Home
ಮೊಬೈಲ್

ಹೊಸ ಫೋನ್‌ ಖರೀದಿಸುತ್ತಿದ್ದೀರಾ? ಸ್ವಲ್ಪ ಇರಿ, ಮುಂದಿನ ತಿಂಗಳು ಬೊಂಬಾಟ್‌ ಫೋನ್‌ಗಳು ಬರಲಿವೆ

ಹೊಸ ಸ್ಮಾರ್ಟ್‌ಫೋನ್‌ (Smartphone) ಅನ್ನು ಖರೀದಿ ಮಾಡಲು ಮುಂದಾಗಿದ್ದರೆ ನೀವು ಸ್ವಲ್ಪ ಸಮಯದ ವರೆಗೆ ಕಾಯಬಹುದು. ಹಾಗಂದ ಮಾತ್ರಕ್ಕೆ ಈಗಾಗಲೇ ಲಾಂಚ್‌ ಆಗಿರುವ ಫೋನ್‌ಗಳು ಉತ್ತಮ ಎಂದು ಅಲ್ಲ. ಬದಲಾಗಿ ಇನ್ನಷ್ಟು ಸುಧಾರಿತ ಫೀಚರ್ಸ್‌ ಆಯ್ಕೆ ಇರುವ ಫೋನ್‌ಗಳನ್ನು ಮುಂದಿನ ತಿಂಗಳು ನೋಡಬಹುದಾಗಿದೆ.

ಹೌದು, ಮುಂದಿನ ತಿಂಗಳು ಕೆಲವು ಪ್ರಮುಖ ಫೋನ್‌ಗಳು ಲಾಂಚ್‌ ಆಗಲಿವೆ. ಈ ಫೋನ್‌ಗಳು ಈಗಾಗಲೇ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಸೌಂಡ್‌ ಮಾಡುತ್ತಿದ್ದು, ಇವುಗಳನ್ನು ಖರೀದಿ ಮಾಡಲು ಈಗಾಗಲೇ ಗ್ರಾಹಕರು ತಯಾರಾಗಿ ನಿಂತಿದ್ದಾರೆ. ಹಾಗಿದ್ರೆ, ಏಪ್ರಿಲ್‌ನಲ್ಲಿ ಲಾಂಚ್‌ ಆಗಲಿರುವ ಹೊಸ ಫೋನ್‌ಗಳು ಯಾವುವು? ಇವುಗಳ ಫೀಚರ್ಸ್‌ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಹೊಸ ಫೋನ್‌ ಖರೀದಿಸುತ್ತಿದ್ದೀರಾ? ಮುಂದಿನ ತಿಂಗಳು ಬೊಂಬಾಟ್‌ ಫೋನ್‌ಗಳು ಬರಲಿವೆ...

2024 ರ ಮೊದಲ ಮೂರು ತಿಂಗಳು ಸ್ಯಾಮ್‌ಸಂಗ್, ಒನ್‌ಪ್ಲಸ್ ಮತ್ತು ಇತರ ಸ್ಮಾರ್ಟ್‌ಫೋನ್‌ ತಯಾರಕರಿಂದ ಬಜೆಟ್ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳನ್ನು ನಿರೀಕ್ಷೆ ಮಾಡಬಹುದಾಗಿದೆ. ಅಂದರೆ ಮುಂದಿನ ತಿಂಗಳು ಒನ್‌ಪ್ಲಸ್, ಸ್ಯಾಮ್‌ಸಂಗ್‌, ರಿಯಲ್‌ಮಿ ಮತ್ತು ಮೊಟೊರೊಲಾ (OnePlus, Samsung, Realme and Motorola) ಸೇರಿದಂತೆ ಅನೇಕ ಪ್ರಮುಖ ಬ್ರ್ಯಾಂಡ್‌ ಗಳಿಂದ ಉತ್ತಮವಾದ ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗಲಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M55: ಈ ಸ್ಮಾರ್ಟ್‌ಫೋನ್ (Samsung Galaxy M55) ಸ್ಯಾಮ್‌ಸಂಗ್‌ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ M55, ಗ್ಯಾಲಕ್ಸಿ A35 ಮತ್ತು ಗ್ಯಾಲಕ್ಸಿ A55 ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಗ್ಯಾಲಕ್ಸಿ M55 8 GB RAM ಮತ್ತು 256 GB ವರೆಗಿನ ಇಂಟರ್‌ ಸ್ಟೋರೇಜ್‌ ಆಯ್ಕೆ ಪಡೆಯಲಿದ್ದು, ಸ್ನಾಪ್‌ಡ್ರಾಗನ್ 7 ಜನ್‌ 1 ನೊಂದಿಗೆ ಕಾಣಿಸಿಕೊಳ್ಳಲಿದ್ದು, 30,000ರೂ.ಗಳ ಆಸುಪಾಸಿನಲ್ಲಿ ಲಭ್ಯ ಆಗಬಹುದು ಎನ್ನಲಾಗಿದೆ.

ಹೊಸ ಫೋನ್‌ ಖರೀದಿಸುತ್ತಿದ್ದೀರಾ? ಮುಂದಿನ ತಿಂಗಳು ಬೊಂಬಾಟ್‌ ಫೋನ್‌ಗಳು ಬರಲಿವೆ...

ಒನ್‌ಪ್ಲಸ್‌ ನಾರ್ಡ್‌ CE 4: ನಾರ್ಡ್ ಲೈನ್- ಅಪ್‌ಗೆ ಈ ಹೊಸ ಫೋನ್‌ (OnePlus Nord CE 4) ಸೇರಿಸುತ್ತಿದೆ. ಒನ್‌ಪ್ಲಸ್‌ ನಾರ್ಡ್‌ CE 4 ಏಪ್ರಿಲ್ 1, 2024 ರಂದು ಲಾಂಚ್‌ ಆಗಲಿದ್ದು, ಈ ಫೋನ್ 8 GB RAM ಮತ್ತು 256 GB ಇಂಟರ್‌ ಸ್ಟೋರೇಜ್ ಆಯ್ಕೆ ಪಡೆಯಲಿದ್ದು, ಸ್ನಾಪ್‌ಡ್ರಾಗನ್ 7 ಜನ್ 3 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ನೊಂದಿಗೆ 1.5K ರೆಸಲ್ಯೂಶನ್ ಡಿಸ್‌ಪ್ಲೆ ಸಾಮರ್ಥ್ಯ ಹೊಂದಿರಲಿದೆ ಎಂದು ತಿಳಿದು ಬಂದಿದೆ.

ಮೊಟೊ ಎಡ್ಜ್‌ 50 ಪ್ರೊ: ಈ ಸ್ಮಾರ್ಟ್‌ಫೋನ್ (Moto Edge 50 Pro) ಅನ್ನು ಏಪ್ರಿಲ್ 3, 2024 ರಂದು ಲಾಂಚ್‌ ಮಾಡಲಾಗುತ್ತದೆ.ಇದು ಸ್ನಾಪ್‌ಡ್ರಾಗನ್ 8 ಜನ್ 3 ಪ್ರೊಸೆಸರ್‌ ಬಲದಲ್ಲಿ ಕಾಣಿಸಿಕೊಳ್ಳಲಿದ್ದು, 144Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ 6.7 ಇಂಚಿನ 1.5K ರೆಸಲ್ಯೂಶನ್ ಕರ್ವ್ಡ್ OLED ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಈ ಎಡ್ಜ್ 50 ಪ್ರೊ ಪ್ಯಾಂಟೋನ್ ಮೌಲ್ಯೀಕರಿಸಿದ ಬಣ್ಣಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿರಲಿದೆ.

ಹೊಸ ಫೋನ್‌ ಖರೀದಿಸುತ್ತಿದ್ದೀರಾ? ಮುಂದಿನ ತಿಂಗಳು ಬೊಂಬಾಟ್‌ ಫೋನ್‌ಗಳು ಬರಲಿವೆ...

ರಿಯಲ್‌ಮಿ GT 5 ಪ್ರೊ: ರಿಯಲ್‌ಮಿ ತನ್ನ ಪ್ರಮುಖ GT 5 ಪ್ರೊ (Realme GT 5 Pro) ಅನ್ನು ಶೀಘ್ರದಲ್ಲೇ ಪರಿಚಯಿಸುವ ನಿರೀಕ್ಷೆಯಿದೆ. GT 5 ಪ್ರೊ ಲೋಹದ ಚೌಕಟ್ಟು ಮತ್ತು ಲೆದರ್‌ ಪ್ಯಾನಲ್‌ ಅನ್ನು ಹೊಂದಿರಲಿದ್ದು, 100W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ ಬರೋಬ್ಬರಿ 5,400 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿಲಿದೆ ಎಂದು ಈಗಾಗಲೇ ದೃಢವಾಗಿದೆ.

Best Mobiles in India

English summary
many flagship smartphone include Samsung Galaxy M55, OnePlus Nord CE 4, Moto Edge 50 Pro will be launched in April.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+