ಮೊಬೈಲ್ ಖರೀದಿಸಬೇಕೇ? ಕಾಯಿರಿ..! ಜು.17ಕ್ಕೆ ಬರುತ್ತೆ Samsungನ ಹೊಸ ಫೋನ್
ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡಿದೆ. ಇದೀಗ Galaxy 'M' ಸರಣಿಯಲ್ಲಿ ನೂತನ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜಾಗಿದೆ. Samsung Galaxy M35 5G ಹೆಸರಿನಲ್ಲಿ ಇದೇ ಜುಲೈ 17 ರಂದು ಭಾರತದಲ್ಲಿ ನೂತನ ಫೋನ್ ಅಧಿಕೃತವಾಗಿ ಲಾಂಚ್ ಮಾಡಲಿದೆ. ಇದಕ್ಕೆ ಸಂಬಂಧಿಸಿದಂತೆ Amazon ನಲ್ಲಿ ಮೈಕ್ರೋಸೈಟ್ ಒಂದನ್ನು ಮೀಸಲಿಟ್ಟಿದ್ದು, Galaxy M35 ಅನ್ನು 'ಪ್ರೈಮ್ ಡೇ ಸೇಲ್' (Amazon Prime Day Sale) ವಿಶೇಷವಾಗಿ ಅನಾವರಣಗೊಳಿಸಲಿದೆ. ಈ 'ಪ್ರೈಮ್ ಡೇ' ಜುಲೈ 20 ಮತ್ತು 21 ರಂದು ನಡೆಯಲಿದೆ.
ಕಳೆದ ಮೇ ತಿಂಗಳಿನಲ್ಲಿ ಈ Samsung Galaxy M35 5G ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಗೆ (ಬ್ರೆಜಿಲ್‌ನಲ್ಲಿ) ಲಗ್ಗೆ ಇಟ್ಟಿತ್ತು. ಇದೀಗ, ಸ್ಯಾಮ್‌ಸಂಗ್ ಇಂಡಿಯಾದಲ್ಲಿ ಮುಂದಿನ 'M' ಸರಣಿಯ ಫೋನಿನ ಬಿಡುಗಡೆ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈ ಮೊಬೈಲ್ ಅನ್ನು 6000mAh ಬ್ಯಾಟರಿಯೊಂದಿಗೆ ಪರಿಚಯಿಸಲಾಗುತ್ತಿದೆ. ಇದು 6.6 ಇಂಚಿನ ಫುಲ್ HD+ ಸೂಪರ್ ಅಮೋಲ್ಡ್ ಡಿಸ್‌ಪ್ಲೇ, 50MP ಕ್ಯಾಮೆರಾವನ್ನು ಹೊಂದಿರಲಿದೆ. ಇನ್ನುಳಿದಂತೆ, ಏನೆಲ್ಲಾ ಫೀಚರ್ಸ್ ಇರಲಿದೆ ಮತ್ತು ಬೆಲೆ ಎಷ್ಟು? ಎನ್ನುವುದನ್ನು ನೋಡೋಣ ಬನ್ನಿ.

Samsung Galaxy M35 5Gನ ವಿಶೇಷತೆಗಳೇನು?
ಡಿಸ್‌ಪ್ಲೇ ಹೇಗಿರಲಿದೆ?: ಸ್ಯಾಮ್‌ಸಂಗ್‌ನ ಹೊಸ ಫೋನ್ ಅನ್ನು 6.6 ಇಂಚಿನ ಫುಲ್ HD+ ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿರಲಿದೆ. ಇದು 1080×2340 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಪಡೆದಿದೆ. ಮತ್ತು 1,000 nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು Galaxy M34 ನಲ್ಲಿನ 6.5 ಇಂಚಿನ ಪ್ಯಾನೆಲ್‌ಗಿಂತ ಸ್ವಲ್ಪ ದೊಡ್ಡದಾಗಿದೆ.
ಪ್ರೊಸೆಸರ್ ಯಾವುದು?: ಕಂಪನಿಯು ಆಕ್ಟಾ-ಕೋರ್ 5G ಪ್ರೊಸೆಸರ್ Exynos 1380 ಚಿಪ್‌ಸೆಟ್‌ನೊಂದಿಗೆ Samsung Galaxy M35 5G ಅನ್ನು ತರಲಿದೆ. ಇದರ ಹಿಂದಿನ ಸರಣಿಯ ಸ್ಮಾರ್ಟ್‌ಫೋನ್ Exynos 1280 ಚಿಪ್‌ಸೆಟ್‌ನೊಂದಿಗೆ ರನ್ ಆಗಲಿದೆ. ಈ ಫೋನ್ ಆಂಡ್ರಾಯ್ಡ್ 14 ಆಧಾರಿತ One UI 6.1 ಲೇಯರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಸ್ಟೋರೇಜ್ ಆಯ್ಕೆಗಳು: ಈ ಫೋನ್ ಅನ್ನು ಬ್ರೆಜಿಲ್‌ನಲ್ಲಿ 8 GB RAM ಮತ್ತು 256 GB ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನು ಮೈಕ್ರೊ SD ಕಾರ್ಡ್ ಮೂಲಕ ಮತ್ತಷ್ಟು ವಿಸ್ತರಿಸಬಹುದಾಗಿದೆ.
ಕ್ಯಾಮೆರಾ ಸೆಟಪ್: ಸ್ಯಾಮ್‌ಸಂಗ್ ಕಂಪನಿಯು ಫೋನ್ ಅನ್ನು 50MP OIS ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸಂವೇದಕದೊಂದಿಗೆ ತರಲಾಗುತ್ತಿದೆ. ಇದು Galaxy M34 ನಂತೆಯೇ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನ್ ಅನ್ನು 13MP ಮುಂಭಾಗದ ಕ್ಯಾಮೆರಾದೊಂದಿಗೆ ಪರಿಚಯಿಸಲಾಗುತ್ತಿದೆ. ಇದು Galaxy M34 ನ 16MP ಶೂಟರ್‌ನಿಂದ ಡೌನ್‌ಗ್ರೇಡ್ ಆಗಿದೆ.

ಬ್ಯಾಟರಿ ಬ್ಯಾಕಪ್: ಕಂಪನಿಯು Samsung Galaxy M35 5G ಅನ್ನು 6,000mAh ಬ್ಯಾಟರಿಯೊಂದಿಗೆ ಲೋಕಾರ್ಪಣೆಗೊಳಿಸಲಿದೆ. ಫೋನ್ ಅನ್ನು 25W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ತರಲಾಗುತ್ತಿದೆ.
ಕನೆಕ್ಟಿವಿಟಿ ಆಯ್ಕೆಗಳು: 5G SA /NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.3, GPS, ಗ್ಲೋನಾಸ್, ಬೀಡೌ, ಗೆಲಿಲಿಯೋ, QZSS, USB ಟೈಪ್-C 2.0ನಂತಹ ಸೌಲಭ್ಯಗಳನ್ನು ಪಡೆದಿರಲಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ.
ಬಣ್ಣಗಳ ಆಯ್ಕೆ: ಬ್ರೆಜಿಲ್‌ನಲ್ಲಿ, ಈ ಫೋನ್ ಅನ್ನು ಬಳಕೆದಾರರಿಗೆ ಮೂರು ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಗಾಢ ನೀಲಿ, ತಿಳಿ ನೀಲಿ ಮತ್ತು ಬೂದು ಬಣ್ಣಗಳಲ್ಲಿ ಲಭ್ಯವಿರಲಿದೆ. ಇದು 162.3 x 78.6 x 9.1mm ಅಳತೆ ಮತ್ತು 222 ಗ್ರಾಂ ತೂಕ ಹೊಂದಿರಲಿದೆ.


Click it and Unblock the Notifications








