Subscribe to Gizbot

ಭಾರತದ ಮಾರುಕಟ್ಟೆಗೆ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಬಿಡುಗಡೆ

Posted By:

ಸ್ಯಾಮ್‌ಸಂಗ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸ್ಯಾಮ್‌ಸಂಗ್‌ನ ಭಾರೀ ನಿರೀಕ್ಷೆಯ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್-4 ಭಾರತದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.
ಗಿಜ್ಬಾಟ್‌ ಈ ಹಿಂದೆ ಏಪ್ರಿಲ್‌ ಕೊನೆಯ ವಾರದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿತ್ತು. ಈ ಸುದ್ದಿ ನಿಜವಾಗಿದ್ದು ಅಕ್ಟಾಕೋರ್‌ ಪ್ರೋಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಇಂದು ಬಿಡುಗಡೆಯಾಗಿದೆ. ಗೆಲಾಕ್ಸಿ ಎಸ್‌ 4ನ್ನು ನೀವು 41,500 ನೀಡಿ ಖರೀದಿಸಬಹುದು. ಹಾಗಾದ್ರೆ ಗೆಲಾಕ್ಸಿ ಎಸ್‌ 4ನಲ್ಲಿರುವ ವಿಶೇಷತೆ ಏನು ಮತ್ತು ಸ್ಯಾಮ್‌ಸಂಗ್‌ ಕಂಪೆನಿ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಬೇರೆ ಯಾವ ಸಾಧನಗಳನ್ನು ಪರಿಚಯಿಸಿದ್ದಾರೆ ಎಂಬುದಕ್ಕೆ ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4
ವಿಶೇಷತೆ:

5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್‌,ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

ಇದನ್ನೂ ಓದಿ : ಸ್ಮಾರ್ಟ್‌ಫೋನ್‌ ಕಿಂಗ್‌ ಸ್ಯಾಮ್‌ಸಂಗ್‌ ಕಛೇರಿಯನ್ನು ನೋಡಿದ್ದೀರಾ?

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಸ್‌ಬ್ಯಾಂಡ್‌ (S Band)

ಎಸ್‌ಬ್ಯಾಂಡ್‌ (S Band)

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಖರೀದಿಸಿದರೆ ದೇಹದ ಫಿಟ್‌ನೆಸ್‌ನ್ನು ಪರೀಕ್ಷಿಸಬಹುದು. ಸ್ಯಾಮ್‌ಸಂಗ್‌ ಹೆಲ್ತ್‌ ಅಪ್ಲಿಕೇಶನ್‌ನ್ನು ಬ್ಲೂಟೂತ್‌ ಮೂಲಕ ಸಿಂಕ್‌ ಮಾಡಿಕೊಂಡು ಎಸ್‌ ಬ್ಯಾಂಡ್‌ ಸಹಾಯದಿಂದ ಆಟ ಆಡುವಾಗ, ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎಷ್ಟು ಕ್ಯಾಲೋರಿ ಬರ್ನ್‌ ಆಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ಗೇಮ್‌ ಪ್ಯಾಡ್‌(Game Pad)

ಗೇಮ್‌ ಪ್ಯಾಡ್‌(Game Pad)

ಗೇಮ್‌ ಪ್ಯಾಡ್‌ನ್ನು ಬ್ಲೂಟೂತ್‌ ಮೂಲಕ ನಿಂಯಂತ್ರಿಸಿ ಸ್ಮಾರ್ಟ್‌ಫೋನಲ್ಲಿ ಗೇಮ್ಸ್‌ ಆಡಬಹುದು.

ಹಾರ್ಟ್‌ ರೇಟ್‌ ಮಾನೀಟರ್‌ (Heart Rate Monitor )

ಹಾರ್ಟ್‌ ರೇಟ್‌ ಮಾನೀಟರ್‌ (Heart Rate Monitor )

ಹಾರ್ಟ್ ರೇಟ್‌ ಮಾನೀಟರ್‌ ಹೃದಯ ಬಡಿತವನ್ನು ಲೆಕ್ಕ ಹಾಕುತ್ತದೆ. ಸ್ಯಾಮ್‌ಸಂಗ್‌ ಹೆಲ್ತ್‌ ಅಪ್ಲಿಕೇಶನ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಈ ಹಾರ್ಟ್‌ ರೇಟ್‌ ಮಾನೀಟರ್‌ ಸಾಧನ ಕೆಲಸ ಮಾಡಲು ಸ್ಮಾರ್ಟ್‌ಫೋನ್‌ ನಿಮ್ಮ ಜೊತೆಗೆ ಇರಬೇಕೆಂದೇನು ಇಲ್ಲ. ಸ್ಮಾರ್ಟ್‌ಫೋನ್‌ನ್ನು ದೂರದಲ್ಲಿಟ್ಟು ಬ್ಲೂಟೂತ್‌ ಮೂಲಕವು ಇದನ್ನು ನಿಯಂತ್ರಿಸಬಹುದಾಗಿದೆ.

ಬಾಡಿ ಸ್ಕೇಲ್‌(Body Scale)

ಬಾಡಿ ಸ್ಕೇಲ್‌(Body Scale)

ಗೆಲಾಕ್ಸಿ ಎಸ್‌4 ನಲ್ಲಿ ನಿಮ್ಮ ದೇಹದ ತೂಕವನ್ನು ಪರೀಕ್ಷಿಸಿಕೊಳ್ಳಬಹುದು.! ಆಂದ್ರೆ ಸ್ಯಾಮ್‌ಸಂಗ್‌ನವರು ದೇಹದ ತೂಕ ಪರೀಕ್ಷೆ ಮಾಡಲೆಂದೇ ಒಂದು ಹೊಸ ಉಪಕರಣವನ್ನು ಪರಿಚಯಿಸಿದ್ದಾರೆ. ಈಗ ಹೇಗೆ ನಾವು ದೇಹದ ತೂಕ ಪರೀಕ್ಷೆ ಮಾಡುವಂತಹ ಯಂತ್ರದ ಮೇಲೆ ನಿಲ್ಲುತ್ತೇವೋ ಅದೇ ರೀತಿಯಲ್ಲಿ ಇಲ್ಲಿ ಈ ಉಪಕರಣದ ಮೇಲೆ ನಿಂತು ಪರೀಕ್ಷೆ ಮಾಡಬಹುದು. ಈ ಯಂತ್ರವು ಬ್ಲೂಟೂತ್‌ ಮತ್ತು ಸ್ಯಾಮ್‌ಸಂಗ್‌ ಹೆಲ್ತ್‌ ಅಪ್ಲಿಕೇಶನ್‌ ಮೂಲಕ ಕಾರ್ಯನಿರ್ವಹಿಸುತ್ತದೆ.

ಎಸ್‌ ವ್ಯೂ ಕವರ್‌(S View Cover)

ಎಸ್‌ ವ್ಯೂ ಕವರ್‌(S View Cover)

ವೈರ್‌ಲೆಸ್‌ ಚಾರ್ಜಿಂಗ್‌ ಪ್ಯಾಡ್‌ (Wireless Charging Pad )

ವೈರ್‌ಲೆಸ್‌ ಚಾರ್ಜಿಂಗ್‌ ಪ್ಯಾಡ್‌ (Wireless Charging Pad )

ಬ್ಯಾಟರಿ ಕಿಟ್‌ (Extra Battery Kit)

ಬ್ಯಾಟರಿ ಕಿಟ್‌ (Extra Battery Kit)

ಕವರ್ (Cover )

ಕವರ್ (Cover )

ಪೌಚ್‌ (Pouch )

ಪೌಚ್‌ (Pouch )

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot