ಚೀನಾ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಲು ಬರುತ್ತಿದೆ 'ಸ್ಯಾಮ್‌ಸಂಗ್‌ನ ಎಂ30' ಸ್ಮಾರ್ಟ್‌ಫೋನ್!!
ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುತ್ತಲೇ ಜನಪ್ರಿಯಗೊಳ್ಳುತ್ತಿವೆ. ಅವುಗಳ ಅಬ್ಬರ ತಡೆಯಲು 'ಎಂ10' ಮತ್ತು 'ಎಂ20' ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಭಾರೀ ಶಾಕ್ ಕೊಟ್ಟಿರುವ ಸ್ಯಾಮ್‌ಸಂಗ್ ಕಂಪನಿಯು ಇದೀಗ ಮತ್ತೊಂದು ಟಾಂಗ್ ಕೊಡುವ ಸೂಚನೆ ನೀಡಿದೆ.

ಹೌದು, ಸ್ಯಾಮ್‌ಸಂಗ್ ಕಂಪನಿಯು 'ಎಂ30' ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಈ ಸ್ಮಾರ್ಟ್‌ಫೋನ್ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ. 6.38 ಇಂಚಿನ ಡಿಸ್‌ಪ್ಲೇ ಇರಲಿದ್ದು, ಇದರೊಂದಿಗೆ 'ಎಂ30' ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರಲಿದೆ. ಬ್ಯಾಟರಿ ಬಾಳಿಕೆಯನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ವೃದ್ಧಿಸಲಾಗಿದೆ. ಇದರೊಂದಿಗೆ ಸ್ಯಾಮ್‌ಸಂಗ್ 'ಎಂ30' ಸ್ಮಾರ್ಟ್‌ಫೋನ್ ಇನ್ನು ಏನೆಲ್ಲಾ ಸ್ಪೆಷಲ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿ.

ವಿನ್ಯಾಸ
ಸ್ಯಾಮ್‌ಸಂಗ್‌ನ ಹೊಸ ಸ್ಮಾರ್ಟ್‌ಫೋನ್ ಎಂ30 ಕಡಿಮೆ ಅಂಚಿನಿಂದ ಕೂಡಿರಲಿದ್ದು, ಫೋನಿನ ನಾಲ್ಕು ಮೂಲೆಗಳು ಅರ್ಧ ವೃತ್ತಾಕಾರದಲ್ಲಿವೆ. ಸೆಲ್ಫೀ ಕ್ಯಾಮೆರಾವನ್ನು ಪೋನಿನ ಮೆಲ್ತುದಿಯ ಮಧ್ಯ ಭಾಗದಲ್ಲಿ ನೀಡಲಾಗುವುದು. ಸ್ಮಾರ್ಟ್‌ಫೋನಿನ್ ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳೊಂದಿಗೆ ಫ್ಯ್ಲಾಶ್ ನೀಡಲಾಗಿದೆ. ಚೀನಾ ಸ್ಮಾರ್ಟ್‌ಫೋನ್‌ಗಳ ಡಿಸೈನ್ ಹಿಂದುಕ್ಕುವ ರಚನೆ ಇರಲಿದೆ.

ಡಿಸ್‌ಪ್ಲೇ
ಸ್ಯಾಮ್‌ಸಂಗ್‌ನ ಎಂ30 ಹೊಸ ಸ್ಮಾರ್ಟ್‌ಫೋನ್ 2220x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದರ ಡಿಸ್‌ಪ್ಲೇ ವಿಶಾಲವಾಗಿದ್ದು. ಉತ್ತಮ ಗುಣಮಟ್ಟದಲ್ಲಿ ಇರಲಿದೆ.

ವೇಗದ ಪ್ರೊಸೆಸರ್
ಸ್ಯಾಮ್‌ಸಂಗ್ ಎಂ30 ಸ್ಮಾರ್ಟ್‌ಫೋನ್‌ನಲ್ಲಿ Exynos 7904 ಸಾಮರ್ಥ್ಯದ ಅತ್ಯುತ್ತಮ ಪ್ರೊಸೆಸರ್ ನೀಡಲಾಗುವುದು. ಹೆಚ್ಚಿನ ವೇಗ ಬೇಡುವ ಗೇಮ್ಸ್‌ಗಳನ್ನು ಆಡಲು ಸ್ಮಾರ್ಟ್‌ಫೋನಿನ ಪ್ರೊಸೆಸರ್ ಸಹಕರಿಸುವುದು ಮತ್ತು ಅಡೆ ತಡೆಗಳಿಲ್ಲದೇ ಆಡಬಹುದು.

ತ್ರಿವಳಿ ಕ್ಯಾಮೆರಾ!
ಸ್ಯಾಮ್‌ಸಂಗ್ ಉತ್ತಮ ಗುಣಮಟ್ಟದ ಕ್ಯಾಮೆರಾಗಳನ್ನು ಪರಿಚಯಿಸುತ್ತದೆ ಎಂಬ ವಿಶ್ವಾಸ ಗ್ರಾಹಕರಲ್ಲಿ ಇದೆ. ಕಂಪನಿಯು ತನ್ನ ಹೊಸ 'ಎಂ30' ಸ್ಮಾರ್ಟ್‌ಫೋನ್ ಹಿಂಭದಿಯಲ್ಲಿ ತ್ರಿವಳಿ ಕ್ಯಾಮೆರಾಗಳನ್ನು ಹೊಂದಿರಲಿದ್ದು ಅವು ಕ್ರಮವಾಗಿ 13MP (F1.9) + 5MP (F2.2 ) +5MP (F2.2) ಸಾಮರ್ಥ್ಯದಲ್ಲಿ ಇರಲಿವೆ.

ಸೆಲ್ಫೀ ಕ್ಲಿಕ್!
ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್ ಮಾದರಿಗಳಲ್ಲಿ ಅತ್ಯುತ್ತಮ ಸೆಲ್ಫೀ ಕ್ಯಾಮೆರಾಗಳನ್ನು ಗ್ರಾಹಕರಿಗೆ ನೀಡುತ್ತಿರುವ ಸ್ಯಾಮ್‌ಸಂಗ್ ಇದೀಗ ತನ್ನ ನೂತನ ಎಂ30 ಸ್ಮಾರ್ಟ್‌ಫೋನ್‌ನಲ್ಲಿಯೂ ಸೆಲ್ಫೀಗಾಗಿ 16 ಮೆಗಾಪಿಕ್ಸಲ್ ಸಾಮರ್ಥ್ಯದ (F2.0) ಕ್ಯಾಮೆರಾವನ್ನು ನೀಡಲಿದೆ ಎನ್ನಲಾಗುತ್ತಿದೆ.

ಮೆಮೊರಿ ಮತ್ತು ಬಣ್ಣದ ಲಭ್ಯತೆ
4GB RAM ಸಾಮರ್ಥ್ಯ ಮತ್ತು 64 GB ಆಂತರೀಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದ್ದು, ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಸಂಗ್ರಹವನ್ನು ವಿಸ್ತರಿಸುವ ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸ್ಮಾರ್ಟ್‌ಫೋನ್ 'ಗ್ರೇಡಿಯಂಟ್ ಬ್ಲೂ' ಮತ್ತು 'ಬ್ಲ್ಯಾಕ್' ಬಣ್ಣಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ.

ಬಿಗ್ ಬ್ಯಾಟರಿ!
ತನ್ನ ವಿಶೇಷ ಫೀಚರ್ಸ್‌ಗಳಿಂದ ಗ್ರಾಹಕರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಸ್ಯಾಮ್‌ಸಂಗ್ ಎಂ30 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ದೀರ್ಘ ಬ್ಯಾಟರಿಯನ್ನು ಹೊಂದಿದೆ. ಎರಡು ದಿನಗಳ ಕಾಲ ಬಾಳಿಕೆ ಬರಲಿದ್ದು, ಫಾಸ್ಟ್ ಚಾರ್ಜರ್ ಸಹ ಇರಲಿದೆ ಎಂದು ಹೇಳಲಾಗುತ್ತಿದೆ.

ಬೆಲೆ ಮತ್ತು ಲಭ್ಯತೆ.?
ಸ್ಯಾಮ್‌ಸಂಗ್ ಕಂಪನಿಯು ಇತ್ತೀಚಿಗಷ್ಟೆ ತನ್ನ ಎಂ10 ಮತ್ತು ಎಂ20 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಇದರ ಮುಂದುವರಿದ ಭಾಗವಾಗಿರುವ 'ಎಂ30' ಸ್ಮಾರ್ಟ್‌ಫೋನ್ ಅನ್ನು ಇದೇ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡುವುದು ಎಂದು ತಿಳಿದುಬಂದಿದೆ. ಇದರ ಬೆಲೆಯ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.15,000 ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ.


Click it and Unblock the Notifications








