ಸ್ಯಾಮ್ಸಂಗ್ ಗ್ಯಾಲಕ್ಸಿ ಅಭಿಮಾನಿಯ ಕ್ರೇಜಿ ಐಡಿಯಾ

Posted By: Varun
ಸ್ಯಾಮ್ಸಂಗ್ ಗ್ಯಾಲಕ್ಸಿ ಅಭಿಮಾನಿಯ ಕ್ರೇಜಿ ಐಡಿಯಾ

ಮಾನವ ಸ್ನೇಹ ಜೀವಿ. ಸ್ನೇಹ ಎಂದ ಮೇಲೆ ಪ್ರೀತಿ ಇದ್ದೇ ಇರುತ್ತದೆ. ಪ್ರೀತಿ ಎಂದಮೇಲೆ ಅದು ಮನುಷ್ಯನಾದರೂ ಸರಿ, ಪ್ರಾಣಿಯಾದರೂ ಸರಿ ಇಲ್ಲವೇ ತಾನೇ ಸೃಷ್ಟಿಸಿರುವ ವಸ್ತುಗಳಾದರೂ ಸರಿ. ಒಟ್ಟಿನಲ್ಲಿ ಪ್ರೀತಿ ಇದ್ದ ಕಡೆ ಅಭಿಮಾನವೂ ಇದ್ದೇ ಇರುತ್ತದೆ.

ಹುಚ್ಚು ಅಭಿಮಾನವನ್ನು ನಾವು ಸಾಮಾನ್ಯವಾಗಿ ಚಲನಚಿತ್ರದ ಹೀರೋ, ಹಿರೋಯಿನ್ಗಳ ಮೇಲೋ, ಇಲ್ಲವೇ ಕ್ರೀಡಾಪಟುಗಳ ಮೇಲೋ ತೋರಿಸುವ ಅಭಿಮಾನಿಗಳನ್ನು ನೋಡುತ್ತಲೇ ಇರುತ್ತೇವೆ. ರೋಡಿನಲ್ಲಿ ಫ್ಲೆಕ್ಸ್ ನಿಲ್ಲಿಸುವುದು, ಜೈಕಾರ ಹಾಕಿಕೊಂಡು ಕಟ್ಔಟ್ ಗೆ ಅಭಿಷೇಕ ಮಾಡುವುದು, ಹಾರ ಹಾಕುವುದೋ ಮಾಡಿ ತಮ್ಮ ಅಭಿಮಾನವನ್ನು ಪ್ರದರ್ಶಿಸುವ ಅಭಿಮಾನಿಗಳನ್ನು ಗ್ಯಾರಂಟಿ ಟಿವಿ ಯಲ್ಲಿ ನೋಡಿರುತ್ತೀರ.

ಆದರೆ ತನ್ನ ನೆಚ್ಚಿನ ಮೊಬೈಲ್ ನ ಹೊಸ ಆವೃತ್ತಿ ಬಿಡುಗಡೆಯನ್ನು ತನ್ನ ಹುಟ್ಟು ಹಬ್ಬಕ್ಕೆ ಬಿಡುಗಡೆಯಾಗಲಿದೆಯೆಂದು ತಿಳಿದು ಅದಕ್ಕೆಂದೇ ವೆಬ್ಸೈಟ್ ಒಂದನ್ನು ಸೃಷ್ಟಿಸಿ ಫೇಮಸ್ ಆಗಿರುವ ಅಭಿಮಾನಿಯ ಬಗ್ಗೆ ಕೇಳಿದ್ದೀರಾ?

ವಿಷಯ ಏನೆಂದರೆ, ಬಹು ನಿರೀಕ್ಷಿತ ಸ್ಯಾಮ್ಸಂಗ್ ನ ಗ್ಯಾಲಕ್ಸಿ S 3 ಸ್ಮಾರ್ಟ್ ಫೋನ್, ಇವತ್ತು, ಅಂದರೆ ಮೇ 3 ರಕ್ಕೆ ಬಿಡುಗಡೆಯಾಗಲಿದೆ ಎಂಬ ಸುದ್ದಿ ನಿಮಗೆ ಗೊತ್ತು.ಇದೇ ದಿನ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ, ತನ್ನ ಹೆಸರನ್ನು ಹೇಳಿಕೊಳ್ಳದ, ಸ್ಯಾಮ್ಸಂಗ್ ಗ್ಯಾಲಕ್ಸಿ S 2 ಸ್ಮಾರ್ಟ್ ಫೋನ್ ಒಂದನ್ನು ಉಪಯೋಗಿಸುತ್ತಿರುವ ಅಭಿಮಾನಿಯೊಬ್ಬ, ಈ ಫೋನ್ ಮೇಲಿನ ಅಭಿಮಾನಕ್ಕೋಸ್ಕರ -thenextgalaxybirthday ಹೆಸರಿನ ವೆಬ್ಸೈಟ್ ಅನ್ನು ಸೃಷ್ಟಿಸಿದ್ದಾನೆ.

ಈ ವೆಬ್ಸೈಟ್ ನಲ್ಲಿ ಆ ಅಭಿಮಾನಿ ಏನು ಕೇಳಿಕೊಂಡಿದ್ದಾನೆ ಗೊತ್ತಾ ; " ಈಗಾಗಲೇ ಗ್ಯಾಲಕ್ಸಿ S2 ಅನ್ನು ಉಪಯೋಗಿಸುತ್ತಿರುವ ನಾನು, ಅದರ ಅಭಿಮಾನಿಯಾಗಿದ್ದೇನೆ. ಮೇ 3ಕ್ಕೆ ಬಿಡುಗಡೆಯಾಗುತ್ತಿರುವ S3 ಮಾಡಲ್ ಅನ್ನು ನನ್ನ ಹುಟ್ಟು ಹಬ್ಬದ ದಿನದಂದೇ ಬಿಡುಗಡೆಯಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಹಾಗಾಗಿ ನೀವು, ಸ್ಯಾಮ್ಸಂಗ್ ಕಂಪನಿಯವರು ಸ್ಪೇರ್ S3 ಫೋನ್ ಅನ್ನು ಉಡುಗೊರೆಯಾಗಿ ಕೊಡಿ, ಇಲ್ಲಾ ಮುಂದಿನ ಆವೃತ್ತಿಯ ಫೋನ್ ಕೊಡುತ್ತೀರಾ ಎಂದರೆ ನನಗೊಂದು ಮೇಲ್ ಮಾಡಿ" ಎಂದು ಕೇಳಿಕೊಂಡಿದ್ದಾನೆ.

ನೋಡಿ ಇಂಟರ್ನೆಟ್ ಉಪಯೋಗಿಸಿಕೊಂಡು ಜನ ಹೇಗೆಲ್ಲ ತಮ್ಮನ್ನು ತಾವು ಮಾರ್ಕೆಟ್ ಮಾಡಿಕೊಳ್ಳುತ್ತಾರೆ ಎಂದು. ಒಂದು ವೆಬ್ಸೈಟ್ ನಿಂದ ಹೇಗೆ ಗಮನ ಸೆಳೆಯಬಹುದು ಎಂಬುದಕ್ಕೆ ಈತ ಒಂದು ಒಳ್ಳೆ ಉದಾಹರಣೆ. ಸುಂದರವಾಗಿರುವ ಈ ವೆಬ್ಸೈಟ್ ಅನ್ನು ನೋಡಿ ಅವನ ಹುಟ್ಟುಹಬ್ಬಕ್ಕೆ ಹಾಗೆ ವಿಶ್ ಮಾಡಿ. ಹಾಗೆಯೇ ಅವನಿಗೆ ಸ್ಯಾಮ್ಸಂಗ್ S3 ಸ್ಮಾರ್ಟ್ ಫೋನ್ ಉಡುಗೊರೆಯಾಗಿ ಸಿಗಲಿ ಎಂದು ಹಾರೈಸಿ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot