Home
ಮೊಬೈಲ್

ಇನ್ಮುಂದೆ ಎಲ್ಲೆಲ್ಲೂ ಸ್ಯಾಮ್‌ಸಂಗ್..! ಬಿಡುಗಡೆಗೂ ಮೊದಲೇ.. ಹೊಸ ಫೋನಿನ ಕಲರ್‌ ಹಾಗೂ ಫೀಚರ್ಸ್‌ ಲೀಕ್‌!

ಇನ್ಮುಂದೆ ಎಲ್ಲೆಲ್ಲೂ ಸ್ಯಾಮ್‌ಸಂಗ್..! ಸ್ಯಾಮ್‌ಸಂಗ್ ಮೊಬೈಲ್‌ ಪ್ರಿಯರಿಗೆ ಇದು ಸಿಹಿ ಸುದ್ದಿಯೇ ಸರಿ. ಸ್ಮಾರ್ಟ್‌ಫೋನ್ ಬ್ರಾಂಡ್ ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ಯಾಲಕ್ಸಿ 'S' ಸರಣಿಯ ಫ್ಯಾನ್ ಎಡಿಷನ್ (ಎಫ್‌ಇ) Samsung Galaxy S24 FE ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಇದರ ಬಿಡುಗಡೆಯ ದಿನಾಂಕ ಸಮೀಪಿಸುತ್ತಿದ್ದಂತೆ, ಮುಂಬರುವ ಈ ಫೋನ್‌ಗೆ ಸಂಬಂಧಿಸಿದಂತೆ ಅನೇಕ ಮಾಹಿತಿಗಳು ಸೋರಿಕೆಯಾಗಲು ಪ್ರಾರಂಭಿಸಿವೆ. ಅದರಂತೆ, ಇದೀಗ ಮಹತ್ವದ ಅಪ್ಡೇಟ್‌ ಲಭ್ಯವಾಗಿದೆ. ಹಾಗಿದ್ರೆ, ಲೀಕ್ ಆಗಿರುವ ಹೊಸ ಅಪ್ಡೇಟ್‌ ಏನು? ಈ ಫೋನ್ ಯಾವಾಗ ಲಾಂಚ್? ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು? ಅನ್ನೋದನ್ನು ತಿಳಿಯೋಣ ಬನ್ನಿ.

ಸ್ಯಾಮ್‌ಸಂಗ್ ತನ್ನ ವಿಭಿನ್ನವಾದ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಂಪನಿಯ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ. ಮುಂಬರುವ ಫೋನ್‌ ಬಗ್ಗೆ ಗ್ರಾಹಕರಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಇತ್ತೀಚೆಗೆ Samsung Galaxy S24 FE ಫೋನ್‌ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್‌ ಹೊರಬಂದಿದ್ದು, ಇದರ ಬಣ್ಣಗಳ ಆಯ್ಕೆಯನ್ನು ಬಹಿರಂಗಪಡಿಸಲಾಗಿದೆ. ಪ್ರಸ್ತುತ, Galaxy S24 FE ಬಿಡುಗಡೆಯ ದಿನಾಂಕವನ್ನು ಘೋಷಿಸಿಲ್ಲ. ಆದಾಗ್ಯೂ, ಇದು ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬಹುದು.

ಬಿಡುಗಡೆಗೂ ಮೊದಲೇ.. Samsung ಹೊಸ ಫೋನಿನ ಕಲರ್‌ ಹಾಗೂ ಫೀಚರ್ಸ್‌ ಲೀಕ್‌!

ಈ ಹೊಸ ಫೋನ್ ಹೊಸ ಅಪ್ಡೇಟ್‌ ಏನು?

ಸ್ಯಾಮ್‌ಸಂಗ್ ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 FE ಅನ್ನು ಕಪ್ಪು ಬಣ್ಣದಲ್ಲಿ ತರಲು ಮುಂದಾಗಿದೆ. ಈ ಫೋನ್‌ಗೆ ಕಪ್ಪು ಬಣ್ಣವು ಸಾಕಷ್ಟು ಜನಪ್ರಿಯವಾಗಿದೆ. ಆದ್ದರಿಂದ ಸ್ಯಾಮ್‌ಸಂಗ್ ಈ ಬಣ್ಣಕ್ಕೆ ಆದ್ಯತೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಕಪ್ಪು ಬಣ್ಣ ಹೊರತುಪಡಿಸಿ, Galaxy S24 FE ಅನ್ನು ಬೂದು, ತಿಳಿ ನೀಲಿ, ತಿಳಿ ಹಸಿರು ಮತ್ತು ಹಳದಿ ಬಣ್ಣಗಳಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಡಿಸ್ಪ್ಲೇ ಮೊದಲಿಗಿಂತ ದೊಡ್ಡದಾಗಿರುತ್ತೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 FEಯ ಕೆಲವು ಸೋರಿಕೆಯಾದ ಫೋಟೋಗಳಲ್ಲಿ, ಈ ಫೋನ್ ತಿಳಿ ಹಸಿರು ಬಣ್ಣದಲ್ಲಿ ಕಂಡುಬರುತ್ತದೆ. ವೈರಲ್ ಆಗಿರುವ ಚಿತ್ರಗಳ ಪ್ರಕಾರ, ಈ ಫೋನ್ ಹಿಂದಿನ ಮಾದರಿಗಿಂತ ತೆಳುವಾದ ಬೆಜೆಲ್‌ಗಳನ್ನು ಹೊಂದಿರುತ್ತದೆ. ಇದರ ಡಿಸ್ಪ್ಲೇ ಕೂಡ ಮೊದಲಿಗಿಂತ ದೊಡ್ಡದಾಗಿರುತ್ತದೆ. ಇದರ ಡಿಸ್ಪ್ಲೇ 6.65 ಇಂಚುಗಳಷ್ಟು ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 FEಯ ಪ್ರೊಸೆಸರ್ ಏನು?

ಇದು ಸ್ನಾಪ್‌ಡ್ರಾಗನ್ ಚಿಪ್‌ಸೆಟ್ ಬದಲಿಗೆ Exynos 2400 ಚಿಪ್‌ಸೆಟ್ ಒಳಗೊಂಡಿರುತ್ತದೆ. ಸ್ಯಾಮ್‌ಸಂಗ್ ಈ ವರ್ಷ Galaxy S24 ಮತ್ತು Galaxy S24+ ನ ಕೆಲವು ಆವೃತ್ತಿಗಳಲ್ಲಿ ಬಳಸಿದ ಅದೇ ಪ್ರೊಸೆಸರ್ ಆಗಿದೆ. ಈ ಫೋನ್ 12GB RAM ನೊಂದಿಗೆ ಬರುತ್ತದೆ. ಇದು ಸರಾಗವಾಗಿ ಕಾರ್ಯನಿರ್ವಹಿಸಲು ಮತ್ತು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡಲು ಸಹಾಯ ಮಾಡುತ್ತದೆ. ಓಎಸ್ ಬಗ್ಗೆ ಹೇಳವುದಾದರೆ, ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಇತ್ತೀಚಿನ ಆವೃತ್ತಿಯಾದ ಆಂಡ್ರಾಯ್ಡ್ 14 ನಲ್ಲಿಯೂ ಕಾರ್ಯನಿರ್ವಹಿಸುತ್ತದೆ.

ಬಿಡುಗಡೆಗೂ ಮೊದಲೇ.. Samsung ಹೊಸ ಫೋನಿನ ಕಲರ್‌ ಹಾಗೂ ಫೀಚರ್ಸ್‌ ಲೀಕ್‌!

ಕ್ಯಾಮೆರಾ ಸೆಟಪ್‌ ಬಗ್ಗೆ ಎರಡನೇ ಮಾತಿಲ್ಲ..!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 FE ಮೊಬೈಲ್‌ ಕ್ಯಾಮೆರಾ ಸೆಟಪ್‌ ಬಗ್ಗೆ ಎರಡನೇ ಮಾತೇ ಇಲ್ಲ. ಫೋಟೋಗ್ರಫಿಗಾಗಿ, ಗ್ಯಾಲಕ್ಸಿ ಎಸ್24 FE 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿರುತ್ತದೆ. ಇದಲ್ಲದೆ, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 8/10MP ಟೆಲಿಫೋಟೋ ಕ್ಯಾಮೆರಾ ಇರುತ್ತದೆ. ಇದರ ಸಹಾಯದಿಂದ ನೀವು ಅತ್ಯುತ್ತಮ ಫೋಟೋಗ್ರಫಿ ಮಾಡಲು ಸಾಧ್ಯವಾಗುತ್ತದೆ.

4500mAh ಬ್ಯಾಟರಿ, 15W ವೈರ್‌ಲೆಸ್ ಚಾರ್ಜಿಂಗ್

ಗ್ಯಾಲಕ್ಸಿ ಎಸ್24 FE ಸ್ಮಾರ್ಟ್‌ಫೋನ್‌ನ ಬ್ಯಾಟರಿ ಬ್ಯಾಕಪ್ ಸ್ಯಾಮ್‌ಸಂಗ್ ಪ್ರಿಯರ ಗಮನ ಸೆಳೆದಿದೆ. ಮುಂಬರುವ ಗ್ಯಾಲಕ್ಸಿ ಎಸ್24 FE ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ ಹೊಂದಿರುವ ಸಾಧ್ಯತೆಯಿದೆ. ಇದಲ್ಲದೆ, ಈ ಫೋನ್ 15W ವೈರ್‌ಲೆಸ್ ಚಾರ್ಜಿಂಗ್ ಮತ್ತು 25W ವೇಗದ ಚಾರ್ಜಿಂಗ್ ಪಡೆಯುವ ನಿರೀಕ್ಷೆಯಿದೆ. ಈ ಮೊಬೈಲ್ ಬಗ್ಗೆ ಗ್ರಾಹಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಜಸ್ಟ್ 8,999 ರೂ..! ಸದ್ದಿಲ್ಲದೆ Realme C63 ಫೋನ್ ಲಾಂಚ್: ಜುಲೈ 3 ರಿಂದ ಸೇಲ್ ಶುರು

ಜುಲೈ 10 ರಂದು Galaxy Z Fold 6, Flip 6 ಲಾಂಚ್

Samsung ಕಂಪನಿಯು Galaxy Z Fold 6 ಮತ್ತು Flip 6 ಎಂಬ ಎರಡು ಫೋನ್‌ಗಳನ್ನು ಜುಲೈ 10 ರಂದ Galaxy Unpacked ಸಮಾರಂಭದಲ್ಲಿ ಬಿಡುಗಡೆ ಮಾಡಲಿದೆ. ಇದರ ಫೀಚರ್ಸ್‌ಗಳ ಬಗ್ಗೆ ಹೇಳುವುದಾದರೆ, Galaxy Z Fold 6, 120Hz ರಿಫ್ರೆಶ್ ದರದೊಂದಿಗೆ ಡೈನಾಮಿಕ್ AMOLED ಡಿಸ್ಟ್ರೇಯನ್ನು ಹೊಂದಿರಲಿದೆ. Snapdragon 8 Gen 3 ಚಿಪ್‌ಸೆಟ್‌ ಅನ್ನು ಫೋನ್ನಲ್ಲಿ ಪ್ರೊಸೆಸರ್ ಆಗಿ ನೀಡಬಹುದು. ಫೋನ್‌ನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ಗಳಾಗಿರುತ್ತದೆ.

ಬಿಡುಗಡೆಗೂ ಮೊದಲೇ.. Samsung ಹೊಸ ಫೋನಿನ ಕಲರ್‌ ಹಾಗೂ ಫೀಚರ್ಸ್‌ ಲೀಕ್‌!

Galaxy Z Flip 6ನಲ್ಲಿ ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು?

Galaxy Z Flip 6 ಗೆ ಸಂಬಂಧಿಸಿದಂತೆ, ಈ ಫೋನ್‌ನಲ್ಲಿ ನಿಮಗೆ 6.7 ಇಂಚಿನ ಡೈನಾಮಿಕ್ AMOLED 2x ಡಿಸ್ಟ್ರೇಯನ್ನು ಕಾಣಬಹುದು. ಜೊತೆಗೆ 120Hz ರಿಫ್ರೆಶ್ ದರದೊಂದಿಗೆ ನೀಡಬಹುದು. ಡಿಸ್ಲ್ಪೇ ರಕ್ಷಣೆಗಾಗಿ ಕಂಪನಿಯು ಈ ಮೊಬೈಲ್‌ನಲ್ಲಿ ಗೊರಿಲ್ಲಾ ಗ್ಲಾಸ್ ಆರ್ಮರ್ ಅನ್ನು ಸಹ ನೀಡಬಹುದು. ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 8 ಜನ್ 3 ಅನ್ನು ಸಹ ಅಳವಡಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಇರುವ ಸಾಧ್ಯತೆಯಿದೆ.

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Samsung Galaxy S24 FE color versions leak. Samsung is still working on the Galaxy S24 FE, expected to be released at some point later this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+