Home
ಮೊಬೈಲ್

ಸ್ಯಾಮ್’ಸಂಗ್ ಗ್ಯಾಲಕ್ಸಿ J3 ಪ್ರೊ ಈಗ ಭಾರತದಲ್ಲೂ ಲಭ್ಯ!: ಫೀಚರ್ಸ್ ನೋಡಿದ್ರೆ ಖರೀದಿಸದಿರುವ ಮಾತೇ ಇಲ್ಲ!!

ಇತ್ತೀಚೆಗಷ್ಟೇ ಸ್ಯಾಮ್’ಸಂಗ್ ತನ್ನ ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್’ಫೋನ್’ನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಈ ಬಾರಿ ಸ್ಯಾಮ್’ಸಂಗ್ ಆನ್’ಲೈನ್ ಎಕ್ಸ್’ಕ್ಲೂಸಿವ್ ಪ್ರೊಡಕ್ಟ್’ನ್ನು ಪ್ರಸ್ತುತಪಡಿಸುತ್ತಿದೆ.

By Precilla Dias

ಸ್ಯಾಮ್'ಸಂಗ್ ಗ್ಯಾಲಕ್ಸಿ ಹಲವರ ಫೇವರಿಟ್, ತನ್ನದೇ ಆದ ವಿಶೇಷತೆಗಳಿಂದ ಕೂಡಿರುವ ಈ ಸ್ಮಾರ್ಟ್’ಫೋನ್’ಗಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇತ್ತೀಚೆಗಷ್ಟೇ ಸ್ಯಾಮ್’ಸಂಗ್ ತನ್ನ ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್’ಫೋನ್’ನ್ನು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಈ ಬಾರಿ ಸ್ಯಾಮ್’ಸಂಗ್ ಆನ್’ಲೈನ್ ಎಕ್ಸ್’ಕ್ಲೂಸಿವ್ ಪ್ರೊಡಕ್ಟ್’ನ್ನು ಪ್ರಸ್ತುತಪಡಿಸುತ್ತಿದೆ.

ಸ್ಯಾಮ್’ಸಂಗ್ ಗ್ಯಾಲಕ್ಸಿ J3 ಪ್ರೊ ಈಗ ಭಾರತದಲ್ಲೂ ಲಭ್ಯ!

ಈ ಸ್ಟ್ರ್ಯಾಟರ್ಜಿಯನ್ನು ಕಂಪೆನಿಯೂ ಇದೇ ಮೊದಲ ಬಾರಿಗೆ ಬಳಸಿಕೊಳ್ಳುತ್ತಿದ್ದು, ಗ್ರಾಹಕರು ಹೇಗೆ ಡಿವೈಸ್’ನ್ನು ಸ್ವೀಕರಿಸುತ್ತಾರೆ ಹಾಗೂ ಈ ಶೈಲಿಯಲ್ಲಿ ಮಾರಾಟ ಹೇಗೆ ನಡೆಯಬಹುದು ಎಂದು ನೋಡುವ ಆಸಕ್ತಿ ಸದ್ಯ ಪ್ರತಿಯೊಬ್ಬರಲ್ಲೂ ಇದೆ.

ಈಗಾಗಲೇ ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್’ಫೋನ್’ಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಪೇಟಿಎಂ ಮಾಲ್ ವೆಬ್’ಸೈಟ್’ಗಳಲ್ಲಿ ಇವುಗಳನ್ನು ಕಾಣಹುದಾಗಿದೆ. ಸ್ಮಾರ್ಟ್’ಫೋನ್ ಬೆಲೆ ರೂ. 8,490 ಎಂದು ನಮೂದಿಸಿದ್ದು, ಸದ್ಯಕ್ಕೀಗ ಕೇವಲ ಗೋಲ್ಡ್ ವೇರಿಯಂಟ್ ಫೋನ್’ಗಳಷ್ಟೇ ಲಭ್ಯವಿದೆ. ಮತ್ತೊಂದೆಡೆ ಖುದ್ದು ಕಂಪೆನಿಯೇ ಈ ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್’ಫೋನ್’ಗಳು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ, ಉತ್ತಮ ಗುಣಮಟ್ಟದ ಡಿಸ್ಪ್ಲೇಗಳನ್ನು ಹೊಂದಿವೆ.

ಓದಿರಿ: ಚಿಂತಿಸ ಬೇಡಿ.! ನೀವಿಗಲೂ ಮೂರು ತಿಂಗಳು ಜಿಯೋ ಉಚಿತ ಸೇವೆ ಪಡೆಯಬಹುದು..! ಹೇಗೆ..?

ಅಲ್ಲದೇ ಗ್ರಾಹಕರಿಗೆ ಉಪಯೋಗಕ್ಕೆ ಬರುವ ಫೀಚರ್’ಗಳನ್ನೇ ನೀಡಿದ್ದೇವೆ ಎಂದು ಕಂಪೆನಿ ಹೇಳಿಕೆ ನೀಡಿದೆ. ಇದರಿಂದಾಗಿ ಯಾವುದೇ ಆತಂಕವಿಲ್ಲದೆ ಗ್ಯಾಲಕ್ಸಿ J3 ಪ್ರೊ ಫೋನನ್ನು ಈ ಕೂಡಲೇ ಆನ್’ಲೈನ್ ಮೂಲಕ ಖರೀದಿಸುವುದರಲ್ಲಿ ನಷ್ಟವಿಲ್ಲ.

ಮೇಲೆ ನೀಡಿದ ಫೀಚರ್’ಗಳನ್ನು ಹೊರತುಪಡಿಸಿ ಇನ್ನೂ ಯಾವ್ಯಾವ ವಿಶೇಷತೆಗಳು ಇದರಲ್ಲಿವೆ ಎಂದು ನೋಡುವುದಾದರೆ:

ಗ್ಯಾಲಕ್ಸಿ J3 ಪ್ರೊ 5 ಇಂಚಿನ HD Super AMOLED ಡಿಸ್ಪ್ಲೇ ಹೊಂದಿದೆ. ಇದು 2ಜಿಬಿ RAM ಹಾಗೂ 16 ಜಿಬಿಯಷ್ಟು ಇಂಟರ್ನಲ್ ಮೆಮೊರಿ ಹೊಂದಿದ್ದು ಮೈಕ್ರೋ SD ಕಾರ್ಡ್ ಬಳಸಿ ಮೆಮೊರಿಯನ್ನು 128 ಜಿಬಿಯವರೆಗೂ ವಿಸ್ತರಿಸಬಹುದಾಗಿದೆ. ಬ್ಯಾಟರಿ ವಿಚಾವಾಗಿ ಗಮನ ಹರಿಸುವುದಾದರೆ, ಇದರ ಬ್ಯಾಟರಿ 2,600 mAh ನಷ್ಟು ಬ್ಯಾಟರಿ ಬ್ಯಾಕ್’ಅಪ್ ಹೊಂದಿದ್ದು, ಆ್ಯಂಡ್ರಾಯ್ಡ್ 5.1 ಲಾಲಿಪಪ್’ನಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಸೆಲ್ಫೀ ಕ್ರೇಜ್ ಇರುವವರ ಮನದಲ್ಲಂತೂ ಕ್ಯಾಮರಾ ಕ್ವಾಲಿಟಿ ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ, ಇದಕ್ಕೂ ಉತ್ತರ ಲಭಿಸಿದ್ದು ಇವುಗಳಲ್ಲಿ f/2.2 ಅಪರ್ಚರ್ ಹಾಗೂ LED ಫ್ಲ್ಯಾಶ್ ಇರುವ 8 ಮೆಗಾ ಪಿಕ್ಸೆಲ್’ನ ರೇರ್ ಅಟೋ ಫೋಕಸ್ ಕ್ಯಾಮಾ ಬಳಸಲಾಗಿದೆ. ಫ್ರಂಟ್ ಕ್ಯಾಮರಾ 5 ಮೆಗಾ ಪಿಕ್ಸೆಲ್ ಸಾಮರ್ಥ್ಯ ಹೊಂದಿದೆ. ಗ್ಯಾಲಕ್ಸಿ J3 ಪ್ರೊನಲ್ಲಿ ಲಭ್ಯವಿರುವ ಕನೆಕ್ಟಿವಿಟಿಗೆ ಸಂಬಂದಿಸಿದ ಮಾಹಿತಿಯ ಕುರಿತಾಗಿ ನೋಡುವುದಾದರೆ, ಇದರಲ್ಲಿ ಬ್ಲೂ ಟೂತ್, 4G LTE Support, ವೈ-ಫೈ 802. 11 b/g/n ಹಾಗೂ GPS ಸೌಲಭ್ಯಗಳಿವೆ.

ಇಷ್ಟೆಲ್ಲಾ ಫೀಚರ್’ಗಳಿರುವ ಈ ಸ್ಮಾರ್ಟ್’ಫೋನ್ ಇಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರ ದಂಡು ಖರೀದಿಸಲು ಮುಂದಾಗುವುದರಲ್ಲಿ ಅನುಮಾನವಿಲ್ಲ.

Best Mobiles in India

English summary
Samsung Galaxy J3 Pro is now available for purchase in India. The Galaxy pro is now up for sale and is listed on the Paytm Mall website. The smartphone is priced at Rs. 8,490 and right now there is only Gold variant available.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+