ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಆಫರ್: ಅನ್‌ಲಿಮಿಟೆಡ್ ಉಚಿತ ಕರೆಗಳು ಮತ್ತು 100GB ಉಚಿತ ಡಾಟಾ

By Suneel
|

ಏರ್‌ಟೆಲ್ ಇತ್ತೀಚೆಗಷ್ಟೆ 1GB ಡಾಟಾ ಬೆಲೆಗೆ 10GB 4G ಡಾಟಾ ಆಫರ್‌ ಅನ್ನು ನೀಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ರಿಲಾಯನ್ಸ್ ಜಿಯೋ ಎದುರು ಪೈಪೋಟಿ ನೀಡುವ ಹಿನ್ನೆಲೆಯಲ್ಲಿ ಏರ್‌ಟೆಲ್‌ ರೀತಿ ವೊಡಾಫೋನ್ ಸಹ ಇದೇ ಆಫರ್‌ ಅನ್ನು ಇತ್ತೀಚೆಗಷ್ಟೆ ನೀಡಿದೆ.

ವಿಶೇಷ ಅಂದ್ರೆ ಏರ್‌ಟೆಲ್‌ ಈಗ ತನ್ನ ಬ್ರಾಡ್‌ಬ್ಯಾಂಡ್‌ ಜೊತೆಗೆ ಅನ್‌ಲಿಮಿಟೆಡ್‌ ಉಚಿತ ಕರೆಗಳು ಮತ್ತು 3 ತಿಂಗಳ ಅವಧಿಗೆ 100GB ಡಾಟಾವನ್ನು ಉಚಿತವಾಗಿ ನೀಡುತ್ತಿದೆ. ಈ ಆಫರ್‌ ಅನ್ನು ಪಡೆದುಕೊಳ್ಳುವುದು ಹೇಗೆ, ಏರ್‌ಟೆಲ್‌(Airtel) ಬ್ರಾಡ್‌ಬ್ಯಾಂಡ್ ಖರೀದಿಸುವುದರಿಂದ ಆಗುವ ಪ್ರಯೋಜನಗಳು ಏನು ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಏರ್‌ಟೆಲ್‌ ಪ್ರೀಪೇಡ್ ಬಳಕೆದಾರರು 1GB ಡಾಟಾ ಬೆಲೆಗೆ 15GB 4G ಡಾಟಾ ಪಡೆಯುವುದು ಹೇಗೆ?

ಅತ್ಯುತ್ತಮ ನೆಟ್‌ವರ್ಕ್‌

ಅತ್ಯುತ್ತಮ ನೆಟ್‌ವರ್ಕ್‌

ಅಂದಹಾಗೆ ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಸೇವೆಯು ಯಾವುದೇ ರೀತಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಇಲ್ಲದೇ ಇಂಟರ್ನೆಟ್‌ ಸೇವೆಯನ್ನು ಎಲ್ಲಾ ಸಮಯದಲ್ಲೂ ನೀಡುವ ಬಗ್ಗೆ ಭರವಸೆ ನೀಡಿದೆ. ಗ್ರಾಹಕರು ಎದುರಿಸುವ ನೆಟ್‌ವರ್ಕ್ ಸಮಸ್ಯೆ ಅರಿತು, ಈ ಬ್ರಾಡ್‌ಬ್ಯಾಂಡ್‌ ಸೇವೆ ನೀಡುತ್ತಿರುವ ಬಗ್ಗೆ ಏರ್‌ಟೆಲ್‌ ಹೇಳಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಥಿರವಾದ ನೆಟ್‌ವರ್ಕ್‌ ವೇಗ ಡೆಲಿವರಿ

ಸ್ಥಿರವಾದ ನೆಟ್‌ವರ್ಕ್‌ ವೇಗ ಡೆಲಿವರಿ

ಏರ್‌ಟೆಲ್‌ ತನ್ನ ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಭಾರತದಾದ್ಯಂತ ನೀಡುತ್ತಿದ್ದು, ನೆಟ್‌ವರ್ಕ್‌ ಡೆಲಿವರಿಯಲ್ಲಿ ಸದಾಕಾಲ ಸ್ಥಿರತೆಯನ್ನು ಕಾಪಾಡಿಕೊಳ್ಳಲಿದೆ.

ಶೀಘ್ರ ಗ್ರಾಹಕರ ಸೇವೆ

ಶೀಘ್ರ ಗ್ರಾಹಕರ ಸೇವೆ

ಬ್ರಾಡ್‌ಬ್ಯಾಂಡ್‌ನೊಂದಿಗೆ ಉಚಿತ ಅನ್‌ಲಿಮಿಟೆಡ್ ಕರೆಗಳು ಮತ್ತು 100GB ಡಾಟಾವನ್ನು ಉಚಿತವಾಗಿ 3 ತಿಂಗಳ ಅವಧಿಗೆ ನೀಡುತ್ತಿರುವ ಏರ್‌ಟೆಲ್‌, ಶೀಘ್ರವಾಗಿ ಗ್ರಾಹಕರ ಸಹಾಯವಾಣಿಯನ್ನು ಸಂಪರ್ಕ ನೀಡಲಿದೆ. ಗ್ರಾಹಕರು 'ಏರ್‌ಟೆಲ್‌ ಬ್ರಾಡ್‌ಬ್ಯಾಂಡ್ ಇಂಟರ್ನೆಟ್‌ ಸರ್ವೀಸ್'ಗೆ ಸೈನಪ್‌ ಆಗಿ ಉತ್ತಮ ಅನುಭವ ಪಡೆಯಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈರ್‌ಲೆಸ್ ಸೇವೆ

ವೈರ್‌ಲೆಸ್ ಸೇವೆ

ಏರ್‌ಟೆಲ್‌ ನೀಡುತ್ತಿರುವ ಬ್ರಾಡ್‌ಬ್ಯಾಂಡ್ ಹೊಸ ಪ್ಲಾನ್‌ಗಳ ಹೊಸ ಸೇವೆಯು ಅತ್ಯುತ್ತಮ ವೈರ್‌ಲೆಸ್ ಇಂಟರ್ನೆಟ್‌ ಸಂಪರ್ಕ ನೀಡುತ್ತಿದೆ. ಬ್ರಾಡ್‌ಬ್ಯಾಂಡ್‌ ಖರೀದಿಸಿ ಉಚಿತ ಅನ್‌ಲಿಮಿಟೆಡ್ ಕರೆಗಳು ಮತ್ತು 100GB ಡಾಟಾವನ್ನು ಉಚಿತವಾಗಿ 3 ತಿಂಗಳ ಅವಧಿಗೆ ಪಡೆಯಲು ರೂ.1049 ಬ್ರಾಡ್‌ಬ್ಯಾಂಡ್ ಪ್ಲಾನ್‌ ಅನ್ನು ಪಡೆಯಬಹುದು. ಅಥವಾ ಅದಕ್ಕೂ ಹೆಚ್ಚಿನ ಬ್ರಾಡ್‌ಬ್ಯಾಂಡ್ ಪಡೆಯಬಹುದು.
ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳಿಗೆ ಕ್ಲಿಕ್‌ ಮಾಡಿ

ಅನ್‌ಲಿಮಿಟೆಡ್ ವಾಯ್ಸ್ ಕರೆಗಳು

ಅನ್‌ಲಿಮಿಟೆಡ್ ವಾಯ್ಸ್ ಕರೆಗಳು

- ಏರ್‌ಟೆಲ್‌ ಬ್ರಾಡ್‌ಬ್ಯಾಂಡ್‌ ಜೊತೆಗೆ ರೂ.49 ರೀಚಾರ್ಜ್‌ ಪಡೆದಲ್ಲಿ ಲ್ಯಾಂಡ್‌ಲೈನ್‌ ಅನ್‌ಲಿಮಿಟೆಡ್ ಲೋಕಲ್ ವಾಯ್ಸ್ ಕರೆಗಳ ಸೇವೆ ಪಡೆಯಬಹುದು.
- ಬ್ರಾಡ್‌ಬ್ಯಾಂಡ್ ಜೊತೆಗೆ ರೂ.99 ರೀಚಾರ್ಜ್‌ ಪಡೆದಲ್ಲಿ ಅನ್‌ಲಿಮಿಟೆಡ್ ಲೋಕಲ್‌ ಮತ್ತು ಎಸ್‌ಟಿಡಿ ವಾಯ್ಸ್ ಕರೆಗಳ ಸೇವೆ ಸಿಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Airtel Offerː Unlimited Free calls and 100 GB Free Data with Broadband. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X