'ಗ್ಯಾಲ್ಯಾಕ್ಸಿ ಎಸ್10 ಪ್ಲಸ್'ನ ಹಿಡೆನ್ ಕ್ಯಾಮೆರಾ ಫೀಚರ್ಸ್ ಬಗ್ಗೆ ನಿಮಗೆ ಗೊತ್ತಾ?
ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಕಿಂಗ್ ಸ್ಯಾಮ್‌ಸಂಗ್ ಇತ್ತೀಚಿಗೆ ಗ್ಯಾಲ್ಯಾಕ್ಸಿ ಎಸ್10 ಪ್ಲಸ್ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಗ್ರಾಹಕರ ಫೇವರೇಟ್ ಎನಿಸಿಕೊಂಡಿದೆ. ಹಲವು ಹೈ ಎಂಡ್ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಮತ್ತಷ್ಟು ವಿಶೇಷ ಫೀಚರ್ಸ್‌ಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಅವುಗಳ ಬಗ್ಗೆ ಬಹುಶಃ ನಿಮಗೆ ಗೊತ್ತಿರದಿರಬಹುದು.

ಹೌದು, ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್10 ಪ್ಲಸ್ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ, ಡ್ಯುಯಲ್ ಸೆಲ್ಫಿ, ಹೈ ಪವರ್ ಪ್ರೊಸೆಸರ್, ಬಿಗ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೇರಿದಂತೆ ಹಲವು ಹೊಸತನದ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಕ್ಯಾಮೆರಾ ಪ್ರಿಯ ಗ್ರಾಹಕರ ಗಮನ ಸೆಳೆದಿದೆ. ಆದರೆ ಕ್ಯಾಮೆರಾ ಆಯ್ಕೆಯಲ್ಲಿರುವ ಕೇಲವು ಉಪಯುಕ್ತ ಹಿಡೆನ್ ಫೀಚರ್ಸ್‌ಗಳಿದ್ದು, ಬಹುತೇಕರು ಅವುಗಳನ್ನು ಬಳಸುವುದೇ ಇಲ್ಲ.

ಗ್ಯಾಲ್ಯಕ್ಸಿ ಎಸ್10 ಪ್ಲಸ್ ಕ್ಯಾಮೆರಾ ಬೆಸ್ಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೇ ಕ್ಯಾಮೆರಾದಲ್ಲಿ ಲಭ್ಯವಿರುವ ಸ್ಪೆಷಲ್ ಫೀಚರ್ಸ್‌ಗಳು ಅತ್ಯುತ್ತಮ ಫೋಟೊ ಮತ್ತು ವಿಡಿಯೊ ಔಟ್‌ಪುಟ್‌ಗೆ ನೆರವಾಗುತ್ತವೆ. ಹಾಗಾದರೇ ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎಸ್10 ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿರುವ ಸ್ಪೆಷಲ್ ಫೀಚರ್ಸ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.

ಅಲ್ಟ್ರಾವೈಲ್ಡ್ ಆಂಗಲ್ ಶಾರ್ಟ್
ಮೂರು ಕ್ಯಾಮೆರಾ ಆಯ್ಕೆಗಳಲ್ಲಿ, ಮೂರನೇಯದ್ದು ಅಲ್ಟ್ರಾವೈಲ್ಡ್ ಆಂಗಲ್ ಫೋಟೊ ಕ್ಲಿಕ್ಕ್ ಮಾಡಲು ನೀಡಲಾಗಿದೆ. ಇದು ಸುಮಾರು 123 ಡಿಗ್ರಿ ವೈಲ್ಡ್ ಆಂಗಲ್ ಸಾಮರ್ಥ್ಯದ ಹೊಂದಿದ್ದು, ವಿಶಾಲವಾದ ಪೋಟೊ ಸೆರೆ ಹಿಡಿಯಲು ಉಪಯುಕ್ತ ಎನಿಸಲಿದೆ. ಕ್ಯಾಮೆರಾ ತೆರೆದು ಚಿತ್ರದಲ್ಲಿ ತೋರಿಸಿರುವ ಐಕಾನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ ವೈಲ್ಡ್ ಆಂಗಲ್ ಪೋಟೊ ತೆಗೆಯಬಹುದು.

ಸೂಪರ್ ಸ್ಟಡಿ ಮೋಡ್
ಸೂಪರ್ ಸ್ಟಡಿ ಮೋಡ್ ಆಯ್ಕೆಯ ನೆರವಿನಿಂದ ಸ್ಥಿರ್ ವಿಡಿಯೊ ಚಿತ್ರಿಕರಣ ಮಾಡಬಹುದಾಗಿದ್ದು, ಕ್ಯಾಮೆರಾದಲ್ಲಿರುವ OIS ಮತ್ತು ಕೇಲವು ತಂತ್ರಾಂಶಗಳು ಇದಕ್ಕೆ ಬೆಂಬಲ ನೀಡಲಿವೆ. ವಿಡಿಯೊ ರೆಸಲ್ಯೂಶನ್ 1080p ಗುಣಮಟ್ಟದಲ್ಲಿರಲಿದ್ದು, ಮೋಷನ್ ಮತ್ತು ಆಕ್ಷನ್ ಚಿತ್ರಿಕರಣದ ಸಮಯದಲ್ಲಿ ಈ ಸೂಪರ್ ಸ್ಟಡಿ ಮೋಡ್ ಆಯ್ಕೆಯನ್ನು ಆನ್ ಮಾಡಿಕೊಳ್ಳಬಹುದು. ಚಿತ್ರ ಗಮನಿಸಿ.

ಮೋಷನ್ ಫೋಟೊ
ಗ್ಯಾಲ್ಯಾಕ್ಸಿ ಎಸ್10 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಮೋಷನ್ ಫೋಟೊ ವೀಕ್ಷಿಸುವ ಆಯ್ಕೆಯನ್ನು ನೀಡಲಾಗಿದ್ದು, ಪ್ರತಿ ಫೋಟೊ ಸೆರೆಹಿಡಿಯುವ ಮುನ್ನ ಶಾರ್ಟ್ ವಿಡಿಯೊ ರೇಕಾರ್ಡ್ ಮಾಡಬಹುದಾಗಿದೆ. ಈ ಆಯ್ಕೆಯನ್ನು ಚಾಲ್ತಿಮಾಡಲು ಕ್ಯಾಮೆರಾ ಸೆಟ್ಟಿಂಗ್ ಲಿಸ್ಟ್‌ನಲ್ಲಿ ಕಾಣಿಸುವ ಮೋಷನ್ ಫೋಟೊಸ್ ಫೀಚರ್ ಆಯ್ಕೆಯನ್ನು ಅನ್ನು ಆನ್ ಮಾಡಬೇಕು.

ಸೇವ್ RAW ಪಿಚ್ಚರ್ಸ್
ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ನೋಡಬಹುದಾದ ಸೇವ್ RAW ಪಿಚ್ಚರ್ಸ್ ಆಯ್ಕೆಯನ್ನು ಗ್ಯಾಲ್ಯಾಕ್ಸಿ ಎಸ್10ಪ್ಲಸ್ ಒಳಗೊಂಡಿದ್ದು ಆಗಿದ್ದು, ಕ್ಯಾಮೆರಾದಲ್ಲಿ ಪ್ರೊ ಮೋಡ್ ಆಯ್ಕೆಯಲ್ಲಿ ಸೆರೆಹಿಡಿದ ಫೋಟೊಗಳು RAW ಪಿಚ್ಚರ್ಸ್‌ನಲ್ಲಿ ಸೇವ್ ಆಗುವುದು ಮತ್ತು ಹೆಚ್ಚಿನ್ ಮಾಹಿತಿಯನ್ನು ಹೊಂದಿರುತ್ತದೆ. ಆನ್ ಮಾಡಲು ಈ ಹಂತ ಫಾಲೋ ಮಾಡಿ ಕ್ಯಾಮೆರಾ ಸೆಟ್ಟಿಂಗ್ > ಸೇವ್ ಆಯ್ಕೆಗಳು > RAW ಕಾಪಿಸ್(ಪ್ರೊ).

ಲೈವ್ ಫೋಕಸ್ ಬಳಕೆ
ಗ್ಯಾಲ್ಯಾಕ್ಸಿ ಎಸ್10ಪ್ಲಸ್ ಫೋನ್‌ನಲ್ಲಿ ಫೋಟೊ ಸೆರೆಹಿಡಿವುವಾಗ ಬೇಕಾದ ಅಬ್ಜೆಕ್ಟ್‌ಗೆ ಮಾತ್ರ ಲೈವ್ ಫೋಕಸ್ ಮಾಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ಟೆಲಿಫೋಟೊ ಲೆನ್ಸ್ ನೀಡಲಾಗಿದೆ. ಆಟೋಮ್ಯಾಟಿಕ್ ಆಗಿ ಅದು ಬ್ಲರ್ ಮಾಡಿಕೊಳ್ಳುತ್ತದೆ ಆದರೆ ನೀವು ಲೈವ್ ಫೋಕಸ್ ಸೆಲೆಕ್ಟ್ ಮಾಡಿಕೊಳ್ಳುವ ಮೂಲಕ ನಿಗದಿತ ಅಬ್ಜೆಕ್ಟ್ ಅನ್ನು ಮಾತ್ರ ಪೋಕಸ್ ಮಾಡಿಕೊಳ್ಳಬಹುದು.

ಫ್ಲೋಟಿಂಗ್ ಕ್ಯಾಮೆರಾ ಶಟರ್
ಗ್ಯಾಲ್ಯಾಕ್ಸಿ ಎಸ್10 ಪ್ಲಸ್ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯು ಉದ್ದವಾಗಿದ್ದು, ಫೋಟೊ ಕ್ಲಿಕ್ಕ್ ಮಾಡುವಾಗ ಬೆರಳು ಶಟರ್ ಬಟನ್ ಒತ್ತಲು ಅನ್‌ಕಂಫರ್ಟ್ ಎನಿಸಬಹುದು. ಈ ಸಮಸ್ಯೆ ಆಗಬಾರದೆಂದು ಫ್ಲೋಟಿಂಗ್ ಶಟರ್ ಆಯ್ಕೆ ನೀಡಲಾಗಿದ್ದು, ಸಕ್ರಿಯ ಮಾಡುವ ಮೂಲಕ ಡಿಸ್‌ಪ್ಲೇಯಲ್ಲಿ ಎಕ್ಸ್‌ಟ್ರಾ ಶಟರ್ ಬಳಕೆ ಮಾಬಹುದು. (ಕ್ಯಾಮೆರಾ ಸೆಟ್ಟಿಂಗ್ > ಶೂಟಿಂಗ್ ಮೇಥೆಡ್ > ಫ್ಲೋಟಿಂಗ್ ಶಟರ್ ಬಟನ್)

ಗೆಸ್ಚರ್ ಫೋಟೊ ಕ್ಲಿಕ್ಕ್
ಈ ಸ್ಮಾರ್ಟ್‌ಫೋನಿನಲ್ಲಿ ಬಳಕೆದಾರರು ಫೋಟೊ ಸೆರೆಹಿಡಿಯಲು ಶಟರ್ ಬಟನ್ ಒತ್ತಬೇಕೆಂದಿಲ್ಲ ಏಕೆಂದರೇ, ಅಂಗೈ ಗೆಸ್ಚರ್ ಮೂಲಕವು ಫೋಟೊ ಕ್ಲಿಕ್ಕಿಸುವ ಆಯ್ಕೆಯನ್ನು ನೀಡಲಾಗಿದೆ. ಅದಕ್ಕಾಗಿ ಶೋ ಪಾಮ್ ಆಯ್ಕೆ ಸಕ್ರಿಯ ಮಾಡಬೇಕು. (ಕ್ಯಾಮೆರಾ ಸೆಟ್ಟಿಂಗ್ > ಶೂಟಿಂಗ್ ಮೇಥೆಡ್ > ಶೋ ಪಾಮ್).

ವಾಯಿಸ್ ಕ್ಲಿಕ್ಕ್
ವಾಯಿಸ್ ಮೂಲಕ ಸಹ ಫೋಟೊ ಸೆರೆಹಿಡಿಯುವ ಆಯ್ಕೆ ನೀಡಲಾಗಿದ್ದು, ಸ್ಮೈಲ್, ಚೀಸ್, ಶೂಟ್ ಅಥವಾ ಕ್ಯಾಪ್ಚರ್ ಪದಗಳನ್ನು ಕ್ಯಾಮೆರಾ ಗ್ರಹಿಸಲಿದೆ. ವಿಡಿಯೊಗಾಗಿ ರೇಕಾರ್ಡ್ ವಿಡಿಯೊ ಪದವನ್ನು ಬಳಸಬಹುದಾಗಿದೆ. ಈ ಆಯ್ಕೆಯನ್ನು ಸಕ್ರಿಯ ಮಾಡಲು ಈ ಹಂತಗಳನ್ನು ಫಾಲೋ ಮಾಡಿ. (ಕ್ಯಾಮೆರಾ ಸೆಟ್ಟಿಂಗ್ > ಶೂಟಿಂಗ್ ಮೇಥೆಡ್ > ವಾಯಿಸ್ ಕಂಟ್ರೋಲ್).


Click it and Unblock the Notifications








