ಸ್ಮಾರ್ಟ್‌‌ಫೋನ್‌ ಮಾರಾಟದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಸ್ಯಾಮ್‌ಸಂಗ್‌

By Ashwath
|

ಕಳೆದ ವರ್ಷ‌ ನೂರು ಕೋಟಿಗೂ ಅಧಿಕ ಸ್ಮಾರ್ಟ್‌‌ಫೋನ್‌‌ಗಳು ವಿಶ್ವದ ಮಾರುಕಟ್ಟೆಯಲ್ಲಿ ಮಾರಾಟವಾಗಿದ್ದು,2012ಕ್ಕೆ ಹೋಲಿಸಿದ್ದಲ್ಲಿ ಶೇ.38.4 ರಷ್ಟು ಹೆಚ್ಚಿನ ಮಾರಾಟವಾಗಿದೆ ಎಂದು ಐಡಿಸಿ(International Data Corporation) ತನ್ನ ವರದಿಯಲ್ಲಿ ಹೇಳಿದೆ.

2012 ರಲ್ಲಿ 725.3 ದಶಲಕ್ಷ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದರೆ, ಕಳೆದ ವರ್ಷ‌ 1,004.2 ದಶಲಕ್ಷ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದು ಸ್ಯಾಮ್‌ಸಂಗ್‌ 313.9 ದಶಲಕ್ಷ ಸ್ಮಾರ್ಟ್‌‌‌‌‌ಫೋನ್‌ ಮಾರಾಟ ಮಾಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸ್ಮಾರ್ಟ್‌ಫೋನ್‌ ಮಾರಾಟ ಕಂಪೆನಿಯ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ

ವಿಶ್ವದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಶೇ.31.3ರಷ್ಟು ಪಾಲನ್ನು ಹೊಂದಿದ್ದು ಆಪಲ್‌‌ ಎರಡನೇ ಸ್ಥಾನಪಡೆದಿದೆ. 2012 ರಲ್ಲಿ ಆಪಲ್‌ ಮಾರುಕಟ್ಟೆಯಲ್ಲಿ ಶೇ.18.7ರಷ್ಟು ಪಾಲನ್ನು ಹೊಂದಿದ್ದರೆ,ಕಳೆದ ವರ್ಷ‌ 153.4 ದಶಲಕ್ಷ ಐಫೋನ್‌ ಮಾರಾಟ ಮಾಡುವ ಮೂಲಕ ಶೇ.15.3ರಷ್ಟು ಪಾಲನ್ನು ಗಳಿಸಿಕೊಂಡಿದೆ. ಐಫೋನ್‌ ಮಾರಾಟದಲ್ಲಿ ಇಳಿಕೆಯಾಗಿದ್ದರೂ ಆಪಲ್‌‌ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹುವಾವೇ,ಎಲ್‌ಜಿ,ಲೆನೊವೊ ಕಂಪೆನಿಗಳು ಪಟ್ಟಿಯಲ್ಲಿ ಕ್ರಮವಾಗಿ ಮೂರು,ನಾಲ್ಕು,ಐದನೇಯ ಸ್ಥಾನವನ್ನು ಗಳಿಸಿದೆ ಸ್ಯಾಮ್‌ಸಂಗ್‌ನ ಸ್ಮಾರ್ಟ್‌‌ಫೋನ್‌ಗಳಲ್ಲಿ ಗೆಲಾಕ್ಸಿ ಎಸ್‌‌3 , ಗೆಲಾಕ್ಸಿ ಎಸ್‌4,ನೋಟ್‌ ಸರಣಿಯ ಸ್ಮಾರ್ಟ್‌‌ಫೋನ್‌ಗಳು ಹೆಚ್ಚಾಗಿ ಮಾರಾಟವಾಗಿದ್ದರೆ,ಐಪಲ್‌ನ ಐಫೋನ್‌ 5ಎಸ್,ಐಫೋನ್‌ 5 ಸಿ ಸ್ಮಾರ್ಟ್‌ಫೋನ್‌ ಹೆಚ್ಚಾಗಿ ಮಾರಾಟವಾಗಿದೆ ಎಂದು ಐಡಿಸಿ ತನ್ನ ವರದಿಯಲ್ಲಿ ಪ್ರಕಟಿಸಿದೆ.

ಮುಂದಿನ ಪುಟದಲ್ಲಿ ಐಡಿಸಿ ಬಿಡುಗಡೆ ಮಾಡಿದ ಹೊಸ ವರದಿ ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

1

1


ಮಾಹಿತಿ :ಐಡಿಸಿ ವರದಿ

2

2


ಮಾಹಿತಿ :ಐಡಿಸಿ ವರದಿ

3

3


ಮಾಹಿತಿ :ಐಡಿಸಿ ವರದಿ

4

4


ಮಾಹಿತಿ :ಐಡಿಸಿ ವರದಿ

5

5


ಮಾಹಿತಿ:ಐಡಿಸಿ ವರದಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X