ಡ್ಯುಯಲ್‌ ಸಿಮ್‌ ಗೆಲಾಕ್ಸಿ ಎಸ್‌5 ಬಿಡುಗಡೆ

Posted By:

ಅಚ್ಚರಿಯ ಬೆಳವಣಿಗೆಯಲ್ಲಿ ಸ್ಯಾಮ್‌ಸಂಗ್‌ ತನ್ನ ಈ ವರ್ಷದ ದುಬಾರಿ ಬೆಲೆಯ ಗೆಲಾಕ್ಸಿ ಎಸ್‌5 ಸ್ಮಾರ್ಟ್‌ಫೋನ್‌‌ನ್ನು ಡ್ಯುಯಲ್‌ ಸಿಮ್‌ ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಚೀನಾ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ್ದು, 5,299 ಯೂಆನ್(ಅಂದಾಜು 51000) ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ. ಈ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾತ್ರ ಮಾಡಿದ್ದು ಏಪ್ರಿಲ್‌ 11ರಿಂದ ಚೀನಾದ ರಿಟೇಲ್‌ ಸ್ಟೋರ್‌ಮತ್ತು ಆನ್‌ಲೈನ್‌ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

ಡ್ಯುಯಲ್‌ ಸಿಮ್‌ ಸ್ಲಾಟ್‌ ಬಿಟ್ಟರೆ ಸಿಂಗಲ್‌ ಸಿಮ್‌ ಗೆಲಾಕ್ಸಿ ಎಸ್‌5 ಸ್ಮಾರ್ಟ್‌ಫೋನ್‌ಲ್ಲಿರುವ ಎಲ್ಲಾ ವಿಶೇಷತೆಗಳು ಈ ಸ್ಮಾರ್ಟ್‌‌ಫೋನಲ್ಲಿದೆ.ಚೀನಾದಲ್ಲಿ ಮಾತ್ರ ಡ್ಯುಯಲ್‌ ಸಿಮ್‌ ಹಾಕಬಹುದಾದ ಗೆಲಾಕ್ಸಿ ಎಸ್‌5 ಬಿಡುಗಡೆ ಮಾಡಿದ್ದು ಬೇರೆ ದೇಶದಲ್ಲಿ ಈ ಸ್ಮಾರ್ಟ್‌‌ಫೋನ್‌ ಬಿಡುಗಡೆ ಮಾಡುವ ಬಗ್ಗೆ ಸ್ಯಾಮ್‌ಸಂಗ್‌ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಡ್ಯುಯಲ್‌ ಸಿಮ್‌ ಗೆಲಾಕ್ಸಿ ಎಸ್‌5 ಬಿಡುಗಡೆ

ಸ್ಯಾಮ್‌ಸಂಗ್ ಇದುವರೆಗೂ ದುಬಾರಿ ಬೆಲೆಯಲ್ಲಿ ಯಾವುದೇ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಿರಲಿಲ್ಲ. ಕಳೆದ ವರ್ಷ ಗೆಲಾಕ್ಸಿ ಎಸ್‌4 ಬಿಡುಗಡೆ ಮಾಡಿತ್ತು. ಆದರೆ ಇದರಲ್ಲಿ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರಲಿಲ್ಲ. ಗೆಲಾಕ್ಸಿ ಎಸ್‌4 ಮಿನಿ ಹೆಸರಿನಲ್ಲಿ ಸ್ಯಾಮ್‌ಸಂಗ್‌ ಡ್ಯುಯಲ್‌ ಸಿಮ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿತ್ತು. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ದುಬಾರಿ ಬೆಲೆಯ ಸ್ಮಾರ್ಟ್‌‌ಫೋನ್‌ ಗೆಲಾಕ್ಸಿ ಗ್ರ್ಯಾಂಡ್2 ಆಗಿದ್ದು 22,999 ರೂಪಾಯಿ ಬೆಲೆಯಲ್ಲಿ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಸದ್ಯ ಈ ಸ್ಮಾರ್ಟ್‌ಫೋನ್‌ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ 21099 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಇದನ್ನೂ ಓದಿ: ಟಾಪ್‌ ಕಿಟ್‌ಕ್ಯಾಟ್‌ ಓಎಸ್‌ ಸ್ಮಾರ್ಟ್‌ಫೋನ್‌ಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot