ಸ್ಯಾಮ್‌ಸಂಗ್ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ
ಸ್ಯಾಮ್‌ಸಂಗ್ ಹೊಸ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ.ಸ್ಯಾಮ್‌ಸಂಗ್ ಗೆಲಾಕ್ಸಿ ಕೋರ್ ಪ್ಲಸ್ ಹೆಸರಿನ ಸ್ಮಾರ್ಟ್‌ಫೋನ್‌ನ್ನು ತೈವಾನ್‌ನಲ್ಲಿ ಬಿಡುಗಡೆ ಮಾಡಿದೆ.
129.7 x 65.95 x 9.4 ಮಿ.ಮೀ ಗಾತ್ರ,134 ಗ್ರಾಂ ತೂಕದ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್ ಒಳಗೊಂಡಿದೆ.1.2GHz ಡ್ಯುಯಲ್ ಕೋರ್ ಪ್ರೊಸೆಸರ್ 1GB ರ್‍ಯಾಮ್,4GB ಆಂತರಿಕ ಮೆಮೊರಿ,1800 mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ.
ಈ ಸ್ಮಾರ್ಟ್‌ಫೋನಿಗೆ 7,990 ತೈವಾನ್ ಡಾಲರ್(ಅಂದಾಜು17,050 ರೂಪಾಯಿ) ಸ್ಯಾಮ್‌ಸಂಗ್ ನಿಗದಿ ಪಡಿಸಿದ್ದು, ಭಾರತದ ಮಾರುಕಟ್ಟೆಗೂ ಈ ಸ್ಮಾರ್ಟ್‌ಫೋನ್ ಸದ್ಯದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ವಿಶೇಷತೆ:
ಡ್ಯಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
4.3 ಇಂಚಿನ ಟಿಎಫ್‌ಟಿ ಸ್ಕ್ರೀನ್(480x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸರ್
1GB ರ್‍ಯಾಮ್
4GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
1800 mAh ಬ್ಯಾಟರಿ
ಇದನ್ನೂ ಓದಿ: ಸದ್ಯ ವಿಶ್ವದಲ್ಲಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು


Click it and Unblock the Notifications








