ಶೀಘ್ರದಲ್ಲಿ ಸಾಮ್ಸಂಗ್ 'ಗ್ಯಾಲ್ಯಾಕ್ಸಿ A9 ಪ್ರೋ' ಸ್ಮಾರ್ಟ್‌ಫೋನ್ ಲಾಂಚ್!
ತನ್ನ ಗುಣಮಟ್ಟದ ಸ್ಮಾರ್ಟ್‌ಫೋನ್ ಉತ್ಪನ್ನಗಳಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯ ಹೊಂದಿರುವ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಸಾಮ್ಸಂಗ್, ಇದೀಗ ಸ್ಮಾರ್ಟ್‌ಫೋನ್ ಪ್ರಿಯರಿಗೊಂದು ಖುಷಿ ಸುದ್ದಿಯನ್ನು ನೀಡಲಿದೆ. ಹೌದು, ಸಾಮ್ಸಂಗ್ ಕಂಪನಿಯು ಸ್ಪೆಷಲ್ ಫೀಚರ್ಸ್‌ಗಳನ್ನು ಹೊಂದಿರುವ ನೂತನ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಗ್ರಾಹಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಸಾಮ್ಸಂಗ್ ಕಂಪನಿ 'ಗ್ಯಾಲ್ಯಾಕ್ಸಿ A9 ಪ್ರೋ' ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದ್ದು, ಈ ಸ್ಮಾರ್ಟ್‌ಫೋನ್ ಹೊಸ 'ಇನ್‌ಫಿನಿಟಿ ಓ' ಡಿಸ್‌ಪ್ಲೇ ನೊಂದಿಗೆ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರಲಿದೆ. ಈಗಾಗಲೇ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ ಅನ್ನು ದಕ್ಷಿಣ ಕೋರಿಯಾದಲ್ಲಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿಯೇ ಭಾರತೀಯ ಮಾರುಕಟ್ಟೆಗೂ ಪರಿಚಯಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ಸಾಮ್ಸಂಗ್ ಕಂಪನಿ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತದೆ ಎಂದರೇ, ಖಂಡಿತಾ ಹೊಸ ಫೀಚರ್ ಪರಿಚಯಿಸುತ್ತೆ ಎನ್ನುವ ವಿಶ್ವಾಸವನ್ನು ಸ್ಮಾರ್ಟ್‌ಫೋನ್ ಪ್ರೇಮಿಗಳು ಹೊಂದಿರುತ್ತಾರೆ. ಹೀಗಾಗಿ ಕಂಪನಿ ತನ್ನ ಹೊಸ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ ಹೊಸತನದ ಸ್ಕ್ರೀನ್, ರಚನೆ, ಬ್ಯಾಟರಿಗಳನ್ನು ಪರಿಚಯಿಸಲಿದೆ. ಹಾಗಾದರೇ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ ಏನೇಲ್ಲಾ ನೂತನ ಫೀಚರ್ಸ್‌ಗಳನ್ನು ಹೊಂದಿದೆ ಎಂದು ತಿಳಿಯಲು ಮುಂದೆ ಓದಿರಿ.

'ಇನ್‌ಫಿನಿಟಿ ಓ' ಡಿಸ್‌ಪ್ಲೇ
ಸಾಮ್ಸಂಗ್ ಕಂಪನಿ ಗ್ರಾಹಕರಿಗೆ 'ಇನ್‌ಫಿನಿಟಿ ಓ ಡಿಸ್‌ಪ್ಲೇ'ಯನ್ನು ತನ್ನ ಹೊಸ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ ಮೂಲಕ ಪರಿಚಯಿಸಲು ಮುಂದಾಗಿದೆ. ಈ ಡಿಸ್‌ಪ್ಲೇ ಅತ್ಯುತ್ತಮ ಗುಣಮಟ್ಟದಲ್ಲಿರಲಿದ್ದು, ಸ್ಮಾರ್ಟ್‌ಫೋನಿನ ಸಂಪೂರ್ಣ ಅಂಚಿನವರೆಗೂ ಡಿಸ್‌ಪ್ಲೇ ವಿಸ್ತಾರವಾಗಿರುತ್ತದೆ. ದೃಶ್ಯ ವೀಕ್ಷಣೆ ಮಾಡುವಾಗ ಉತ್ತಮ ಅನುಭವ ನೀಡಲು ಇನ್‌ಫಿನಿಟಿ ಓ ಡಿಸ್‌ಪ್ಲೇ' ನೆರೆವಾಗಲಿದೆ.

ಸ್ಕ್ರೀನ್ ಮತ್ತು ರಚನೆ
ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ 'ಇನ್‌ಫಿನಿಟಿ ಓ' ಡಿಸ್‌ಪ್ಲೇ ನೊಂದಿಗೆ 6.4 ಇಂಚಿನ ಫುಲ್ ಹೆಚ್‌ಡಿ ಸ್ಕ್ರೀನ್ ಹೊಂದಿದ್ದು, ಇದರ ಡಿಸ್‌ಪ್ಲೇ ಅನುಪಾತವು 19.5:9 ಆಗಿರಲಿದೆ. ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಕಡಿಮೆ ಅಂಚುಗಳನ್ನು ಹೊಂದಿದ್ದು, ಡಿಸ್‌ಪ್ಲೇ ಎಡಭಾಗದ ಮೂಲೆಯಲ್ಲಿ ಸೆಲ್ಫೀ ಕ್ಯಾಮೆರಾ ಹೋಲ್ ಅನ್ನು ಹೊಂದಿದೆ. ಅತ್ಯಂತ ಆಕರ್ಷಕ ನೋಟವನ್ನು ಈ ಸ್ಮಾರ್ಟ್‌ಫೋನ್ ಹೊಂದಿದೆ.

ಪ್ರೋಸೆಸರ್
ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 710 ಉತ್ತಮ ಪ್ರೊಸೆಸರ್ ಅನ್ನು ಹೊಂದಿದೆ. ಇದರೊಂದಿಗೆ 6GB RAM ಮತ್ತು 128GB ಆಂತರಿಕ ಶೇಖರಣಾ ಸಾಮರ್ಥ್ಯವನ್ನು ನೀಡಲಾಗಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ವಿಸ್ತರಿಸುವ ಅವಕಾಶವನ್ನು ಸಹ ನೀಡಲಾಗಿದೆ. ಅತ್ಯುತ್ತಮ ಪ್ರೊಸೆಸರ್ ಅನ್ನು ಈ ಸ್ಮಾರ್ಟ್ಫೋನ್ ಹೊಂದಿದ್ದು, ಕಾರ್ಯದಕ್ಷತೆ ಉತ್ತಮವಾಗಿರಲಿದೆ.

ಕ್ಯಾಮೆರಾ
ಸಾಮ್ಸಂಗ್ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಮೂರು ಲೆನ್ಸ್ ಹೊಂದಿದ ಕ್ಯಾಮೆರಾ ಇದ್ದು, ಫೋನಿನ ಹಿಂಬದಿಯಲ್ಲಿ 24+10+5ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿರುವ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ ಮುಂಬದಿಯಲ್ಲಿ ಸೆಲ್ಫೀಗಾಗಿ 24 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ಅನ್ನು ಒದಗಿಸಿದ್ದಾರೆ. ಮತ್ತು ವಿಡಿಯೋ ಗುಣಮಟ್ಟ ಸಹ ಉತ್ತಮವಾಗಿದೆ. ಫೋಟೋ ಕ್ವಾಲಿಟಿ ಅತ್ಯುತ್ತಮ ಆಗಿವೆ.

ಬ್ಯಾಟರಿ
ಸಾಮ್ಸಂಗ್ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ 3400mAh ಸಾಮರ್ಥ್ಯದ ಉತ್ತಮ ಬ್ಯಾಟರಿಯನ್ನು ಹೊಂದಿದೆ. ಇದರೊಂದಿಗೆ ಕ್ಚಿಕ್ ಚಾರ್ಜರ್ ವ್ಯವಸ್ಥೆಯನ್ನು ಸಹ ಹೊಂದಿದ್ದು, ವೇಗವಾಗಿ ಫೋನ್ ಚಾರ್ಜ್ ಆಗುತ್ತದೆ. ಇದರ ಬ್ಯಾಟರಿ ಬಾಳಿಕೆಯು ಅತ್ಯುತ್ತಮ ಆಗಿದೆ.

ಲಭ್ಯತೆ ಮತ್ತು ಬೆಲೆ?
ದಕ್ಷಿಣ ಕೋರಿಯಾದಲ್ಲಿ ಈಗಾಗಲೇ ಸಾಮ್ಸಂಗ್ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಶೀಘ್ರವೇ ಭಾರತದಲ್ಲಿಯೂ ಪರಿಚಯಿಸಲಾಗುವುದು ಎಂದು ತಿಳಿದುಬಂದಿದೆ. ಭಾರತದಲ್ಲಿ ಸಾಮ್ಸಂಗ್ ಗ್ಯಾಲ್ಯಾಕ್ಸಿ A9 ಪ್ರೋ ಸ್ಮಾರ್ಟ್‌ಫೋನ್ ಬೆಲೆ 38,100ರೂ.ಗಳು ಇರಲಿವೆ ಎಂದು ಅಂದಾಜಿಸಲಾಗಿದೆ.


Click it and Unblock the Notifications








