ಸ್ಯಾಮ್‌ಸಂಗ್‌ನಿಂದ ಹೊಸ ಮೈಲಿಗಲ್ಲು: ಎರಡೇ ತಿಂಗಳಲ್ಲಿ 2 ಕೋಟಿ ಗೆಲಾಕ್ಸಿ ಎಸ್‌ 4 ಮಾರಾಟ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್4ಗೆ ಗ್ರಾಹಕರು ಬೌಲ್ಡ್‌ ಆಗಿದ್ದಾರೆ. ಗೆಲಾಕ್ಸಿ ಎಸ್4 ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಬಿಡುಗಡೆಯಾದ ಎರಡೇ ತಿಂಗಳಿನಲ್ಲಿ2 ಕೋಟಿ ಗೆಲಾಕ್ಸಿ ಎಸ್‌ 4 ಸ್ಮಾರ್ಟ್‌ಫೋನ್ ವಿಶ್ವದಾದ್ಯಂತ ಮಾರಾಟವಾಗಿದೆ.

ಕೋರಿಯಾದ Yonhap ವೆಬ್‌ಸೈಟ್‌ಗೆ ಸ್ಯಾಮ್‌ಸಂಗ್‌ ಈ ಮಾಹಿತಿ ತಿಳಿಸಿದ್ದು,ಕೋರಿಯಾ ಒಂದೇ ದೇಶದಲ್ಲಿ 5 ಲಕ್ಷ ಎಸ್4 ಸ್ಮಾರ್ಟ್‌ಫೋನ್‌ ಮಾರಾಟ ಮಾಡಿದ್ದೇವೆ ಎಂದು ಸ್ಯಾಮ್‌ಸಂಗ್‌ ತಿಳಿಸಿದೆ. ಗೆಲಾಕ್ಸಿ ಎಸ್‌4 ಬಿಡುಗಡೆಯಾದ ಐದೇ ದಿನದಲ್ಲಿ 40 ಲಕ್ಷ ಸ್ಮಾರ್ಟ್‌ಫೋನ್‌ ಮಾರಾಟ ಮಾಡಿತ್ತು. ಮೇ ತಿಂಗಳಿನಲ್ಲಿ 1ಕೋಟಿ ಎಸ್‌4 ಸ್ಮಾರ್ಟ್‌ಫೋನ್‌ ವಿಶ್ವದಲ್ಲಿ ಮಾರಾಟವಾಗಿತ್ತು.

ಕಳೆದ ಏಪ್ರಿಲ್‌ 26ರಂದು ವಿಶ್ವದ ಮಾರುಕಟ್ಟೆಗೆ ಗೆಲಾಕ್ಸಿ ಎಸ್‌4 ಬಿಡುಗಡೆಯಾಗಿತ್ತು. ಆರಂಭದಲ್ಲಿ ಭಾರತದಲ್ಲಿ 41,500 ರೂ ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಭಾರೀ ಸಂಖ್ಯೆಯಲ್ಲಿ ಗೆಲಾಕ್ಸಿ ಎಸ್‌4 ಮಾರಾಟವಾಗುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಇದರ ಬೆಲೆಯನ್ನು ಇಳಿಕೆ ಮಾಡಿದ್ದು ಈಗ ನೀವು ರೂ. 36,490 ಬೆಲೆಯಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್‌ನಿಂದ ಹೊಸ ಮೈಲಿಗಲ್ಲು: ಎರಡೇ ತಿಂಗಳಲ್ಲಿ 2 ಕೋಟಿ ಗೆಲಾಕ್ಸಿ ಎಸ್‌ 4 ಮಾರಾಟ

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4
ವಿಶೇಷತೆ:

  • 5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
  • ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌ ಅಕ್ಟಾ ಕೋರ್‌ ಪ್ರೋಸೆಸರ್ 
  • 2GB RAM 
  • 16GB ಆಂತರಿಕ ಮೆಮೋರಿ
  • 64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
  • 13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್‌,ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
  • 2 ಎಂಪಿ ಮುಂದುಗಡೆ ಕ್ಯಾಮೆರಾ 
  • ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
  • 2,600mAh ಬ್ಯಾಟರಿ

ಇದನ್ನೂ ಓದಿ: ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್4ನಲ್ಲಿ ಅಂಥ ವಿಶೇಷತೆ ಏನಿದೆ ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot