ಸದ್ಯದಲ್ಲೇ ಸ್ಯಾಮ್‌ಸಂಗ್ ಮಿಡ್ ರೇಂಜ್ ಕ್ವಾಡ್‌ಕೋರ್ ಸ್ಮಾರ್ಟ್‌ಫೋನ್ ಬಿಡುಗಡೆ
ಮಧ್ಯಮ ವರ್ಗದ ಜನರನ್ನು ಸೆಳೆಯಲು ಸ್ಯಾಮ್‌ಸಂಗ್ ಮುಂದಾಗುತ್ತಿದ್ದು ಹೆಚ್ಚಾಗಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಆರಂಭಿಸಿದೆ. ಇತ್ತೀಚಿಗಷ್ಟೇ ಗೆಲಾಕ್ಸಿ ಎಸ್ 3 ನಿಯೋ ಪ್ಲಸ್ ಬಿಡುಗಡೆ ಮಾಡಿದ್ದ ಸ್ಯಾಮ್‌ಸಂಗ್ ಈಗ ಗೆಲಾಕ್ಸಿ ಗ್ರ್ಯಾಂಡ್ ನಿಯೋ ಸ್ಮಾರ್ಟ್‌ಫೋನನ್ನು ಸದ್ಯದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
43.7x77.1 9.6 ಮಿ.ಮೀ ಗಾತ್ರ,163 ಗ್ರಾಂ ತೂಕದ ಸ್ಮಾರ್ಟ್‌ಫೋನ್ ಎಕ್ಸಲರೋಮೀಟರ್,ಕಂಪಾಸ್,ಪ್ರಾಕ್ಸಿಮಿಟಿ ಸೆನ್ಸರ್ ಒಳಗೊಂಡಿದ್ದು ಜೋರ್ಡಾನ್ ಸ್ಯಾಮ್‌ಸಂಗ್ ವೆಬ್‌ಸೈಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಿಸ್ಟ್ ಆಗಿದೆ.ಆಂಡ್ರಾಯ್ಡ್ ಓಎಸ್ ಬರಲಿದೆ ಎಂದು ಹೇಳಿದ್ದು ಜೆಲ್ಲಿ ಬೀನ್ ಕಿಟ್‌ಕ್ಯಾಟ್‌ನಲ್ಲಿ ಯಾವುದು ಎನ್ನುವುದನ್ನು ಪ್ರಕಟಿಸಿಲ್ಲ. ಕ್ವಾಡ್ ಕೋರ್ ಪ್ರೊಸೆಸರ್ ಆಗಿರುವುದರಿಂದ ಸ್ಮಾರ್ಟ್‌ಫೋನ್ 25 ಸಾವಿರ ರೂ ಬೆಲೆ ಒಳಗಡೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಗ್ರ್ಯಾಂಡ್ ನಿಯೋ
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
5 ಇಂಚಿನ ಟಿಎಫ್‌ಟಿ WVGA ಸ್ಕ್ರೀನ್(480 x 800 ಪಿಕ್ಸೆಲ್)
ಆಂಡ್ರಾಯ್ಡ್ ಓಎಸ್
1.2GHz GHz ಕ್ವಾಡ್ ಕೋರ್ ಪ್ರೊಸೆಸರ್
1GB RAM
16ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
64ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
2,100mAh ಬ್ಯಾಟರಿ


Click it and Unblock the Notifications








