್ಷನ್ ಲುಕ್ ಹೊಮದಿರುವ ಸ್ಮಾರ್ಟ್‌ಫೋನ್ ಫೋನ್ ಪ್ರೀಮಿಯಮ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು.

ಗ್ಯಾಲ್ಯಾಕ್ಸಿ A7 ಕ್ಯಾಮರಾ
ಈ ಸ್ಮಾರ್ಟ್‌ಫೋನಿಗೆ ಹಿಂಬದಿಯಲ್ಲಿ ಒಟ್ಟು 24MP + 8MP + 5MP ಯ ಮೂರು ಕ್ಯಾಮರಾ ನೀಡಲಾಗಿದ್ದು, ವೈಲ್ಡ್, ಡೆಪ್ತ್ ಸೆನ್ಸಾರ್ ಮತ್ತು ಅಲ್ಟ್ರಾವೈಲ್ಡ್ ಆಂಗಲ್ ಲೆನ್ಸ್‌ಗಳನ್ನು ಈ ಕ್ಯಾಮರಾಗಳು ಹೊಂದಿವೆ. ಸೆಲ್ಫೀಗಾಗಿ 24MP ಕ್ಯಾಮರಾ ನೀಡಿದ್ದಾರೆ ಇದರೊಂದಿಗೆ ಹೆಚ್‌ಆರ್‌ಡಿ, ಪನೋರಮಾ ಆಯ್ಕೆಗಳೊಂದಿಗೆ ಎಲ್‌ಇಡಿ ಫ್ಲಾಶ್ ಸಹ ನೀಡಿದ್ದಾರೆ.

ಗ್ಯಾಲ್ಯಾಕ್ಸಿ A7ನ ಇನ್ನಿತರೆ ವೈಶಿಷ್ಟತೆಗಳು..
* ಆಕ್ಟಾಕೋರ್ ಪ್ರೊಸೆಸರ್ ಜತೆಗೆ ಆಂಡ್ರಾಯ್ಡ್ 8.1 ಓರಿಯೋ
* 3.5 mm ಜಾಕ್ ಜತೆ ಡಾಲ್ಬೀ ಸೌಂಡ್ ನೀಡಿದ್ದಾರೆ.
* 128 GB, ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ 4/6 GB RAM ಅಥವಾ 64 GB ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ 4 GB RAM.
* 3300 mAh ಬ್ಯಾಟರಿ ಸಾಮರ್ಥ್ಯ.
* ಕಪ್ಪು, ನೀಲಿ, ಗೋಲ್ಡ್ ಮತ್ತು ಪಿಂಕ್ ಬಣ್ಣಗಳಲ್ಲಿ ಲಭ್ಯ.

ಗ್ಯಾಲ್ಯಾಕ್ಸಿ A9 ಡಿಸ್‌ಪ್ಲೇ ಮತ್ತು ವಿನ್ಯಾಸ
6.3 ಇಂಚಿನ ಸೂಪರ್ AMOLED ಟಚ್‌ಸ್ಕ್ರೀನ್ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್ 1080 x 2220 ಪಿಕ್ಸಲ್ ರೆಸಲ್ಯೂಶನನ್ನು ಒಳಗೊಂಡಿರುವ ಜತರಗೆ 18.5:9 ಅನುಪಾತವನ್ನು ಹೊಂದಿದೆ. ಇದರಲ್ಲೂ ಸಹ ಫೋನಿನ ಸ್ಕ್ರೀನ್ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ ನೀಡಲಾಗಿದೆ. ಎರಡೂ ಭಾಗದಲ್ಲಿ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವುದು ಫೋನ್ ಅಂದವನ್ನು ಹೆಚ್ಚಿಸಿದೆ.

ಗ್ಯಾಲ್ಯಾಕ್ಸಿ A9 ಕ್ಯಾಮರಾ
ಈ ಸ್ಮಾರ್ಟ್‌ಫೋನಿಗೆ ಹಿಂಬದಿಯಲ್ಲಿ ಒಟ್ಟು 24MP + 8MP + 10MP + 5MP ಯ ಮೂರು ಕ್ಯಾಮರಾ ನೀಡಲಾಗಿದ್ದು, ವೈಲ್ಡ್, ಡೆಪ್ತ್ ಸೆನ್ಸಾರ್, ಟೆಲಿಫೋಟೋ ಮತ್ತು ಅಲ್ಟ್ರಾವೈಲ್ಡ್ ಆಂಗಲ್ ಲೆನ್ಸ್‌ಗಳನ್ನು ಈ ಕ್ಯಾಮರಾಗಳು ಹೊಂದಿವೆ. ಸೆಲ್ಫೀಗಾಗಿ 24MP ಕ್ಯಾಮರಾ ನೀಡಿದ್ದಾರೆ ಇದರೊಂದಿಗೆ ಹೆಚ್‌ಆರ್‌ಡಿ, ಪನೋರಮಾ ಆಯ್ಕೆಗಳೊಂದಿಗೆ ಎಲ್‌ಇಡಿ ಫ್ಲಾಶ್ ಸಹ ನೀಡಿದ್ದಾರೆ.

ಗ್ಯಾಲ್ಯಾಕ್ಸಿ A9ನ ಇನ್ನಿತರೆ ವೈಶಿಷ್ಟತೆಗಳು..
* ಕ್ವಾಲ್ಕೋಮ್ SDM660 ಸ್ನಾಪ್‌ಡ್ರಾಗನ್ 660 ಪ್ರೊಸೆಸರ್ ಜತೆಗೆ ಆಂಡ್ರಾಯ್ಡ್ 8.1 ಓರಿಯೋ
* 3.5 mm ಜಾಕ್ ಜತೆ ಡಾಲ್ಬೀ ಸೌಂಡ್ ನೀಡಿದ್ದಾರೆ.
* 128 GB, ಆಂತರಿಕ ಸಂಗ್ರಹ ಸಾಮರ್ಥ್ಯದೊಂದಿಗೆ 6/8 GB RAM.
* 3800 mAh ಬ್ಯಾಟರಿ ಸಾಮರ್ಥ್ಯ ಮತ್ತು ಫಾಸ್ಟ್ ಬ್ಯಾಟರಿ ಚಾರ್ಜಿಂಗ್ ಇದೆ
* ಕಪ್ಪು, ನೀಲಿ, ಮತ್ತು ಬಬುಲಗಮ್ ಪಿಂಕ್ ಬಣ್ಣಗಳಲ್ಲಿ ಲಭ್ಯ.


Click it and Unblock the Notifications








