Home
ಮೊಬೈಲ್

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8: ಡುಯಲ್ ಹಿಂಬದಿಯ ಕ್ಯಾಮೆರಾ, ಸ್ನಾಪ್ ಡ್ರಾಗನ್ 830.

By Ashok

ಸ್ಯಾಮ್ಸಂಗ್ ತನ್ನ ಮುಂದಿನ ಫ್ಲಾಗ್ ಶಿಪ್ ಫೋನ್ ಗ್ಯಾಲಕ್ಸಿ ಎಸ್ 8 ರ ಬಿಡುಗಡೆಗೆ ಸನ್ನದ್ಧವಾಗುತ್ತಿದೆ. ಗ್ಯಾಲಕ್ಸಿ ನೋಟ್ 7 ಬಿಡುಗಡೆಯೊಂದಿಗೆ ಕಂಪನಿಯು ಬರೀ ಕೆಟ್ಟ ವಿಷಯಗಳಿಗಷ್ಟೇ ಸುದ್ದಿಯಾಗುತ್ತಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್8: ಡುಯಲ್ ಹಿಂಬದಿಯ ಕ್ಯಾಮೆರಾ, ಸ್ನಾಪ್ ಡ್ರಾಗನ್ 830.

ಬರೋಬ್ಬರಿ 52 ಜನರ ಬಳಿಯಿದ್ದ ಡುಯಲ್ ಎಡ್ಜ್ ನೋಟ್ 7 ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಕಂಪನಿಯು ಪ್ರಪಂಚದೆಲ್ಲೆಡೆಯಿಂದ ಫೋನನ್ನು ವಾಪಸ್ಸು ತರಿಸಿಕೊಂಡು ಹೊಸ ನೋಟ್ 7 ಅನ್ನು ನೀಡಿತು. ಇದು ಕೂಡ ಹೆಚ್ಚು ಪ್ರಯೋಜನಕಾರಿಯಾಗಲಿಲ್ಲ. ಕಾರಣ, ಸುರಕ್ಷಿತ ನೋಟ್ 7ನಲ್ಲಿ ಕೂಡ ಬೆಂಕಿ ಕಾಣಿಸಿಕೊಂಡಿತು. ಜೊತೆಗೆ ದಕ್ಷಿಣ ಕೊರಿಯಾದ ಟೆಕ್ ದೈತ್ಯ ನೋಟ್ 7ರ ಉತ್ಪಾದನೆಯನ್ನೇ ಸ್ಥಗಿತಗೊಳಿಸಿದೆ ಎನ್ನುವ ಸುದ್ದಿಗಳಿವೆ.

ಓದಿರಿ: ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಆಫರ್: ಅನ್‌ಲಿಮಿಟೆಡ್ ಉಚಿತ ಕರೆಗಳು ಮತ್ತು 100GB ಉಚಿತ ಡಾಟಾ

ನೋಟ್ 7 ಅನೇಕ ಗ್ರಾಹಕರನ್ನು ನಿರಾಸೆಗೊಳಿಸಿದ ಕಾರಣದಿಂದ, ಸ್ಯಾಮ್ಸಂಗ್ ತನ್ನ ಫ್ಲಾಗ್ ಶಿಪ್ ಫೋನ್ ಗ್ಯಾಲಕ್ಸಿ 8ರ ಬಿಡುಗಡೆಯನ್ನು ತ್ವರಿತಗೊಳಿಸುತ್ತಿದೆ. ಇವತ್ತು ಹೊಸ ಟೀಸರ್ ಅನ್ನು ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ ಫೋನ್ ಎಂ.ಡಬ್ಲೂ.ಸಿ 2016ರಲ್ಲಿ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಈ ಹೊಸ ಸ್ಮಾರ್ಟ್ ಫೋನಿನ ಗುಣ ವಿಶೇಷತೆಗಳ ಬಗ್ಗೆಯೂ ಒಂದಷ್ಟು ಗಾಳಿ ಸುದ್ದಿಗಳಿವೆ. ಅವೇನೆಂದು ನೋಡೋಣ ಬನ್ನಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಿಂಬದಿಯಲ್ಲಿ ಎರಡು ಕ್ಯಾಮೆರ.

ಹಿಂಬದಿಯಲ್ಲಿ ಎರಡು ಕ್ಯಾಮೆರ.

ಹೊಸ ಗಾಳಿ ಸುದ್ದಿಯ ಪ್ರಕಾರ ಗ್ಯಾಲಕ್ಸಿ ಎಸ್8ರಲ್ಲಿ 16 ಮತ್ತು 8 ಮೆಗಾಪಿಕ್ಸೆಲ್ಲಿನ ಎರಡು ಕ್ಯಾಮೆರಾಗಳು ಹಿಂಬದಿಯಲ್ಲಿರಲಿದೆ. ಇದರಿಂದ ಉತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಬಹುದು. 16 ಮೆಗಾಪಿಕ್ಸೆಲ್ಲಿನ ಕ್ಯಾಮೆರಾವನ್ನು ಲೈಟ್ ಅಪ್ ಎಂದೂ 8 ಮೆಗಾಪಿಕ್ಸೆಲ್ಲಿನ ಕ್ಯಾಮೆರಾವನ್ನು ಲೈಟ್+ ಎಂದು ಕರೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಕ್ಲಿಕ್ಕಿಸಬಲ್ಲ ಹೋಮ್ ಬಟನ್ ಇರುವುದಿಲ್ಲ.

ಕ್ಲಿಕ್ಕಿಸಬಲ್ಲ ಹೋಮ್ ಬಟನ್ ಇರುವುದಿಲ್ಲ.

ಸ್ಯಾಮ್ಸಂಗ್ ಆ್ಯಪಲ್ಲಿನ ಅನ್ವೇಷಣೆಗಳನ್ನು ಕದಿಯುವುದರಲ್ಲಿ ನಿಸ್ಸೀಮತೆ ಹೊಂದಿದೆ ಮತ್ತು ಗ್ಯಾಲಕ್ಸಿ ಎಸ್8 ರಲ್ಲಿ ಆ್ಯಪಲ್ಲಿನ ಹೊಸ ಅನ್ವೇಷಣೆ ಇರಲಿದೆ. ಗ್ಯಾಲಕ್ಸಿ ಎಸ್8ರಲ್ಲಿ ಕ್ಲಿಕ್ಕಿಸಬಲ್ಲ ಹೋಮ್ ಬಟನ್ ಇರುವುದಿಲ್ಲ. ಬದಲಿಗೆ ಐಫೋನ್ 7ಮತ್ತು ಐಫೋನ್ 7 ಪ್ಲಸ್ ನಲ್ಲಿರುವಂತೆ ಕ್ಲಿಕ್ ಮಾಡಲಾಗದ ಹೋಮ್ ಕೀ ಇರುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಝೆಲ್ ಲೆಸ್ ಪರದೆ.

ಬೆಝೆಲ್ ಲೆಸ್ ಪರದೆ.

ವರದಿಗಳ ಪ್ರಕಾರ ಗ್ಯಾಲಕ್ಸಿ ಎಸ್8ರಲ್ಲಿ ಬೆಝೆಲ್ ಲೆಸ್ ಪರದೆ ಇರಲಿದೆ. ಈ ಪರದೆ ಇದ್ದರೆ ಹೋಮ್ ಕೀ ಪರದೆಯೊಳಗೇ ಅಂತರ್ಗತವಾಗಿಬಿಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೂರ್ಣವಾಗಿ ಹೊಸ ವಿನ್ಯಾಸ.

ಪೂರ್ಣವಾಗಿ ಹೊಸ ವಿನ್ಯಾಸ.

ಆ್ಯಪಲ್ ಮುಂದಿನ ವರುಷ ಹೊಸ ವಿನ್ಯಾಸದ ಸ್ಮಾರ್ಟ್ ಫೋನನ್ನು ಬಿಡುಗಡೆಗೊಳಿಸುವ ಯೋಚನೆಯಲ್ಲಿದೆ. ಸ್ಯಾಮ್ಸಂಗ್ ಕೂಡ ಆ್ಯಪಲ್ ಜೊತೆಗೆ ಸ್ಫರ್ಧಿಸಲು ಹೊಸ ವಿನ್ಯಾಸದ ಸ್ಮಾರ್ಟ್ ಫೋನನ್ನು ಹೊರತರಲಿದೆ.

ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 830 ಎಸ್.ಒ.ಸಿ.

ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 830 ಎಸ್.ಒ.ಸಿ.

ಇದು ನಿರೀಕ್ಷಿತ. ಸ್ಯಾಮ್ ಮೊಬೈಲಿನ ವರದಿಗಳ ಪ್ರಕಾರ ಗ್ಯಾಲಕ್ಸಿ ಎಸ್ 8ರಲ್ಲಿ ಹೊಸ ತಲೆಮಾರಿನ ಪ್ರೊಸೆಸರ್ ಆದ ಸ್ನಾಪ್ ಡ್ರಾಗನ್ 830 ಇರಲಿದೆ. ಈ ಫೋನಿನಲ್ಲಿ ಸ್ಯಾಮ್ಸಂಗ್ 6ಜಿಬಿ ರ್ಯಾಮ್ ಅನ್ನು ಕೊಡಬಹುದೆಂದು ನಿರೀಕ್ಷಿಸಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಪ್ಪಟೆ ಪರದೆ ಇರುವುದಿಲ್ಲ.

ಚಪ್ಪಟೆ ಪರದೆ ಇರುವುದಿಲ್ಲ.

ತಿಂಗಳ ಹಿಂದೆ ಸ್ಯಾಮ್ಸಂಗಿನ ಉದ್ಯೋಗಿಯೊಬ್ಬರು ಕೊಟ್ಟ ಮಾಹಿತಿಯ ಪ್ರಕಾರ ಗ್ಯಾಲಕ್ಸಿ ಎಸ್8ರಲ್ಲಿ ಚಪ್ಪಟೆ ಪರದೆಯ ಆವೃತ್ತಿ ಇರುವುದಿಲ್ಲ. ಕಾರಣ ಗ್ಯಾಲಕ್ಸಿ ಎಸ್7 ಎಡ್ಜ್ ನ ವಹಿವಾಟು ಚಪ್ಪಟೆ ಪರದೆಯ ಎಸ್ 7ಗಿಂತ ಹೆಚ್ಚಿತ್ತು.

ಕೊರಿಯಾ ಹೆರಾಲ್ಡಿನಲ್ಲಿ ಸೋರಿಕೆಯಾದ ಮಾಹಿತಿಯ ಪ್ರಕಾರ ಗ್ಯಾಲಕ್ಸಿ ಎಸ್8 ಕೇವಲ ಕರ್ವ್ಡ್ ಪರದೆಯಲ್ಲಿ ಲಭ್ಯವಿರುತ್ತದೆ.

4ಕೆ ಪರದೆ.

4ಕೆ ಪರದೆ.

ಮೈಡ್ರೈವರ್ಸ್.ಕಾಮ್ ಪ್ರಕಾರ ಸ್ಯಾಮ್ಸಂಗ್ 'ಪ್ರಾಜೆಕ್ಟ್ ಡ್ರೀಮ್' ಎನ್ನುವ ಯೋಜನೆಯಲ್ಲಿ ತೊಡಗಿಸಿಕೊಂಡಿದೆ; ಇದು ವರ್ಚ್ಯುಯಲ್ ರಿಯಾಲಿಟಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ಮುಂದಿನ ಫ್ಲಾಗ್ ಶಿಪ್ ಫೋನುಗಳಲ್ಲಿ 4ಕೆ ಪರದೆಗಳಿರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Samsung is already getting ready to launch their next flagship smartphone- the Galaxy S8. Ever since the release of Galaxy Note 7, the company has been at the receiving end for all the bad stuff.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+