Subscribe to Gizbot

ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!

Written By:

ಭಾರತೀಯ DTH ಲೋಕದಲ್ಲಿ ಹೊಸ ಭಾಷ್ಯವನ್ನು ಬರೆಯಲು ಮುಂದಾಗಿರುವ ರಿಲಯನ್ಸ್ ಮಾಲೀತ್ವದ ಜಿಯೋ ತನ್ನ ಪರೀಕ್ಷಾರ್ಥ ಸೇವೆಯನ್ನು ಆರಂಭಿಸಿದ್ದು, ಈಗಾಗಲೇ ಹಲಕಡೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿದೆ ಎನ್ನುವ ಮಾತು ಕೇಳಿಬಂದಿದೆ.

ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!

ಓದಿರಿ: ಜಿಯೋ DTH ಮೂರು ತಿಂಗಳಲ್ಲ, 6 ತಿಂಗಳು ಫ್ರೀ...!!

ಜಿಯೋ DTH ಲಾಂಚ್ ಮಾಡಲಿದೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿದ್ದು, ಜಿಯೋ DTH ಸೆಟಪ್ ಬಾಕ್ಸ್ ಹೇಗಿದೆ ಎಂಬುದರ ಕುರಿತ ಮಾಹಿತಿಯನ್ನು ಈ ಹಿಂದೆಯೇ ನೀಡಿದ್ದೇವು, ಸದ್ಯ ಜಿಯೋ ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ.

ಓದಿರಿ: ಲೀಕ್ ಆಗಿದೆ ಜಿಯೋ ಡಿಟಿಹೆಚ್ ಸೆಟಪ್‌ ಬಾಕ್ಸ್: ಬೆಲೆ ಎಷ್ಟು..? ಇಲ್ಲಿದೇ ಸಂಪೂರ್ಣ ವಿವರ.!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯೂಟೂಬ್ ನಲ್ಲಿ ಸದ್ದು ಮಾಡುತ್ತಿದೆ ವಿಡಿಯೋ:

ಯೂಟೂಬ್ ನಲ್ಲಿ ಸದ್ದು ಮಾಡುತ್ತಿದೆ ವಿಡಿಯೋ:

ಸದ್ಯ ಮಾರುಕಟ್ಟೆಗೆ ಬರಲು ಕಾಯುತ್ತಿರುವ ಜಿಯೋ DTH ಹೇಗಿದೆ ಎಂಬುದನ್ನು ಯೂಟೂಬ್ ನಲ್ಲಿ ವಿಡಿಯೋ ಮಾಡಿ ಹಾಕಲಾಗಿದೆ. ಸದ್ಯ ಈ ವಿಡಿಯೋ ಬಾರಿ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಜಿಯೋ DTH ಕಾರ್ಯ ನಿರ್ವಹಣೆಯ ಕುರಿತ ವಿಡಿಯೋ ಇದಾಗಿದೆ.

ಸದ್ಯ 150 ಚಾನಲ್ ಮಾತ್ರ ಲಭ್ಯ:

ಸದ್ಯ 150 ಚಾನಲ್ ಮಾತ್ರ ಲಭ್ಯ:

ಸದ್ಯ ಬಿಡುಗಡೆಯಾಗಿರುವ ವಿಡಿಯೋದಲ್ಲಿ ತಿಳಿಸಿರುವಂತೆ ಜಿಯೋ DTHನಲ್ಲಿ ಕೇವಲ 150 ಚಾನಲ್‌ಗಳು ಮಾತ್ರವೇ ಪ್ರಸಾರವಾಗುತ್ತಿದ್ದು, ಲಾಂಚ್ ಆದ ನಂತರದಲ್ಲಿ ಇದರ ಸಂಖ್ಯೆ ಹೆಚ್ಚಾಗಲಿದೆ ಎನ್ನಲಾಗಿದೆ. ಮುಂದೆ 400ಕ್ಕೂ ಹೆಚ್ಚು ಚಾನಲ್‌ಗಳು ಲಭ್ಯವಿರಲಿದೆ

ಜಿಯೋ DTH ವಿಶೇಷತೆಗಳು:

ಜಿಯೋ DTH ವಿಶೇಷತೆಗಳು:

ಸದ್ಯ ಹೆಚ್ಚಿನ ಚಾನಲ್‌ಗಳು ಜಿಯೋ DTH ನಲ್ಲಿ ಲಭ್ಯವಿಲ್ಲ. ಈಗಾಗಲೇ ಕಾರ್ಯಚರಣೆ ಆರಂಭಿಸಿರುವ ಜಿಯೋ DTH ಸೆಟಪ್ ಬಾಕ್ಸ್‌ನಲ್ಲಿ HDMI ಸಫೋರ್ಟ್ ಮಾಡಲಿದೆ. ಇದರಲ್ಲಿ 4K ವಿಡಿಯೋ ರೆಕಾರ್ಡಿಂಗ್ ಹಾಗೂ UHD ವಿಡಿಯೋ ಪ್ರಸಾರದ ಗುಣಮಟ್ಟವನ್ನು ಹೊಂದಿದೆ. ರಿಮೋಟ್ ವಾಯ್ಸ್ ಕಂಟ್ರೋಲ್ ಆಯ್ಕೆಯನ್ನು ಹೊಂದಿದೆ. 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.

ವಿಡಿಯೋ ಕ್ವಾಲಿಟಿ ಉತ್ತಮವಾಗಿದೆ:

ವಿಡಿಯೋ ಕ್ವಾಲಿಟಿ ಉತ್ತಮವಾಗಿದೆ:

ಸದ್ಯ ಕಾರ್ಯಚರಣೆ ಆರಂಭಸಿರುವ ಜಿಯೋ DTHನಲ್ಲಿ ಪ್ರಸಾರವಾಗುತ್ತಿರುವ ವಿಡಿಯೋ ಕ್ವಾಲಿಟಿ ಉತ್ತಮವಾಗಿ ಎಂದು ತಿಳಿದುಬಂದಿದೆ. ಬೇರೆ ಎಲ್ಲಾ DTH ಗಳಿಗಿಂತಲೂ ಉತ್ತಮ ಕ್ವಾಲಿಟಿಯನ್ನು ಜಿಯೋ DTH ನೀಡುತ್ತಿದೆ ಎನ್ನಲಾಗಿದೆ.

 ಸುಲಭ ಕಾರ್ಯಾಚರಣೆ:

ಸುಲಭ ಕಾರ್ಯಾಚರಣೆ:

ಜಿಯೋ DTH ಅಳವಿಡಿಸಿಕೊಂಡಿರುವ ಕಾರ್ಯಚರಣೆಯ ತಂತ್ರಾಂಶವು ಉತ್ತಮವಾಗಿದ್ದು, ಸುಲಭವಾಗಿ ಚಾನಲ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಚಾನಲ್‌ಗಳ ಆಯ್ಕೆ, ಸೆಟಿಂಗ್ಸ್ ಮಾಡಿಕೊಳ್ಳುವುದು ಸುಲಭವಾಗಿದೆ ಎನ್ನಲಾಗಿದೆ.

ಇನ್‌ಫಾರೆಡ್ ರಿಮೋಟ್ ಕಂಟ್ರೋಲ್:

ಇನ್‌ಫಾರೆಡ್ ರಿಮೋಟ್ ಕಂಟ್ರೋಲ್:

ಇದೇ ಮೊದಲ ಬಾರಿಗೆ ಜಿಯೋ ತನ್ನ DTH ಸೆಟಪ್‌ ಬಾಕ್ಸ್ ನೊಂದಿಗೆ ಇನ್‌ಫಾರೆಡ್ ಮೂಲಕ ಕಾರ್ಯನಿರ್ವಹಿಸುವ ರಿಮೋಟ್ ಕಂಟ್ರೋಲ್ ಅನ್ನು ನೀಡಿದ್ದು, ನೀವು ಯಾವುದೇ ಮೂಲೆಯಿಂದ ಕುಳಿತು ರಿಮೋಟ್ ಒತ್ತಿದರು ಟಿವಿ ಚಾನಲ್ ಬದಲಾಗಲಿದೆ. ಚಾನಲ್ ಬದಾಲಾಯಿಸಲು ಸೆಟಪ್ ಬಾಕ್ಸ್ ಮುಂದೆಯೇ ರಿಮೋಟ್ ಹಿಡಿಯಬೇಕಾಗಿಲ್ಲ.

ಆಡಲ್ಟ್ ಪ್ರೈವಸಿ ಸಹ ಇದೆ;

ಆಡಲ್ಟ್ ಪ್ರೈವಸಿ ಸಹ ಇದೆ;

ಜಿಯೋ DTH ತನ್ನ ಗ್ರಾಹಕರಿಗೆ ಅನೇಕ ಹೊಸ ಆಯ್ಕೆಗಳನ್ನು ನೀಡಿದೆ. ನಿಮಗೆ ಬೇಡವಾದ ಚಾನಲ್‌ಗಳನ್ನು ಲಾಕ್ ಮಾಡಬಹುದಾಗಿದೆ. ಇದಕ್ಕಾಗಿ ಆಡಲ್ಟ್ ಲಾಕ್ ಮತ್ತು ಚೈಲ್ಡ್ ಲಾಕ್ ನೀಡಲಾಗಿದ್ದು, ಮಕ್ಕಳು ಯಾವ ಚಾನಲ್‌ಗಳನ್ನು ನೋಡಬೇಕು ಎಂಬುದನ್ನು ನೀವೆ ನಿರ್ಧರಿಸಬಹುದಾಗಿದೆ.

ಪೈನ್‌ ಡ್ರೈವ್ ಹಾಕಬಹುದು:

ಪೈನ್‌ ಡ್ರೈವ್ ಹಾಕಬಹುದು:

ಜಿಯೋ DTHನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡುವ ಅವಕಾಶವನ್ನು ಮಾಡಿಕೊಡಲಿದ್ದು, ಅದನ್ನು ನಿಮ್ಮ ಪೆನ್‌ಡ್ರೈವ್‌ಗೆ ವರ್ಗಾವಣೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದಲ್ಲದೇ ನಿಮ್ಮ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋಗಳನ್ನು ಟಿವಿಯಲ್ಲಿ ನೋಡುವ ಅವಕಾಶವನ್ನು ಜಿಯೋ DTH ಮಾಡಿಕೊಟ್ಟಿದೆ.

ನಿವೇ ನೋಡಿ ಜಿಯೋ DTH ಹೇಗಿದೆ:

ಜಿಯೋ DTHಹೇಗೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ನೀವೇ ನೋಡಿ. ಇದು ಜಿಯೋ DTH ಕುರಿತ ಮೊದಲ ವಿಡಿಯೋ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Reliance Jio DTH service has been in the news for a long time now, and recently, some real life images of the product have surfaced online. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot