ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

Posted By:

ಗೆಲಾಕ್ಸಿ ಎಸ್‌4 ಮಿನಿಯನ್ನು ಭಾರತದ ಮಾರುಕಟ್ಟೆ ಸ್ಯಾಮ್‌ಸಂಗ್‌ ಬಿಡುಗಡೆ ಮಾಡಿದೆ. ಈಗಾಗಲೇ ವಿಶ್ವದ ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ನೂತನ ಮೈಲಿಗಲ್ಲನ್ನು ಬರೆದಿದ್ದು, ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ 2 ಕೋಟಿ ಗೆಲಾಕ್ಸಿ ಎಸ್‌4 ಮಾರಾಟವಾಗಿದೆ. ಇದೇ ಹುಮ್ಮಸ್ಸಿನಲ್ಲಿ ಸ್ಯಾಮ್‌ಸಂಗ್‌ ಈಗ ಗೆಲಾಕ್ಸಿ 4 ಮಿನಿಯನ್ನು ತಯಾರಿಸಿದ್ದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌‌ಫೋನ್‌ ಅಭಿಮಾನಿಗಳಾಗಿದ್ರೆ ನಿಮ್ಮಲ್ಲಿ ಕೆಲವು ಪ್ರಶ್ನೆ ಮೂಡಬಹುದು. ಗೆಲಾಕ್ಸಿ ಎಸ್‌4ಗೂ ಈ ಎಸ್‌4 ಮಿನಿಗೆ ಏನು ವ್ಯತ್ಯಾಸ? ಯಾವ ಅಂಶ ಎಸ್‌4 ಮಿನಿಯಲ್ಲಿ ಕಡಿಮೆಯಿದೆ? ಈ ಸ್‌4 ಮಿನಿ ಸ್ಮಾರ್ಟ್‌‌ಫೋನ್‌ ಬೆಲೆ ಎಷ್ಟು ಈ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಈ ಎರಡು ಸ್ಮಾರ್ಟ್‌ಫೋನ್‌ಗಳ ವ್ಯತ್ಯಾಸವನ್ನು ತಿಳಿಸಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸ

ವಿನ್ಯಾಸ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4 : ಪ್ಲಾಸ್ಟಿಕ್‌ ಕವರ್‌,130 ಗ್ರಾಂ, 7.9 ಮಿ.ಮೀ
ಗೆಲಾಕ್ಸಿ ಎಸ್‌ 4 ಮಿನಿ : ಪ್ಲಾಸ್ಟಿಕ್‌ ಕವರ್‌, 107 ಗ್ರಾಂ 8.9 ಮಿ.ಮೀ

ಪರದೆ:

ಪರದೆ:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4 :5 ಇಂಚಿನ ಸುಪರ್‌ AMOLED,1080 ಪಿಕ್ಸೆಲ್‌ ರೆಸೊಲೂಶನ್
ಗೆಲಾಕ್ಸಿ ಎಸ್‌ 4 ಮಿನಿ : 4.3 ಇಂಚಿನ ಸುಪರ್‌ AMOLED, qHD ರೆಸೊಲೂಶನ್

ಗೆಲಾಕ್ಸಿ ಎಸ್‌4 ಮಿನಿಯ ಪ್ರತಿ ಇಂಚಿನ ಪರದೆಯು 255 ಪಿಕ್ಸೆಲ್‌ ಹೊಂದಿದ್ದರೆ, ಗೆಲಾಕ್ಸಿ ಎಸ್‌4 ಪ್ರತಿ ಇಂಚಿನ ಪರದೆಯು 440 ಪಿಕ್ಸೆಲ್‌ ಹೊಂದಿದೆ.ಹೀಗಾಗಿ ಸ್ಕ್ರೀನ್‌ ದೊಡ್ಡದು ಜೊತೆಗೆ ಪಿಕ್ಸೆಲ್‌ ಹೆಚ್ಚಿರುವುದರಿಂದ ನೀವು ಉತ್ತಮ ಗುಣಮಟ್ಟದ ವೀಡಿಯೋ,ಫೋಟೋಗಳನ್ನು ವೀಕ್ಷಿಸಬಹುದು.

ಮೆಮೋರಿ

ಮೆಮೋರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4 : 16GB ಆಂತರಿಕ ಮೆಮೋರಿ
ಗೆಲಾಕ್ಸಿ ಎಸ್‌ 4 ಮಿನಿ : 8GB ಆಂತರಿಕ ಮೆಮೋರಿ
ಆಂತರಿಕ ಮೆಮೋರಿ ವಿಚಾರದಲ್ಲಿ ಗೆಲಾಕ್ಸಿ ಎಸ್‌4 16GBಯೊಂದಿಗೆ ಬಂದಿದೆ. ಜೊತೆಗೆ ನೀವು 64GB ವರೆಗೆ ಎಸ್‌ಡಿ ಕಾರ್ಡ್‌ ಮೂಲಕ ಮೆಮೋರಿಯನ್ನು ಹೆಚ್ಚಿಸಬಹುದಾಗಿದೆ. ಆದರೆ ಗೆಲಾಕ್ಸಿ ಎಸ್‌ 4 ಮಿನಿ 8GB ಆಂತರಿಕ ಮೆಮೋರಿ ನೀಡಿದ್ದು ಇದರಲ್ಲಿಯೂ ನೀವು 64GB ವರೆಗೆ ಎಸ್‌ಡಿ ಕಾರ್ಡ್‌ ಮೂಲಕ ಮೆಮೋರಿಯನ್ನು ಹೆಚ್ಚಿಸಬಹುದು.

ಪ್ರೊಸೆಸರ್‍ ಮತ್ತು ರ್‍ಯಾಮ್‌

ಪ್ರೊಸೆಸರ್‍ ಮತ್ತು ರ್‍ಯಾಮ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4 : 1.6GHz ಅಕ್ಟಾ ಕೋರ್‌ ಕೋರ್‌ ಪ್ರೊಸೆಸರ್‍,2GB RAM
ಗೆಲಾಕ್ಸಿ ಎಸ್‌ 4 ಮಿನಿ: 1.7GHz ಡ್ಯುಯಲ್‌ ಕೋರ್‌ ಪ್ರೊಸೆಸರ್ 1.5GB RAM

ಪ್ರೊಸೆಸರ್‌ ಮತ್ತು ರ್‍ಯಾಮ್‌ ವಿಚಾರದಲ್ಲಿ ಗೆಲಾಕ್ಸಿ ಎಸ್‌ 4 ಗೆಲಾಕ್ಸಿ ಎಸ್‌ 4 ಮಿನಿಗಿಂತ ಪವರ್‌ಫುಲ್‌ ಆಗಿದೆ

ಆಪರೇಟಿಂಗ್‌ ಸಿಸ್ಟಂ

ಆಪರೇಟಿಂಗ್‌ ಸಿಸ್ಟಂ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4: ಆಂಡ್ರಾಯ್ಡ್‌ 4.2 ಟಚ್‌ವಿಝ್‌
ಗೆಲಾಕ್ಸಿ ಎಸ್‌ 4 ಮಿನಿ: ಆಂಡ್ರಾಯ್ಡ್ 4.2 ಟಚ್‌ವಿಝ್‌

ಕ್ಯಾಮೆರಾ

ಕ್ಯಾಮೆರಾ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4: 13 ಎಂಪಿ,ಎಲ್‌ಇಡಿ ಫ್ಲ್ಯಾಶ್‌‌
ಗೆಲಾಕ್ಸಿ ಎಸ್‌ 4 ಮಿನಿ: 8 ಎಂಪಿ,ಎಲ್‌ಇಡಿ ಫ್ಲ್ಯಾಶ್
ಕ್ಯಾಮೆರಾ ವಿಚಾರದಲ್ಲಿ ಗೆಲಾಕ್ಸಿ ಎಸ್‌ 4 ಪವರ್‌‌ಫುಲ್‌ ಎಂದು ಹೇಳಬಹುದು. 13 ಎಂಪಿ ಹಿಂದುಗಡೆ ಕ್ಯಾಮೆರಾ, 2 ಎಂಪಿ ಮುಂದುಗಡೆ ಕ್ಯಾಮೆರಾದೊಂದಿಗೆ ಬಂದಿದೆ. ಆದರೆ ಎಸ್‌ 4 ಮಿನಿ 8 ಎಂಪಿ ಹಿಂದುಗಡೆ ,1.9 ಎಂಪಿ ಮುಂದುಗಡೆ ಕ್ಯಾಮೆರಾದೊಂದಿಗೆ ಬಂದಿದೆ.

ಬ್ಯಾಟರಿ

ಬ್ಯಾಟರಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ

ಗೆಲಾಕ್ಸಿ ಎಸ್‌ 4: 2600 mAh ಬ್ಯಾಟರಿ
ಗೆಲಾಕ್ಸಿ ಎಸ್‌ 4 ಮಿನಿ : 1900 mAh ಬ್ಯಾಟರಿ

ಈ ವಿಚಾರವನ್ನು ನೀವು ಗಮನಿಸಲೇಬೇಕು. ಈ ಹಿಂದೆ ಬಿಡುಗಡೆ ಮಾಡಿದ ಗೆಲಾಕ್ಸಿ ಎಸ್‌ 3 ಸಾಧಾರಣ ಇದೇ ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದು, ಈ ಸ್ಮಾರ್ಟ್‌ಫೋನ್‌ 2100 mAh ಬ್ಯಾಟರಿಯೊಂದಿಗೆ ಬಂದಿದೆ. ಆದರೆ ಈ ಸ್ಮಾರ್ಟ್‌ಫೋನ್‌ಗೆ 1900 mAh ಬ್ಯಾಟರಿ ನೀಡಿದ್ದಾರೆ.

ಬೆಲೆ :

ಬೆಲೆ :

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ವರ್ಸಸ್‌ ಎಸ್‌4 ಮಿನಿ


ಗೆಲಾಕ್ಸಿ ಎಸ್‌ 4 : 36,490
ಎಸ್‌ 4 ಮಿನಿ : 27,990

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot