Samsung Galaxy Z Flip 6 ಗ್ರ್ಯಾಂಡ್ ಲಾಂಚ್: ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! ಇನ್ಮುಂದೆ ಇದರದ್ದೇ ಹವಾ
ದಿ ವೇಟ್ ಈಸ್ ಓವರ್..! ಇದುವೇ ನೋಡಿ ಸ್ಯಾಮ್‌ಸಂಗ್ ಪ್ರಿಯರ ಹಾರ್ಟ್ ಫೇವರಿಟ್ ಫೋನ್. ಸ್ಯಾಮ್‌ಸಂಗ್ (Samsung) ಪ್ಯಾರಿಸ್‌ನಲ್ಲಿ ನಡೆದ Galaxy Unpacked ಸಮಾರಂಭದಲ್ಲಿ ತನ್ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ Galaxy Z Flip 6 ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದು Galaxy Z ಫ್ಲಿಪ್ 5 ನಂತೆಯೇ ಅದೇ ವಿನ್ಯಾಸವನ್ನು ಹೊಂದಿದ್ದರೂ, ಈ ಹೊಸ ಫೋಲ್ಡಬಲ್ ಫೋನ್ Galaxy AI ಫೀಚರ್ಸ್ ಮತ್ತು 50MP ಮುಖ್ಯ ಕ್ಯಾಮೆರಾ ಸೇರಿದಂತೆ ಹಲವು ಅಪ್ಡೇಟ್‌ಗಳೊಂದಿಗೆ ಲೋಕಾರ್ಪಣೆಗೊಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಫೋನ್‌ಗೆ ಹೋಲಿಸಿದರೆ ಇದು ದೊಡ್ಡ 4,000mAh ಬ್ಯಾಟರಿಯನ್ನು ಹೊಂದಿದೆ. Galaxy Z Flip 6ನ ಇನ್ನುಳಿದ ವಿಶೇಷತೆಗಳೇನು? ಬೆಲೆ ಎಷ್ಟು? ತಿಳಿಯೋಣ ಬನ್ನಿ.
Samsung Galaxy S24 ಸರಣಿಯಂತೆಯೇ, Samsung Galaxy Z Flip 6 ಫೋನ್ ಕೂಡ Galaxy AIನೊಂದಿಗೆ ಲಾಂಚ್ ಆಗಿದೆ. ಇದು 6.7 ಇಂಚಿನ FHD+ ಡೈನಾಮಿಕ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 3.4 ಇಂಚಿನ ಸೂಪರ್ AMOLED ಸೆಕೆಂಡರಿ ಪ್ಯಾನೆಲ್ ಜೊತೆಗೆ 60Hz ರಿಫ್ರೆಶ್ ದರವನ್ನು ಹೊಂದಿದೆ. ಹುಡ್ ಅಡಿಯಲ್ಲಿ, ಈ ಫೋನ್ 12GB RAM ಮತ್ತು 512GB ವರೆಗಿನ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ಸೆಟಪ್ ಮತ್ತು ಬ್ಯಾಟರಿ ಹೇಗಿದೆ?
ಈ ಫೋನ್‌ನ ಕ್ಯಾಮೆರಾ ಸೆಟಪ್ ಬಗ್ಗೆ ಹೇಳುವುದಾದರೆ, Galaxy Z Flip 6 ಸ್ಮಾರ್ಟ್‌ಫೋನ್‌ನಲ್ಲಿ ನೀವು 50MP ವೈಡ್-ಆಂಗಲ್ ಕ್ಯಾಮೆರಾವನ್ನು ಪಡೆಯುತ್ತೀರಿ. ಇದು Z Flip 5ನಲ್ಲಿನ 12MP ಕ್ಯಾಮೆರಾಕ್ಕೆ ವಿರುದ್ಧವಾಗಿದೆ. 50MP ಕ್ಯಾಮೆ ಸಂವೇದಕವು 12MP ಕ್ಯಾಮೆರಾದೊಂದಿಗೆ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10MP ಫ್ರಂಟ್ ಕ್ಯಾಮೆರಾ ಇದೆ. ಇದಲ್ಲದೆ, ಈ ಫೋನ್ 25W ವೇಗದ ಚಾರ್ಜಿಂಗ್ ಬೆಂಬಲ ಮತ್ತು ವೇಗದ ವೈರ್‌ಲೆಸ್ ಚಾರ್ಜಿಂಗ್ 2.0 ಅನ್ನು ಪಡೆದಿದೆ. ವೈರ್‌ಲೆಸ್ ಪವರ್‌ಶೇರ್‌ನೊಂದಿಗೆ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
Galaxy Z Flip 6 ಫೋನ್ Android 14 OS ಅನ್ನು One UI 6.1.1ನೊಂದಿಗೆ ರನ್ ಮಾಡುತ್ತದೆ. ಮತ್ತು ಏಳು ವರ್ಷಗಳ OS ಅಪ್ಡೇಟ್‌ಗಳು ಮತ್ತು ಭದ್ರತಾ ಅಪ್ಡೇಟ್‌ಗಳನ್ನು ನೀವು ಪಡೆಯಬಹುದು. ಇದು ಆವಿ ಕೂಲಿಂಗ್ ಚೇಂಬರ್‌ನೊಂದಿಗೆ ಬಿಡುಗಡೆಯಾದ ಮೊದಲ ಫ್ಲಿಪ್ ಸರಣಿಯ ಫೋನ್ ಆಗಿದೆ. ಇತ್ತೀಚಿನ ಫ್ಲಿಪ್ ಫೋನ್ ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಅಧಿಕೃತ IP48 ರೇಟಿಂಗ್ ಅನ್ನು ಸಹ ಹೊಂದಿದೆ.
Samsung Galaxy Z Flip 6 ಬೆಲೆ ಎಷ್ಟು?
ಇಷ್ಟೆಲ್ಲ ಭರಪೂರ ಫೀಚರ್ಸ್ ಹೊಂದಿರುವ ಈ ಫೋನ್‌ನ ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು? ಎಂಬ ಕುತೂಹಲ ನಿಮ್ಮಲ್ಲಿ ಮೂಡುವುದು ಸಹಜ. Samsung Galaxy Z Flip 6ನ 12GB + 256GB ಸ್ಟೋರೇಜ್ ಮಾದರಿಯ ಬೆಲೆ ಸುಮಾರು 91,800 ರೂ. ($1,099) ಇದೆ. 512GB ಸ್ಟೋರೇಜ್ ರೂಪಾಂತರದ ಬೆಲೆ ಸುಮಾರು 1,01,800 ರೂ. ($1,219) ಇದೆ.
ಜುಲೈ 24ರಿಂದ ಮಾರಾಟ ಪ್ರಾರಂಭ
ನೀವು ಈ Galaxy Z Flip 6 ಸ್ಮಾರ್ಟ್‌ಫೋನ್ ಅನ್ನು ಸಿಲ್ವರ್ ಶ್ಯಾಡೋ, ಹಳದಿ, ನೀಲಿ ಮತ್ತು ಪುದೀನ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. Galaxy Z Fold 6, Z Flip 6 ಮತ್ತು Galaxy Buds 3 ಸರಣಿಯ ಮುಂಗಡ ಬುಕ್ಕಿಂಗ್ ಇಂದಿನಿಂದ (ಜುಲೈ 10) Samsung ಬ್ರ್ಯಾಂಡ್‌ನ ಅಧಿಕೃತ ಸೈಟ್ ಮತ್ತು ಇತರ ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಆದರೆ, ಜುಲೈ 24 ರಿಂದ ಅಧಿಕೃತವಾಗಿ ಮಾರಾಟ ಪ್ರಾರಂಭಿಸಲಿದೆ.
Samsung Galaxy Z ಫ್ಲಿಪ್ 6ನ ಸಂಪೂರ್ಣ ಫೀಚರ್ಸ್
- ಡಿಸ್‌ಪ್ಲೇ: 6.7 ಇಂಚಿನ ಪೂರ್ಣ HD+ (2640 x 1080 ಪಿಕ್ಸೆಲ್‌ಗಳು) 21.9:9 ಡೈನಾಮಿಕ್ AMOLED 2X ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ. ಜೊತೆಗೆ 1~120Hz ಅಡಾಪ್ಟಿವ್ ರಿಫ್ರೆಶ್ ರೇಟ್.
- ಕವರ್ ಡಿಸ್ಪ್ಲೇ: 3.4 ಇಂಚಿನ (720 x 748 ಪಿಕ್ಸೆಲ್‌ಗಳು) ಸೂಪರ್ AMOLED ಡಿಸ್ಪ್ಲೇ, 60Hz ರಿಫ್ರೆಶ್ ದರ, 306 PPI, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ.
- ಪ್ರೊಸೆಸರ್: Adreno 750 GPU ಜೊತೆಗೆ Galaxy 4nm ಮೊಬೈಲ್ ಪ್ಲಾಟ್‌ಫಾರ್ಮ್‌ಗಾಗಿ 3.4GHz ಆಕ್ಟಾ-ಕೋರ್ Qualcomm Snapdragon 8 Gen 3 ಪ್ರೊಸೆಸರ್.
- ಸ್ಟೋರೇಜ್: 12GB LPDDR5X RAM ಜೊತೆಗೆ 256GB / 512GB UFS 4.0 ಸ್ಟೋರೇಜ್.
- ಸಿಮ್: ಒಂದು eSIM ಮತ್ತು ಒಂದು ನ್ಯಾನೋ ಸಿಮ್
- ಸಾಫ್ಟ್‌ವೇರ್: Android 14 ಜೊತೆಗೆ One UI 6.1.1
- ಬ್ಯಾಕ್ ಕ್ಯಾಮೆರಾ: ಡ್ಯುಯಲ್ ಕ್ಯಾಮ್, 50 MP ವೈಡ್ (f/1.8, 1.8 μm, OIS) + 12 MP ಅಲ್ಟ್ರಾ-ವೈಡ್ (f/2.2, 123° 1.12 μm).
- ಫ್ರಂಟ್ ಕ್ಯಾಮೆರಾ: 10MP ಫ್ರಂಟ್ ಕ್ಯಾಮೆರಾ ಜೊತೆಗೆ f/2.2 ಅಪರ್ಚರ್.
- ಪ್ರೊಟೆಕ್ಷನ್: ನೀರು ನಿರೋಧಕ (IP48 ರೇಟಿಂಗ್).
- ಆಡಿಯೋ: ಯುಎಸ್‌ಬಿ ಟೈಪ್-ಸಿ ಆಡಿಯೋ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್.
- ಅಳತೆ: Folded: 85.1 x 71.9 x 14.9mm. Unfolded: 165.1 x 71.9 x 6.9 mm
- ತೂಕ: 187 ಗ್ರಾಂ.
- ಬ್ಯಾಟರಿ: 4000mAh ಬ್ಯಾಟರಿ ಜೊತೆಗೆ 25w ವೇಗದ ಚಾರ್ಜಿಂಗ್, 15W Qi ವೈರ್‌ಲೆಸ್ ಚಾರ್ಜಿಂಗ್, ವೈರ್‌ಲೆಸ್ ಪವರ್‌ಶೇರ್ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್.
- ಕನೆಕ್ಟಿವಿಟಿ ಆಯ್ಕೆಗಳು: 5G, 4G, Wi-Fi 6E 802.11 ax (2.4GHz + 5GHz), ಬ್ಲೂಟೂತ್ 5.3 LE, USB ಟೈಪ್-C, NFC, GPS.


Click it and Unblock the Notifications








