ಸ್ಯಾಮ್ಸಂಗ್ ಗ್ಯಾಲಕ್ಸಿ ಫೋಲ್ಡರ್2 ಬಗ್ಗೆ ನಿಮಗೆ ಗೊತ್ತಿರಬೇಕಾದ ಸಂಗತಿಗಳು.
ಕಳೆದ ವಾರ ಆ್ಯಂಡ್ರಾಯ್ಡ್ ಒಎಸ್ ಹೊಂದಿರುವ ಗ್ಯಾಲಕ್ಸಿ ಫೋಲ್ಡರ್ ಅನ್ನು ಸ್ಯಾಮ್ಸಂಗ್ ಬಿಡುಗಡೆಗೊಳಿಸಿದಾಗ, ಸ್ಯಾಮ್ಸಂಗ್ ನ ತೀರ್ಮಾನಕ್ಕೆ ಬಹಳಷ್ಟು ಮಂದಿ ಅಚ್ಚರಿ ವ್ಯಕ್ತಪಡಿಸಿದರು. ಈ ಸ್ಮಾರ್ಟ್ ಫೋನ್ ಮಾರಾಟದ ದೃಷ್ಟಿಯಿಂದ ಹೇಳಿಕೊಳ್ಳುವಂತಹ ಸಾಧನೆಯನ್ನೇನೂ ಮಾಡಿರಲಿಲ್ಲ.

ಓದಿರಿ: ಆ್ಯಪಲ್ ಐಫೋನ್ 7, 7 ಪ್ಲಸ್ ಹೇಗಿರುತ್ತದೆ ಗೊತ್ತೆ?
ಅಷ್ಟೇನೂ ಖ್ಯಾತಿ ಪಡೆಯದ ಸ್ಮಾರ್ಟ್ ಫೋನಿನ ಅಪ್ ಗ್ರೇಡೆಡ್ ಆವೃತ್ತಿಯನ್ನು ಸ್ಯಾಮ್ಸಂಗ್ ಹೊರತರುತ್ತಿದೆ. ಗ್ಯಾಲಕ್ಸಿ ಫೋಲ್ಡರ್ 2 ಎಂದು ಕರೆಯಲಾಗುವ ಈ ಸ್ಮಾರ್ಟ್ ಫೋನಿನ ಚಿತ್ರಗಳು ಮತ್ತು ಗುಣ ವೈಶಿಷ್ಟ್ಯಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿದೆ.
ಈ ಫೋನಿನ ಬಗ್ಗೆ ಮತ್ತಷ್ಟು ತಿಳಿಯಲು ಕೆಳಗಿನ ಸ್ಲೈಡರನ್ನು ನೋಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಚ್ ಸ್ಕ್ರೀನ್ ಜೊತೆಗೆ ಫಿಸಿಕಲ್ ಕೀಬೋರ್ಡ್.
ಸೋರಿಕೆಯಾದ ಚಿತ್ರದ ಪ್ರಕಾರ ಫೋಲ್ಡರ್ 2 ಫೋನಿನಲ್ಲಿ ಫಿಸಿಕಲ್ ಕೀಬೋರ್ಡ್ ಇರುತ್ತದೆ ಮತ್ತು ಜೊತೆಗೆ ಟಚ್ ಸ್ಕ್ರೀನ್ ಕೂಡ ಇರುತ್ತದೆ.

3.8ಇಂಚಿನ ಎಫ್.ಡಬ್ಲೂ.ವಿ.ಜಿ.ಎ ಪರದೆ.
ಗ್ಯಾಲಕ್ಸಿ ಫೋಲ್ಡರ್ 2ರಲ್ಲಿ 3.8 ಇಂಚಿನ 480x800 ಪಿಕ್ಸೆಲ್ಸಿನ ಪರದೆಯಿದೆ. 2016ರಲ್ಲಿ ಇದು ಆಕರ್ಷಣೀಯವೇನಲ್ಲ.

ಸ್ನಾಪ್ ಡ್ರಾಗನ್ 425 ಎಸ್.ಒ.ಸಿ ಮತ್ತು 2ಜಿಬಿ ರ್ಯಾಮ್.
ಈ ಫೋನಿನಲ್ಲಿ ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 425 ಪ್ರೊಸೆಸರ್ ಇದೆ. 2ಜಿಬಿ ರ್ಯಾಮ್ ಹಾಗೂ 16 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಫೋಲ್ಡರ್ 2ನಲ್ಲಿರುವ ಹಾರ್ಡ್ ವೇರ್ ತಕ್ಕಮಟ್ಟಿಗೆ ಉತ್ತಮವಾಗಿದೆ.

8ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
ಗ್ಯಾಲಕ್ಸಿ ಫೋಲ್ಡರ್ 2ರಲ್ಲಿ ಎಲ್.ಇ.ಡಿ ಫ್ಲಾಷ್ ಇರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇದೆ. ಜೊತೆಗೆ ಸೆಲ್ಫಿಗಾಗಿ 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದೆ.

ಸಂಪರ್ಕದ ಆಯ್ಕೆಗಳು.
ಗಾಳಿ ಸುದ್ದಿಗಳ ಪ್ರಕಾರ ಈ ಸ್ಮಾರ್ಟ್ ಫೋನಿನಲ್ಲಿ 4ಜಿ ಎಲ್.ಟಿ.ಇ ಇರಲಿದೆ. ಜೊತೆಗೆ 3ಜಿ, ವೈಫೈ, ಬ್ಲೂಟೂಥ್ ಹಾಗೂ ಮೈಕ್ರೋ ಯು.ಎಸ್.ಬಿ ಪೋರ್ಟ್ ಇರಲಿದೆ.

ಆ್ಯಂಡ್ರಾಯ್ಡ್ ಮಾರ್ಷ್ ಮೆಲ್ಲೊ.
ಇದು ಅತ್ಯಂತ ಪ್ರಮುಖ ವಿಶಿಷ್ಟತೆ. ಗ್ಯಾಲಕ್ಸಿ ಫೋಲ್ಡರ್ 2 ಫೋನಿನಲ್ಲಿ ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೋ ಇರಲಿದೆ.


Click it and Unblock the Notifications








