ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ವಿಮರ್ಶೆ: ಬಜೆಟ್‌ ಬೆಲೆಗೆ ಹೈ-ಕ್ಲಾಸ್‌ ಫೋನ್!

|

ಸ್ಯಾಮ್‌ಸಂಗ್ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ 'ಗ್ಯಾಲಕ್ಸಿ M31' ಸ್ಮಾರ್ಟ್‌ಫೋನ್ ಬಹುಬೇಗನೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದಿದೆ. ಸಂಸ್ಥೆಯು ಈಗಾಗಲೇ ಗ್ಯಾಲಕ್ಸಿ ಎಂ ಸರಣಿಯಲ್ಲಿ ಹಲವು ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಇದು ಒಂದು ಸೇರಿದೆ. ಆದರೆ ಸ್ವಲ್ಪ ಅಪ್‌ಡೇಟ್ ಫೀಚರ್ಸ್‌ಗಳು ಸೇರಿವೆ. ಒಂದು ರೀತಿ ಹೊಸ ಬಾಟಲನಲ್ಲಿ ಹಳೆ ವೈನ್‌ ಹಾಕಿದಂತೆ ಗ್ಯಾಲಕ್ಸಿ ಎಂ31 ಫೋನ್ ಕಂಡುಬಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31

ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್ ಬಹುತೇಕ ಗ್ಯಾಲಕ್ಸಿ M30s ಸ್ಮಾರ್ಟ್‌ಫೋನ್‌ ಅನ್ನು ಹೋಲುವ ರೀತಿ ಕಂಡುಬರುತ್ತದೆ. ಆದರೆ ಹೊಸ ಗ್ಯಾಲಕ್ಸಿ ಎಂ31 ಫೋನಿನಲ್ಲಿ ಕೆಲವು ಫೀಚರ್ಸ್‌ಗಳು ಅಪ್‌ಡೇಟ್ ಆಗಿವೆ. ಮುಖ್ಯವಾಗಿ ಕ್ವಾಡ್‌ ಕ್ಯಾಮೆರಾ ರಚನೆ ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ ಸೆನ್ಸಾರ್ ಅಧಿಕವಾಗಿದೆ. ಉಳಿದಂತೆ 6000mAh ಬ್ಯಾಟರಿ, Exynos 9 ಪ್ರೊಸೆಸರ್ ಗಮನ ಸೆಳೆಯುತ್ತವೆ. ಬೆಲೆಯು ಗ್ರಾಹಕ ಸ್ನೇಹಿ ಆಗಿರುವುದು ಈ ಫೋನಿನ ಪ್ಲಸ್‌ ಪಾಯಿಂಟ್ ಆಗಿದೆ. ಉಳಿದಂತೆ ಈ ಫೋನಿನ ಫೀಚರ್ಸ್‌ಗಳ ಕಾರ್ಯವೈಖರಿ ಹೇಗಿದೆ ಎಂಬುದನ್ನು ಮುಂದೆ ನೋಡೋಣ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಗ್ಯಾಲಕ್ಸಿ ಎಂ31 ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಇನ್‌ಫಿನಿಟಿ ಯು ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಸೂಪರ್‌ ಅಮೋಲ್ಡ್‌ಸ್ಕ್ರೀನ್‌ ಹೊಂದಿದ್ದು, 1080 ಸಾಮರ್ಥ್ಯದ ವಿಡಿಯೊ ವೀಕ್ಷಣೆಗೆ ಬೆಸ್ಟ್ ವೇದಿಕೆ ಆಗಿದೆ. ಹಾಗೆಯೇ 19.5:9ನಷ್ಟು ಡಿಸ್‌ಪ್ಲೇ ಅನುಪಾತವನ್ನು ಒಳಗೊಂಡಿದ್ದು, ಇದಲ್ಲದೆ ಈ ಡಿಸ್‌ಪ್ಲೇ ವಾಟರ್‌ಡ್ರಾಪ್‌ ನಾಚ್‌ ಶೈಲಿಯ ವಿನ್ಯಾಸವನ್ನು ಹೊಂದಿದ್ದು ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವ ನೀಡಲಿದೆ. ಅಲ್ಲದೆ ಉತ್ತಮ ವಿಡಿಯೋ ಕರೆಗಳ ಅನುಭವ ಸಿಗಲಿದೆ.

ಪ್ರೊಸೆಸರ್‌ ಕಾರ್ಯವೈಖರಿ

ಪ್ರೊಸೆಸರ್‌ ಕಾರ್ಯವೈಖರಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ exynos 9611 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ 6GB RAM ಮತ್ತು 64GB ಶೇಖರಣಾ ಸಾಮರ್ಥ್ಯ ಹಾಗೂ 6GB RAM ಮತ್ತು 128GB ಸಾಮರ್ಥ್ಯ ಹೊಂದಿರುವ ವೆರಿಯೆಂಟ್‌ ಆಯ್ಕೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದ್ದು, ಮೆಮೊರಿ ಕಾರ್ಡ ಮೂಲಕ 512GB ವರೆಗೆ ಶೇಖರಣಾ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಈ ಪ್ರೊಸೆಸರ್ ಗೇಮಿಂಗ್ ಅತ್ಯುತ್ತಮ ಪ್ಲಾಟ್‌ಫಾರ್ಮ್ ಒದಗಿಸಲಿದೆ. ಹಾಗೆಯೇ ಆಂಡ್ರಾಯ್ಡ್ 10 ಓಎಸ್‌ ಮತ್ತು UI 2.0 ಸ್ಕೀನ್ ಓಎಸ್‌ ಇರುವುದರಿಂದ ಸೆಟ್ಟಿಂಗ್‌ನಲ್ಲಿ ನೂತನ ಆಯ್ಕೆಗಳು ಕಾಣಿಸುತ್ತವೆ.

ಕ್ವಾಡ್ ಕ್ಯಾಮೆರಾ ವಿನ್ಯಾಸ

ಕ್ವಾಡ್ ಕ್ಯಾಮೆರಾ ವಿನ್ಯಾಸ

ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸ್ಯಾಮ್‌ಸಂಗ್ ISOCELL ಬ್ರೈಟ್‌ GW1 ಸೆನ್ಸಾರ್‌ ಜೊತೆಗೆ f/ 1.8 ಲೆನ್ಸ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್ f/ 2.2 ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ, ಮೂರು ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿವೆ. ಸ್ಲೋ ಮೋಷನ್, ಸೂಪರ್ ಸ್ಲೋ ಮೋಷನ್ ಮತ್ತು ಹೈಪರ್ ಲ್ಯಾಪ್ಸ್‌ ಆಯ್ಕೆಗಳು ಇವೆ. ಇದಲ್ಲದೆ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಈ ಕ್ಯಾಮೆರಾಗಳಲ್ಲಿ ನೈಟ್ ಮೋಡ್, ಸೂಪರ್ ಸ್ಟೆಡಿ ಮೋಡ್ ‌ಅನ್ನು ನೀಡಲಾಗಿದೆ.

ದೈತ್ಯ ಬ್ಯಾಟರಿ ಲೈಫ್

ದೈತ್ಯ ಬ್ಯಾಟರಿ ಲೈಫ್

ಸ್ಯಾಮ್‌ಸಂಗ್ ಗ್ಯಾಲಕ್ಸಿ m31 ಸ್ಮಾರ್ಟ್‌ಫೋನಿನ ಜೀವ ಮತ್ತು ಆಕರ್ಷಕ ಅಂಶ ಅಂದರೇ ಅದುವೇ ಇದರ ಬ್ಯಾಟರಿ. ಒಟ್ಟು 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 26 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಹಾಗೂ 119 ಗಂಟೆಗಳ ಮ್ಯೂಸಿಕ್‌ ಪ್ಲೇಬ್ಯಾಕ್ ಅನ್ನು ನೀಡಲಿದೆ. ಅಲ್ಲದೆ ಇದು 15W ವೇಗದ ಚಾರ್ಜಿಂಗ್‌ಅನ್ನು ಬೆಂಬಲಿಸಲಿದೆ. ಚಾರ್ಜ್‌ ವೇಗವಾಗಿ ಪಡೆದುಕೊಳ್ಳುತ್ತದೆ ಮತ್ತು ಉತ್ತಮ ಬ್ಯಾಕ್‌ಅಪ್ ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ, ಬ್ಲೂಟೂತ್, ಜಿಪಿಎಸ್, ಯುಎಸ್‌ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಎಷ್ಟು

ಬೆಲೆ ಎಷ್ಟು

ಸ್ಯಾಮ್‌ಸಂಗ್ ಗ್ಯಾಲಕ್ಸಿ M31 64GB ಶೇಖರಣಾ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬೆಲೆ 15,999 ರೂ, ಹಾಗೂ 128GB ಶೇಖರಣಾ ಸಾಮರ್ಥ್ಯದ ಆಯ್ಕೆಯ ಸ್ಮಾರ್ಟ್‌ಫೋನ್‌ ಬೆಲೆ 16,999 ರೂ. ಆಗಿದೆ. ಈ ಫೋನ್ ಇದೇ ಮಾರ್ಚ್ 5, ರಿಂದ ಸೇಲ್ ಆರಂಭಿಸಲಿದೆ. ಓಷನ್ ಬ್ಲೂ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿವೆ.

ಕೊನೆಯ ಮಾತು

ಕೊನೆಯ ಮಾತು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ31 ಸ್ಮಾರ್ಟ್‌ಫೋನ್ ಹೊಸತನದ ಆಕರ್ಷಣೆ ಹೊಂದಿಲ್ಲ. ಗ್ಯಾಲಕ್ಸಿ M30S ಸ್ಮಾರ್ಟ್‌ಫೋನಿನ ನೆಕ್ಸ್ಟ್ ಆವೃತ್ತಿಯಂತೆ ಕಂಡುಬರುತ್ತದೆ ಎನ್ನುವ ಹಣೆಪಟ್ಟಿಯನ್ನು ಹೊರತುಪಡಿಸಿ ನೋಡುವುದಾದರೇ ಈ ಫೋನ್ ಖಂಡಿತಾ ಬಜೆಟ್ ಬೆಲೆಗೆ ದೈತ್ಯ ಸ್ಮಾರ್ಟ್‌ಫೋನ್ ಎನ್ನುವುದರಲ್ಲಿ ಎರಡು ಮಾತಿಲ್ಲ.

Best Mobiles in India

English summary
The phone is available for purchase March 05, 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X