ಒಂದೇ ಏಟಿಗೆ ಶಿಯೋಮಿ ಮಣಿಸಲು ಸ್ಯಾಮ್‌ಸಂಗ್ ಬಿಟ್ಟ ಹೊಸ ಫೋನ್....!
ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ತನ್ನ ಸ್ಥಾನವನ್ನು ಮೀಸ್ ಮಾಡಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಶಿಯೋಮಿಯನ್ನು ಹೆಣೆಯುವ ಸಲುವಾಗಿ ಹೊಸದೊಂದು ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈಗಾಗಲೇ ಪ್ರಯೋಗ ಎನ್ನುವಂತೆ ಕೋರಿಯಾದಲ್ಲಿ ಗ್ಯಾಲೆಕ್ಸಿ ವೈಡ್ 3 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಶೀಘ್ರವೇ ಇದು ನಮ್ಮ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಓದಿರಿ: ರೂ.10,500 ನೀಡಿ ಐಫೋನ್ 8 ತೆಗೆದುಕೊಂಡು ಹೋಗಿ: ಏರ್‌ಟೆಲ್ ಕೊಟ್ಟ ಹೊಸ ಆಫರ್..!
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ವೈಡ್ 3 ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ನಲ್ಲಿ ದೊರೆಯಲಿದ್ದು, ಮಾರುಕಟ್ಟೆಯಲ್ಲಿ ಹೊಸದೊಂದು ಅಲೆಯನ್ನು ಹುಟ್ಟಿಹಾಕಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಟಾಪ್ ಎಂಡ್ ಫೀಚರ್ ಗಳನ್ನು ಹೊಂದಿದ್ದರು ಸಹ ಬಜೆಟ್ ಬೆಲೆಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಭಾರತ ಮಾತ್ರವಲ್ಲದೇ ಬೇರೆ ಎಲ್ಲಾ ದೇಶಗಳಲ್ಲಿಯೂ ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಎಲ್ಲಾ ಮಾರುಕಟ್ಟೆಯಲ್ಲಿಯೂ ಈ ಸ್ಮಾರ್ಟ್‌ಫೋನ್ ರಾರಾಜಿಸಲಿದೆ.

ಅಮೊಲೈಡ್ ಡಿಸ್‌ಪ್ಲೇ:
ಸ್ಯಾಮ್‌ಸಂಗ್ ಗ್ಯಾಲೆಕ್ಸಿ ವೈಡ್ 3 ಸ್ಮಾರ್ಟ್‌ಫೋನ್ 5.5 ಸೂಪರ್ ಅಮೊಲೈಡ್ HD ಡಿಸ್‌ಪ್ಲೇಯನ್ನು ಹೊಂದಿರಲಿದೆ. ಆದರೆ ಇದು 16:9 ಅನುಪಾತದಾಗಿದೆ. ಇದು ಉತ್ತಮ ವೀಡಿಯೊಗಳನ್ನು ನೋಡಲು ಹೇಳಿಸಿದಂತೆ ಇದೆ ಎನ್ನಲಾಗಿದೆ.


400GB ಮೆಮೊರಿ ಕಾರ್ಡ್:
ಇದಲ್ಲದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ವೈಡ್ 3 ಸ್ಮಾರ್ಟ್‌ಫೋನಿನಲ್ಲಿ 2GB RAM ಕಾಣಬಹುದಾಗಿದೆ. 1.6GHz ವೇಗದ ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಅಲ್ಲದೇ ಇದರಲ್ಲಿ 16 GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಮೆಮೊರಿ ಕಾರ್ಡ್ ಮೂಲಕ 400GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಉತ್ತಮ ಕ್ಯಾಮೆರಾ:
ಇದಲ್ಲದೇ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ವೈಡ್ 3 ಸ್ಮಾರ್ಟ್‌ಫೋನಿನಲ್ಲಿ ಹಿಂಭಾಗ ಮತ್ತು ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದಲ್ಲದೇ ಈ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಉತ್ತಮ ಫೋಟೊಗಳನ್ನು ಕ್ಲಿಕಿಸಬಹುದಾಗಿದೆ.

ಆಂಡ್ರಾಯ್ಡ್ ಓರಿಯೊ:
ಇದಲ್ಲದೇ ಆಂಡ್ರಾಯ್ಡ್ ಓರಿಯಾದಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ 3300mAh ಬ್ಯಾಟರಿಯನ್ನು ಕಾಣಬಹುದಾಗಿದೆ. ಉತ್ತಮವಾದ ಪ್ಯಾಕಪ್ ಅನ್ನು ಇದು ನೀಡಲಿದೆ. ಇದಲ್ಲದೇ ಉತ್ತಮ ಫೀಚರ್ ಗಳನ್ನು ಹೊಂದಿರಲಿದೆ.


Click it and Unblock the Notifications








