ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ V/S ಐಫೋನ್ 15 ಪ್ರೊ ಮ್ಯಾಕ್ಸ್: ಯಾವುದು ಬೆಸ್ಟ್?
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಆಗಿದ್ದು, ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ನೂತನ ಸರಣಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಹೈ ಎಂಡ್ ಮಾದರಿಯನ್ನು ಒಳಗೊಂಡಿದ್ದು, ಹಲವು AI ಆಧಾರಿತ ಫೀಚರ್ಸ್‌ಗಳಿಂದ ಮೊಬೈಲ್ ಪ್ರಿಯರ ದಿಲ್ ಗೆದ್ದಿದೆ. ಈ ಫೋನ್ ಐಫೋನ್ 15 ಪ್ರೊ ಮ್ಯಾಕ್ಸ್ ಮೊಬೈಲ್‌ಗೆ ಪ್ರಬಲ ಪೈಪೋಟಿ ಆಗಿದೆಯೇ?
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಆಕರ್ಷಕ ವಿನ್ಯಾಸ್ ಹಾಗೂ ದೈತ್ಯ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗೆಯೇ ಆಪಲ್ ಸಂಸ್ಥೆಯ ಇತ್ತೀಚಿನ ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಕೂಡಾ ಹೈ ಎಂಡ್ ಆಯ್ಕೆಗಳಿಂದಾಗಿ ಮೊಬೈಲ್ ಪ್ರಿಯರನ್ನು ಆಕರ್ಷಿಸಿದೆ. ಹಾಗಾದರೇ ಗ್ಯಾಲಕ್ಸಿ S24 ಅಲ್ಟ್ರಾ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್‌ಗಳ ಭಿನ್ನತೆಗಳೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ವಿನ್ಯಾಸ ಹೋಲಿಕೆ
ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಸ್ವೇರ್ ಮಾದರಿಯ ಕಾರ್ನರ್ ಪಡೆದಿದ್ದು, ಅಲ್ಯೂಮಿನಿಯಮ್ ಫ್ರೇಮ್ ರಚನೆ ಹೊಂದಿದೆ. ಹಾಗೆಯೇ 6.8 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 3120 x 1440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿದೆ.

ಇನ್ನು ಐಫೋನ್ 15 ಪ್ರೊ ಮ್ಯಾಕ್ಸ್ ಹೊಸ ಟೈಟಾನಿಯಂ ಮಿಶ್ರಲೋಹದ ರಚನೆ ಪಡೆದಿದ್ದು, ಅಂಚುಗಳಲ್ಲಿ ಕರ್ವ್ ಮಾದರಿ ರಚನೆ ಪಡೆದಿದೆ. ಇನ್ನು ಇದು 6.7 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿದೆ. ಗ್ಯಾಲಕ್ಸಿ S24 ಅಲ್ಟ್ರಾ 2600nits ಬ್ರೈಟ್ನೆಸ್ ಸೌಲಭ್ಯ ಪಡೆದಿದ್ದರೇ, ಐಫೋನ್ 15 ಪ್ರೊ ಮ್ಯಾಕ್ಸ್ 2000nits ಬ್ರೈಟ್ನೆಸ್ ಸೌಲಭ್ಯ ಒಳಗೊಂಡಿದೆ.

ಪ್ರೊಸೆಸರ್ ಸಾಮರ್ಥ್ಯ ಭಿನ್ನತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಸ್ನಾಪ್‌ಡ್ರಾಗನ್ 8 Gen 3 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ. ಐಫೋನ್ 15 ಪ್ರೊ ಮ್ಯಾಕ್ಸ್ A17 ಪ್ರೊ ಬಯೋನಿಕ್ ಚಿಪ್‌ಸೆಟ್ ಬಲ ಪಡೆದುಕೊಂಡಿದ್ದು, ಇದು A16 ನ ಜಿಪಿಯು ಗಿಂತ 20% ವೇಗವಾಗಿದೆ.
ಹಾಗೆಯೇ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ 12 GB RAM ಮತ್ತು 256GB, 512GB, ಹಾಗೂ 1TB ವರೆಗೆ ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ. ಅದೇ ರೀತಿ ಐಫೋನ್ 15 ಪ್ರೊ ಮ್ಯಾಕ್ಸ್ ಫೋನ್ ಕೂಡಾ 8GB RAM ಹಾಗೂ 256GB, 512GB ಮತ್ತು 1TB ವರೆಗೂ ಸ್ಟೋರೇಜ್ ಆಯ್ಕೆ ಪಡೆದಿದೆ. ಗ್ಯಾಲಕ್ಸಿ S24 ಅಲ್ಟ್ರಾ 7 ವರ್ಷದ ವರೆಗೂ ಓಎಸ್ ಅಪ್‌ಡೇಟ್ ಪಡೆದಿದ್ದರೇ, ಐಫೋನ್ 15 ಪ್ರೊ ಮ್ಯಾಕ್ಸ್ 5 ರಿಂದ 6 ವರ್ಷ ಓಎಸ್ ಸಪೋರ್ಟ್ ಮಾಡಲಿದೆ.
ಕ್ಯಾಮೆರಾ ಸೆನ್ಸಾರ್ ಹೇಗಿವೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಟ್ರಿಪಲ್ ಕ್ಯಾಮೆರಾ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 200 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇನ್ನುಳಿದ ಕ್ಯಾಮೆರಾವುಗಳು 12 ಮೆಗಾ ಪಿಕ್ಸಲ್ ಹಾಗೂ 10 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿವೆ. ಇನ್ನು ಈ ಫೋನಿನ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಇನ್ನು ಐಫೋನ್ 15 ಪ್ರೊ ಮ್ಯಾಕ್ಸ್ ಸಹ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯದಲ್ಲಿ ಇದೆ. ಇನ್ನುಳಿದ ಕ್ಯಾಮೆರಾವುಗಳು 12 ಮೆಗಾ ಪಿಕ್ಸಲ್ ಹಾಗೂ 12 ಮೆಗಾ ಪಿಕ್ಸಲ್ ಸೆನ್ಸಾರ್ ನಲ್ಲಿವೆ. ಹಾಗೆಯೇ ಈ ಫೋನಿನ ಸೆಲ್ಫಿ ಕ್ಯಾಮೆರಾ ಸಹ 12 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ.
ಈ ಹೊಸ ಸರಣಿಯಲ್ಲಿ ಸ್ಯಾಮ್‌ಸಂಗ್ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಡೇಟ್ ಮಾಡಿರುವುದು ಆಕರ್ಷಕ ಎನಿಸುತ್ತದೆ. ಇದರ ಜೊತೆಗೆ ಗ್ಯಾಲಕ್ಸಿ S24 ಅಲ್ಟ್ರಾ ಕ್ಯಾಮೆರಾವು ಕೆಲವು AI ಫೀಚರ್ಸ್‌ಗಳಿಂದ ಭರ್ತಿ ಆಗಿದೆ.
ಕೊನೆಯ ಮಾತು
ನೂತನವಾಗಿ ಬಿಡುಗಡೆ ಆಗಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಪ್ರೊಸೆಸರ್, ಬ್ಯಾಟರಿ ಹಾಗೂ ಡಿಸ್‌ಪ್ಲೇ ಇದರ ಜೊತೆಗೆ AI ಫೀಚರ್ಸ್‌ಗಳಿಂದ ಲಾಂಚ್ ಆರಂಭದಲ್ಲೇ ಸಖತ್ ಗಮನ ಸೆಳೆದಿದೆ. ಅದಾಗ್ಯೂ, ಐಫೋನ್ 15 ಪ್ರೊ ಮ್ಯಾಕ್ಸ್ ತನ್ನ ಅತ್ಯುತ್ತಮ ಫೀಚರ್ಸ್‌ಗಳಿಂದ ಐಫೋನ್ ಪ್ರಿಯರನ್ನು ಮೋಡಿ ಮಾಡಿರುವುದಂತು ಸುಳ್ಳಲ್ಲ.
ಕ್ಯಾಮೆರಾ ಹಾಗೂ ಕೆಲವು AI ಫೀಚರ್ಸ್‌ಗಳಿಂದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಫೋನ್ ಸ್ವಲ್ಪ ಹೆಚ್ಚಿನ ಗಮನ ಸೆಳೆಯುತ್ತದೆ. ಐಫೋನ್ 15 ಪ್ರೊ ಮ್ಯಾಕ್ಸ್ ಫೋನಿನ ಕ್ಯಾಮೆರಾ ಹಾಗೂ ವಿಡಿಯೋ ಆಯ್ಕೆ ಸಹ ಅತ್ಯುತ್ತಮ ಆಗಿದೆ. ಮುಖ್ಯವಾಗಿ ಆಂಡ್ರಾಯ್ಡ್ ಓಎಸ್‌ನಲ್ಲಿ ಒಂದು ಅತ್ಯುತ್ತಮ ಹೈ ಎಂಡ್ ಫೋನ್ ಬಯಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ S24 ಅಲ್ಟ್ರಾ ಸೂಪರ್, ಇನ್ನು ಐಓಎಸ್ ಓಎಸ್ ಇಷ್ಟಪಡುವ ಐಫೋನ್ ಪ್ರಿಯ ಗ್ರಾಹಕರಿಗೆ ಐಫೋನ್ 15 ಪ್ರೊ ಮ್ಯಾಕ್ಸ್ ಸೂಪರ್.


Click it and Unblock the Notifications








