ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಮೂರು ಸಿಮ್‌ ಸ್ಮಾರ್ಟ್‌ಫೋನ್‌‌‌

Posted By:

ವಿಶ್ವದ ನಂಬರ್‌ ಒನ್‌ ಸ್ಮಾರ್ಟ್‌ಫೋನ್‌ ತಯಾರಕ ಕಂಪೆನಿ ಸ್ಯಾಮ್‌ಸಂಗ್‌ ಮೂರು ಸಿಮ್‌ ಹಾಕಬಹುದಾದ ಸ್ಮಾರ್ಟ್‌ಫೋನ್‌‌ ಬ್ರಝಿಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.ಗೆಲಾಕ್ಸಿ ಸ್ಟಾರ್‌ ಟ್ರೈಸ್‌‌ ಹೆಸರಿನ ಸ್ಮಾರ್ಟ್‌ಫೋನ್‌ನ್ನು ಬ್ರಝಿಲ್‌ನಲ್ಲಿರುವ ಸ್ಯಾಮ್‌ಸಂಗ್‌ ವೆಬ್‌ಸೈಟ್‌‌‌ ಪ್ರಕಟಿಸಿದೆ.

61x106x11 ಮಿ.ಮೀಟರ್‌ ಗಾತ್ರದ 105 ಗ್ರಾಂ ತೂಕದ ಸ್ಮಾರ್ಟ್‌ಫೋನ್‌ ಇದಾಗಿದ್ದು ಆಂಡ್ರಾಯ್ಡ್  4.1 ಜೆಲ್ಲಿ ಬೀನ್ ಓಎಸ್‌ನ್ನು ಫೋನ್‌ ಒಳಗೊಂಡಿದೆ.4GB ಆಂತರಿಕ ಮೆಮೊರಿ,512MB RAM,2 ಎಂಪಿ ಹಿಂದುಗಡೆ ಕ್ಯಾಮೆರಾವನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ. ಆದರೆ ಮುಂದುಗಡೆ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿಲ್ಲ. ಈ ಸ್ಮಾರ್ಟ್‌‌ಫೋನ್‌ ವಿಶೇಷತೆಯನ್ನು ಮಾತ್ರ ವೆಬ್‌ಸೈಟ್‌‌ ಪ್ರಕಟಿಸಿದ್ದು ಸ್ಮಾರ್ಟ್‌ಫೋನಿನ ಬೆಲೆಯನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: ಕಡಿಮೆ ಬೆಲೆಯ ಸ್ಯಾಮ್‌ಸಂಗ್‌ ಡ್ಯುಯಲ್,ಕ್ವಾಡ್‌ ಕೋರ್‍ ಸ್ಮಾರ್ಟ್‌ಫೋನ್‌ಗಳು

 ಸ್ಯಾಮ್‌ಸಂಗ್‌ ಬಿಡುಗಡೆ ಮಾಡಲಿದೆ ಮೂರು ಸಿಮ್‌ ಸ್ಮಾರ್ಟ್‌ಫೋನ್‌‌‌

ಗೆಲಾಕ್ಸಿ ಸ್ಟಾರ್‌ ಟ್ರೈಸ್‌‌
ವಿಶೇಷತೆ:
3.1 ಇಂಚಿನ ಟಿಎಫ್‌ಟಿ ಸ್ಕ್ರೀನ್‌(320 x 240 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಓಎಸ್‌
1 GHz ಪ್ರೊಸೆಸರ್‌
4GB ಆಂತರಿಕ ಮೆಮೊರಿ
512MB RAM.
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ಕ್ಯಾಮೆರಾ ಇಲ್ಲ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌
1300 mAh ಬ್ಯಾಟರಿ

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot