ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ಫಸ್ಟ್ ಲುಕ್: ಜಬರ್ದಸ್ತ್ ಕ್ಯಾಮೆರಾ ಫೋನ್!
ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಪ್ರಮುಖ ಹೈಲೈಟ್ ಆಗಿದೆ. ಇದರೊಂದಿಗೆ ಸ್ಪೀಡ್ ಪ್ರೊಸೆಸರ್ ಮತ್ತು ಡಿಸೈನ್‌ನಂತಹ ಫೀಚರ್ಸ್‌ಗಳಿಂದಲೂ ಈ ಫೋನ್ ಮತ್ತಷ್ಟು ಟ್ರೆಂಡಿ ಅನಿಸಿಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 ಅಲ್ಟ್ರಾ ಫೋನ್ ಆಂತರಿಕ ಸ್ಟೋರೇಜ್‌ಗೂ ಪ್ರಾಮುಖ್ಯತೆ ನೀಡಿದ್ದು, 12GB ಮತ್ತು 16GB RAM ಸಾಮರ್ಥ್ಯದ ವೇರಿಯಂಟ್ ಆಯ್ಕೆ ಹೊಂದಿದೆ. ಕ್ಯಾಮೆರಾ ಪ್ರಿಯರನ್ನು ಸೆಳೆಯಲು 108ಎಂಪಿ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಸ್ಕ್ರೀನ್ ರೆಸಲ್ಯೂಶನ್ ಸಹ ಉತ್ತಮವಾಗಿದೆ. ಈ ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಲುಕ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳನ್ನು ಓದಿರಿ.

ಡಿಸ್‌ಪ್ಲೇ ಡಿಸೈನ್
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ 1,440x3,200 ಪಿಕ್ಸಲ್ ರೆಸಲ್ಯೂಶನ್ ಹೊಂದಿರುವ 6.8 ಇಂಚಿನ ಫುಲ್ ಎಡ್ಜ್ QHD+ ಪ್ಲಸ್ ಜೊತೆಗೆ ಡೈನಾಮಿಕ್ AMOLED ಡಿಸ್‌ಪ್ಲೇ ಹೊಂದಿದೆ. ಈ ಫೋನಿನ ಡಿಸ್‌ಪ್ಲೇ 120Hz ರೀಫ್ರೇಶ್ದ ರೇಟ್ ಅನ್ನು ಪಡೆದಿದ್ದು, HDR10+ ಬೆಂಬಲವನ್ನು ಒಳಗೊಂಡಿದೆ. ನೇರ ಸೂರ್ಯನ ಬೆಳಕಿನಲ್ಲಿ ಸಹ ಪರದೆಯು ಅದ್ಭುತ ಗೋಚರತೆಯನ್ನು ಉಳಿಸಿಕೊಂಡಿದೆ. ಸ್ಯಾಮ್‌ಸಂಗ್ ಶೈಲಿಯ ರೋಮಾಂಚಕ ಬಣ್ಣಗಳಿಗೆ ಆದ್ಯತೆ ನೀಡಿದರೆ, ಸ್ಕ್ರೀನ್ ಮೋಡ್ ಅನ್ನು ‘ವಿವಿದ್' ಗೆ ಹೊಂದಿಸಿ, ಇಲ್ಲದಿದ್ದರೆ ‘ನ್ಯಾಚುರಲ್' ಮೋಡ್ ಎಸ್‌ಆರ್‌ಜಿಬಿ ಪ್ರೊಫೈಲ್ ಅನ್ನು ಪರಿಣಾಮಕಾರಿಯಾಗಿ ನೀಡುತ್ತದೆ

ಪ್ರೊಸೆಸರ್ ದಕ್ಷತೆ
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ ಸಂಸ್ಥೆಯ ಆಕ್ಟಾ ಕೋರ್ Exynos 2100 SoC (ಸ್ನ್ಯಾಪ್‌ಡ್ರಾಗನ್ 888) ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ 12GB ಮತ್ತು 16GB RAM ಜೊತೆಗೆ ಅಧಿಕ ಆಂತರಿಕ ಸಂಗ್ರಹದ ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ. ವೇಗದ ಗೇಮಿಂಗ್ ಆಟಗಳಿಗೆ ಪೂರಕವಾಗಿದೆ.

ಕ್ಯಾಮೆರಾ ಸೆನ್ಸಾರ್
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ OIS ಸಪೋರ್ಟ್ ಜೊತೆಗೆ 108ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳು 12ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 10ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇದರೊಂದಿಗೆ ಸೆಲ್ಫಿಗಾಗಿ 40ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಮುಖ್ಯ ಕ್ಯಾಮೆರಾ ಟ್ರೆಂಡಿ ಆಗಿ ಕಾಣಿಸಲಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ ಚಾರ್ಜಿಂಗ್‌ಗಾಗಿ USB PD 3.0 ಸಪೋರ್ಟ್ ಜೊತೆಗೆ 2.0 ವಾಯರ್‌ಲೆಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರೊಂದಿಗೆ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಜಿಯೋಮ್ಯಾಗ್ನೆಟಿಕ್, ಗೈರೋ ಸ್ಕೋಪ್, ಹಾಲ್ ಮತ್ತು ಸಾಮೀಪ್ಯ ಸಂವೇದಕ ಸೇರಿವೆ. ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಸೆನ್ಸರ್ ಸಹ ಇದೆ.

ಬೆಲೆ ಎಷ್ಟು ಮತ್ತು ಲಭ್ಯತೆ
ಗ್ಯಾಲಕ್ಸಿ S21 ಅಲ್ಟ್ರಾ ಸ್ಮಾರ್ಟ್‌ಫೋನ್ 12GB RAM ವೇರಿಯಂಟ್ ಬೆಲೆಯು 1,05,999ರೂ. ಆಗಿದೆ. ಹಾಗೆಯೇ 16GB RAM + 512GB ವೇರಿಯಂಟ್ ಬೆಲೆಯು 1,16,999ರೂ.ಗಳು ಆಗಿದೆ. ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಸ್ಟೋರ್‌ಗಳಲ್ಲಿ, ಪ್ರಮುಖ ಆನ್‌ಲೈನ್ ತಾಣಗಳಲ್ಲಿ ಹಾಗೂ ರೀಟೇಲ್ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯ.


Click it and Unblock the Notifications








