ಸ್ಯಾಮ್‌ಸಂಗ್ ನಿನ್ನೇ ಲಾಂಚ್ ಮಾಡಿದ ಗ್ಯಾಲೆಕ್ಸಿ J6 ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ರೂ.990ಕ್ಕೇ ಸೇಲ್..!
ಫ್ಲಿಪ್‌ಕಾರ್ಟ್ ಬಿಗ್ ಶಾಪಿಂಗ್ ಡೇ ಆಯೋಜಿಸಿದ್ದು, ಈ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಬೊಂಬಾಟ್ ಆಫರ್ ಗಳನ್ನು ಘೋಷಣೆ ಮಾಡಿದೆ. ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟಿನಲ್ಲಿ ಮಾತ್ರವೇ ಮಾರಾಟವಾಗಲಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಮೇಲೆ ಭಾರೀ ಆಫರ್ ನೀಡಿದ್ದು, ಬಳೆಕೆದಾರರು ಕೇವಲ ರೂ.990ಕ್ಕೆ ಈ ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.

ಓದಿರಿ: ಗೂಗಲ್‌ನಲ್ಲಿ ಸುದ್ದು ಮಾಡಿದ Who is Radhika..? ಎಲ್ಲೇಲ್ಲಿ ಟ್ರೆಂಡ್ ಆಗಿದೆ ಗೊತ್ತಾ..?
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಫ್ಲಿಪ್‌ಕಾರ್ಟ್, ಈ ಬಾರಿ ನೂತನವಾಗಿ ಲಾಂಚ್ ಆಗಲಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಮೇಲೆ ವಿವಿಧ ಆಫರ್ ಗಳನ್ನು ನೀಡಿದ್ದು, ಇದರಿಂದಾಗಿ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಅನ್ನು ರೂ.990ಕ್ಕೆ ಮಾರಾಟ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಅನ್ನು ರೂ.990ಕ್ಕೆ ಖರೀದಿ ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ರೂ.13,990 ಬೆಲೆಯ ಸ್ಮಾರ್ಟ್‌ಫೋನ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಸದ್ಯ ಮಾರುಕಟ್ಟೆಯಲ್ಲಿ ರೂ.13,990ಕ್ಕೆ ಮಾರಾಟವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಫ್ಲಿಪ್fಕಾರ್ಟ್ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಮೇಲೆ ರೂ.1300೦ ದ ವರೆಗೂ ಎಕ್ಸ್ ಚೇಂಜ್ ಆಫರ್ ಅನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ರೂ.990ಕ್ಕೆ ಮಾರಾಟ:
ಈ ಎಕ್ಸ್‌ಚೇಂಜ್ ಆಫರ್ ಹೆಸರಿನಲ್ಲಿ ಬಳಕೆದಾರರು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು, ಬಳಕೆದಾರರು ರೂ.13000 ವರೆಗೆ ಕಡಿತವನ್ನು ಪಡೆದ ಸಂದರ್ಭದಲ್ಲಿ ರೂ.990ಕ್ಕೆ ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಪಡೆದುಕೊಳ್ಳಬಹುದಾಗಿದೆ.

ಇವತ್ತೇ ಲಾಂಚ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್ ಇಂದಿನಿಂದ ಮಾರಾಟಕ್ಕೆ ದೊರೆಯುತ್ತಿದೆ ಎನ್ನಲಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ದೊರೆಯಲಿರುವ ಈ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಹುಟ್ಟಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ.

ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್;
ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದಾಗಿದ್ದು, ಆಂಡ್ರಾಯ್ಡ್ 8.0 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ 5.6 ಇಂಚಿನ HD+ ಗುಣಮಟ್ಟದ ಅಮೊಲೈಡ್ ಪ್ಯಾನಲ್ ಅನ್ನು ಹೊಂದಿದೆ. ಇದಲ್ಲದೇ ಇದು 18.5:9 ಅನುಪಾತದ ಡಿಸ್‌ಪ್ಲೇಯಾಗಿದೆ.

ಫೋನ್ ವೇಗ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 3GB ಮತ್ತು 4GB RAM ಅನ್ನು ಕಾಣಬಹುದಾಗಿದ್ದು, ಎಕ್ಸೋನಾಸ್ 7870 ಪ್ರೋಸೆಸರ್ ಅನ್ನು ಹೊಂದಿದೆ. ಇದಲ್ಲದೇ ಹಿಂಭಾಗ 13 MP ಕ್ಯಾಮೆರಾವನ್ನು ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಬ್ಯಾಟರಿ:
32 GB ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿಯಲ್ಲಿ ದೊರೆಯಲಿದೆ. ಅಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. 3000mAh ಬ್ಯಾಟರಿಯನ್ನು ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.


ಲಾಂಚಿಂಗ್ ಆಫರ್:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಪ್ಲಸ್ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಫ್ಲಿಪ್‌ಕಾರ್ಟ್ ಬೊಂಬಾಟ್ ಆಫರ್ ವೊಂದನ್ನು ನೀಡಲಾಗಿದ್ದು, ಆಕ್ಸಿಸ್ ಬ್ಯಾಂಕ್ ಕಾರ್ಡ್ ಇದ್ದವರಿಗೆ ಶೇ.5 % ಕಡಿತವನ್ನ ಮಾಡಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಸದ್ಯ ಮಾರುಕಟ್ಟೆಯಲ್ಲಿರುವ ಬೆಸ್ಟ್ ಆಫರ್ ಇದಾಗಿದೆ.


Click it and Unblock the Notifications








