Subscribe to Gizbot

ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2 vs ನೋಕಿಯಾ ಲೂಮಿಯಾ 920

Posted By: Vijeth

ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2 vs ನೋಕಿಯಾ ಲೂಮಿಯಾ 920

ಸ್ಯಾಮ್ಸಂಗ್‌ ತನ್ನಯ ನೂತನ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ನೋಟ್‌ 2 ಫಾಬ್ಲೆಟ್‌ ಅನ್ನು ಕಳೆದವಾರವಷ್ಟೇ ಭಾರತೀಯ ಮಾರುಕಟ್ಟೆಗೆ ರೂ.39,990 ಬೆಲೆಗೆ ಬಿಡುಗಡೆ ಮಾಡಿದೆ. ಅಂದಹಾಗೆ ಈ ನೂತನ ಫಾಬ್ಲೆಟ್‌ಗೆ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡಬಲ್ಲ ಸ್ಮಾರ್ಟ್‌ಫೋನ್‌ಗಳಿದ್ದು ಜನ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ತಾನೆ ನೋಕಿಯಾ ತನ್ನಯ ನೂತನ ವಿಂಡೋಸ್‌ ಫೋನ್‌ 8 ಆಪರೇಟಿಂಗ್‌ ಸಿಸ್ಟಂ ಚಾಲಿತ ನೋಕಿಯಾ ಲೂಮಿಯಾ 920 ಅನಾವರಣ ಗೊಳಿಸಿದೆ, ನೋಕಿಯಾದ ಈ ನೂತನ ಫೋನ್ ಸೆಪ್ಟೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದ್ದು ಗ್ಯಾಲಾಕ್ಸಿ ನೋಟ್‌ಗೆ ಪ್ರಬಲ ಪೈಪೋಟಿ ನೀಡಬಲ್ಲ ಸ್ಮಾರ್ಟ್‌ಫೋನ್‌ ಎಂದೆನಿಸಿಕೊಂಡಿದೆ.

ಅಂದಹಾಗೆ ಗ್ಯಾಲಾಕ್ಸಿ ನೋಟ್‌ 2 ಹಾಗೂ ನೋಕಿಯಾ ಲೂಮಿಯಾ 920 ಗಳಲ್ಲಿ ಯಾವುದನ್ನು ಖರೀದಿಸುವುದು ಎಂದು ಆಲೋಚಿಸುತ್ತಿದ್ದೀರ? ಹಾಗಿದ್ದಲ್ಲಿ ಇವೆರಡರ ನಡಿವಿನ ಹೋಲಿಕೆಯನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

ಗಾತ್ರ ಹಾಗೂ ಸುತ್ತಳತೆ: ಗ್ಯಾಲಾಕ್ಸಿ ನೋಟ್‌ 2 ಫಾಬ್ಲೆಟ್‌ 151.1 x 80.5 x 9.4 mm ಸುತ್ತಳತೆಯೊಂದಿಗೆ 180 ಗ್ರಾಂ ತೂಕವಿದ್ದರೆ, ಮೋಕಿಯಾ ಲೂಮಿಯಾ 920 ಸ್ಮಾರ್ಟ್‌ಫೋನ್‌ 130.3 x 70.8 x 10.7 mm ಸುತ್ತಳತೆಯೊಂದಿಗೆ 185 ಗ್ರಾಂ ತೂಕವಿದೆ.

ದರ್ಶಕ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ 5.5 ಇಂಚಿನ ಸೂಪರ್‌ AMOLED ಟಚ್‌ಸ್ಕ್ರೀನ್‌ ದರ್ಶಕವಿದ್ದು 1280 x 720 ಪಿಕ್ಸೆಲ್‌ ರೆಸೆಲ್ಯೂಷನ್‌ ಹೊಂದಿದ್ದರೆ. ಲೂಮಿಯಾ 920 ಯಲ್ಲಿ 4.5 ಇಂಚಿನ ಪ್ಯೂರ್‌ ಮೋಷನ್‌ HD+ IPS LCD ಟಚ್‌ಸ್ಕ್ರೀನ್‌ ದರ್ಶಕ ದೊಂದಿಗೆ 1280 x 768 ಪಿಕ್ಸೆಲ್‌ ರೆಸೆಲ್ಯೂಷನ್‌ ನಿಂದ ಕೂಡಿದೆ.

ಎರಡೂ ಸಾಧನಗಳಲ್ಲಿಯೂ ಗೊರಿಲ್ಲಾ ಗ್ಲಾಸ್‌ 2 ಪ್ರೊಟೆಕ್ಷನ್‌ ಹೊಂದಿದ್ದು. ಹಾಗೂ ಹೆಚ್ಚವರಿಯಾಗಿ ಗ್ಯಾಲಾಕ್ಸಿ ನೋಟ್‌ 2ನಲ್ಲಿ S-Pen ಸೌಲಭ್ಯವಿದೆ.

ಪ್ರೊಸೆಸರ್‌: ಈ ವಿಭಾಗದಲ್ಲಿ ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಸ್ಯಾಮ್ಸಂಗ್‌ನ Exynos 4412 ಕ್ವಾಡ್‌ ಚಿಪ್‌ಸೆಟ್‌ ಹೊಂದಿದ್ದರೆ, ಲೂಮಿಯಾ 920 ಯಲ್ಲಿ ಡ್ಯುಯೆಲ್‌ ಕೋರ್‌ 1.5GHz ಕ್ವಾಲ್‌ಕಾಮ್‌ ಸ್ನಾಪ್‌ ಡ್ರಾಗನ್‌ S4 ಪ್ರೊಸೆಸರ್‌ ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ ಗೂಗಲ್‌ನ ನೂತನ ಆಂಡ್ರಾಯ್ಡ 4.1 ಜೆಲ್ಲಿ ಬೀನ್‌ OS ಇದ್ದರೆ, ಲೂಮಿಯಾ 920 ಯಲ್ಲಿ ವಿಂಡೋಸ್‌ ಫೋನ್‌ 8 OS ನಿಂದ ಕೂಡಿದೆ.

ಕ್ಯಾಮೆರಾ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ 8MP ನ ಹಿಂಬದಿಯ ಕ್ಯಾಮೆರಾ ಇದ್ದು ಆಟೋ ಫೋಕಸ್‌, LED ಫ್ಲಾಷ್‌, ಜಿಯೋ-ಟ್ಯಾಗಿಂಗ್‌, ಟಚ್‌ ಫೋಕಸ್‌, ಫೇಸ್‌, ಸ್ಮೈಲ್‌ ಡಿಟೆಕ್ಟರ್‌ ಹಾಗೂ ಇಮೇಜ್‌ ಸ್ಟೆಬಲೈಸರ್‌ನೊಂದಿಗೆ ವಿಡಿಯೋ ಕರೆಗಾಗಿ 1.9MP ಮುಂಬದಿಯ ಕ್ಯಾಮೆರಾ ಹೊಂದಿದೆ.

ಮತ್ತೊಂದೆಡೆ ಲೂಮಿಯಾ 920 ಕೊಂಚ ಹೆಚ್ಚಿನ 8.7MP ಕದಾಮೆರಾ ದೊಂದಿಗೆ LED ಫ್ಲಾಷ್‌, ಆಟೋ ಫೋಕಸ್‌ ಹಾಗೂ ಪ್ಯೂರ್‌ ವ್ಯೂ ಬ್ಯಾಂಡಿಂಗ್‌ ಸೇರಿದಂತೆ ವಿಡಿಯೋ ಕರೆಗಾಗಿ ಮುಂಬದಿಯ 1.2MP ಕ್ಯಾಮೆರಾ ಹೊಂದಿದೆ.

ಸ್ಟೋರೇಜ್‌: ಈ ವಿಭಾಗದಲ್ಲಿ ಗ್ಯಾಲಾಕ್ಸಿ ನೋಟ್‌ 2, 16GB, 32GB ಹಾಗೂ 64GB ಆಂತರಿ ಸ್ಟೋರೇಜ್‌ ಮಾದರಿಗಳ್ಲಿ ಲಭ್ಯವಿದ್ದು 2GB RAM ಸೇರಿದಂತೆ 32GB ವರೆಗಿನ ಮೆಮೊರಿ ವಿಸ್ತರಣೆ ಹೊಂದಿದೆ. ಮತ್ತೊಂದೆಡೆ ಲೂಮಿಯಾ 920 ಯಲ್ಲಿ 32GB ಆಂತರಿಕ ಮೆಮೊರಿ ಹಾಗು 1GB RAM ಹೊಂದಿದ್ದು ಮೈಕ್ರೋ ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ವಿಸ್ತರಣೆಯ ಸೌಲಭ್ಯವಿಲ್ಲ.

ಕನೆಕ್ಟಿವಿಟಿ: ಈ ವಿಭಾಗದಲ್ಲಿ ಎರಡೂ ಸಾದನಗಳಲ್ಲಿ 3G, NFC, 4G LTE, Wi-Fi 802.11 a/b/g/n, DLNA, Wi-Fi ಡರೆಕ್ಟ್‌, Wi-Fi ಹಾಟ್‌ಸ್ಪಾಟ್‌, ಬ್ಲೂಟೂತ್‌ 4.0 / A2DP ಹಾಗೂ EDR ಸೇರಿದಂತೆ ಮೈಕ್ರೋ USB 2.0 ಹೊಂದಿವೆ.

ಬ್ಯಾಟರಿ: ಗ್ಯಾಲಾಕ್ಸಿ ನೋಟ್‌ 2 ನಲ್ಲಿ 3,100 mAh Li-ion ಬ್ಯಾಟರಿ ಇದ್ದರೆ, ಲೂಮಿಯಾ 920 ಯಲ್ಲಿ 2,000 mAh BP-4GW ಬ್ಯಾಟರಿ ಇದ್ದು 400 ಗಂಟೆಗಳ ಸ್ಟ್ಯಾಂಡ್‌ಬೈ ಹಾಗೂ 10 ಗಂಟೆಗಳ ಟಾಕ್‌ಟೈಮ್‌ ನೀಡುತ್ತದೆ.

 

ಗ್ಯಾಲಾಕ್ಸಿ ನೋಟ್‌ 2 vs ಗ್ಯಾಲಾಕ್ಸಿ ನೋಟ್‌

Read In English...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot