Home
ಮೊಬೈಲ್

ಭಾರತದಲ್ಲಿ ಬಿಡುಗಡೆ ಆಯ್ತು ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ : ಬೆಲೆ, ವಿಶೇಷತೆಗಳು..!

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ

By Srinidhi

ದಕ್ಷಿಣ ಕೋರಿಯಾ ಮೂಲದ ಸ್ಯಾಮ್‌ಸಂಗ್ ಬಹು ನಿರೀಕ್ಷಿತ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು, ಮೇ 5ರಿಂದ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಫ್ಲಿಪ್‌ಕಾರ್ಟ್‌ನಲ್ಲಿಯೂ ಈ ಫೋನ್ ದೊರೆಯಲಿದೆ. ಈ ಹಿನ್ನಲೆಯಲ್ಲಿ ಈ ಎರಡು ಫೋನಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಬಿಡುಗಡೆ ಆಯ್ತು ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್

(ವಿಡಿಯೋ) ಹೇಗಿದೆ ಗೊತ್ತಾ ಜಿಯೋ DTH..? ಹೇಗೆ ಕಾರ್ಯನಿರ್ವಹಿಸುತ್ತೆ..? ಇಲ್ಲಿದೇ ಸಂಪೂರ್ಣ ವಿವರ

ಸದ್ಯ ಮಾರುಕಟ್ಟೆಯಲ್ಲಿ ಎಲ್ಲಾ ಮಾದರಿಯ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಹೇಗೆ ಆಕರ್ಷಿಸುತ್ತವೆ ಎಂಬುದನ್ನು ಕಾದು ನೋಡಬೇಕು. ಈ ಪೋನುಗಳು ಸ್ಯಾಮ್‌ಸಂಗ್‌ಗೆ ಮತ್ತೊಂದು ಬ್ರೇಕ್ ನೀಡಲಿದಯೆ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಬೆಲೆ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಬೆಲೆ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಇಂದು ಲಾಂಚ್ ಆಗಿದ್ದು, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ರೂ.57,900 ಗಳಾಗಿದ್ದು, ಇದೇ ಗ್ಯಾಲೆಕ್ಸಿ S8 ಪ್ಲಸ್ ರೂ. 64,900ಗೆ ದೊರೆಯಲಿದೆ. ಈ ಎರಡು ಫೋನ್‌ಗಳು ಡುಯಲ್ ಸಿಮ್ ಆಯ್ಕೆಯನ್ನು ಹೊಂದಿದೆ. ಆದರೆ ಈ ಫೋನ್‌ಗಳು ಅಮೆರಿಕಾದ ಮಾರುಕಟ್ಟೆಯಲ್ಲಿ ಇನ್ನು ಕಡಿಮೆ ಬೆಲೆಗೆ ಲಭ್ಯವಿದೆ ಎನ್ನಲಾಗಿದೆ.

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಡಿಸ್‌ಪ್ಲೇ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಡಿಸ್‌ಪ್ಲೇ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಎಡ್ಜ್ ಕರ್ವಡ್ ಡಿಸ್‌ಪ್ಲೇಯನ್ನು ನೀಡಲಾಗಿದೆ. ಗೊರಿಲ್ಲ ಗ್ಲಾಸ್ 5 ಪ್ರೋಟೆಕ್ಷನ್ ಇದಕ್ಕಿದೆ. ಗ್ಯಾಲೆಕ್ಸಿ S8 ಪ್ಲಸ್ 6.2 ಇಂಚಿನ ಪರದೆಯನ್ನು ಹೊಂದಿದ್ದರೆ, ಗ್ಯಾಲೆಕ್ಸಿ S8 5.8 ಇಂಚಿನ ಪರದೆಯನ್ನು ಹೊಂದಿದೆ. ಆಮೊಲೈಡ್ ಡಿಸ್‌ಪ್ಲೇಯಾಗಿದ್ದು, QHD+ ಗುಣಮಟ್ಟವನ್ನು ಹೊಂದಿದೆ.

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಪ್ರೋಸೆಸರ್:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಪ್ರೋಸೆಸರ್:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನ್‌ಗಳು 2.35 GHz ಸ್ಯಾಮ್‌ಸಂಗ್ ಏಕ್ಸ್ನೋನ್ಸ್ 8895 ಪ್ರೋಸೆಸರ್ ಹೊಂದಿದೆ. ಈ ಫೋನುಗಳಲ್ಲಿ 4GB RAM ಅಳವಡಿಸಲಾಗಿದೆ. ಆದರೆ ಈ ಹಿಂದೆ ಕ್ವಾಲಕಮ್ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ಹೊಂದಿರುವ ಫೋನುಗಳನ್ನು ಭಾರತದಲ್ಲಿ ಪರಿಚಯಿಸಲಾಗುವುದಾಗಿ ತಿಳಿಸಲಾಗಿತ್ತು.

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಕ್ಯಾಮೆರಾ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಕ್ಯಾಮೆರಾ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 12 MP ಡ್ಯುಯಲ್ ಪಿಕ್ಸೆಲ್ ಹಿಂಬದಿ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ನೀಡಲಾಗಿದೆ. ಇದು ಸಹ ಆಟೋ ಪೋಕಸ್ ಹೊಂದಿದೆ. ಈ ಎರಡು ಫೋನುಗಳು 64 GB ಇಂಟರ್‌ನಲ್ ಮೆಮೊರಿ ಇದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 256 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ಮಾಡಿಕೊಡಲಾಗಿದೆ.

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಬ್ಯಾಟರಿ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಬ್ಯಾಟರಿ:

ಗ್ಯಾಲೆಕ್ಸಿ S8 ಮತ್ತು ಗ್ಯಾಲೆಕ್ಸಿ S8 ಪ್ಲಸ್ ಸ್ಮಾರ್ಟ್‌ಫೋನುಗಳಲ್ಲಿ ಡಿಸ್‌ಪ್ಲೇ ವ್ಯತ್ಯಾಸ ಹೊಂದಿರುವ ಹಿನ್ನಲೆಯಲ್ಲಿ ಬ್ಯಾಟರಿ ಸಹ ಬೇರೆ ಬೇರೆಯಾಗಿದ್ದು, ಗ್ಯಾಲೆಕ್ಸಿ S8 ನಲ್ಲಿ 3000 mAh ಹಾಗೂ ಗ್ಯಾಲೆಕ್ಸಿ S8 ಪ್ಲಸ್ ನಲ್ಲಿ 3500 mAh ಬ್ಯಾಟರಿ ಅಳವಡಿಸಲಾಗಿದೆ. ಜೊತೆ ಈ ಫೋನ್‌ಗಳು 4G ಸಪೋರ್ಟ್ ಮಾಡಲಿವೆ ಮತ್ತು ಆಂಡ್ರಾಯ್ಡ್ 7.0ದಲ್ಲಿ ಕಾರ್ಯನಿರ್ವಹಿಸಲಿವೆ.

Best Mobiles in India

English summary
The Samsung Galaxy S8 and S8+ have been launched in India at the ongoing event in New Delhi. These smartphones are priced at Rs. 57,900 and Rs. 64,900. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+