Home
ಮೊಬೈಲ್

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s ಮತ್ತು ಗ್ಯಾಲಕ್ಸಿ M31: ಖರೀದಿಗೆ ಯಾವುದು ಬೆಸ್ಟ್?

ದಕ್ಷಿಣ ಕೊರೊಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿದೆ. ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿರುವ ಜೊತೆಗೆ ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಹೊಂದಿದೆ. ಅಂದಹಾಗೇ ಈ ಹೊಸ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ M31 ಫೋನಿನ ಹೋಲಿಕೆಯಂತೆ ಕಂಡರು ಹಲವು ಭಿನ್ನತೆಗಳನ್ನು ಪಡೆದಿದೆ.

ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಸಂಸ್ಥೆಯ ಹೊಸ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಈ ಹಿಂದಿನ ಗ್ಯಾಲಕ್ಸಿ M31 ಫೋನಿಯ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡಿದೆ. ಏಕೆಂದರೇ ಗ್ಯಾಲಕ್ಸಿ M31s ಫೋನ್ ಕೆಲವು ಫೀಚರ್ಸ್‌ಗಳಲ್ಲಿ ಅಪ್‌ಡೇಟ್ ಆಗಿದ್ದು, ಜಬರ್ದಸ್ತ್ ಲುಕ್ನಲ್ಲಿ ಕಾಣಿಸಿಕೊಂಡಿದೆ. ಮುಖ್ಯವಾಗಿ 64ಎಂಪಿಯ ಮೇನ್‌ ಕ್ಯಾಮೆರಾ ಹಾಗೂ 6,000mAh ಬ್ಯಾಟರಿ ಪವರ್‌ ಪ್ಲಸ್‌ ಪಾಯಿಂಟ್‌ಗಳಾಗಿವೆ. ಹಾಗಾದರೇ ಗ್ಯಾಲಕ್ಸಿ ಗ್ಯಾಲಕ್ಸಿ M31s ಮತ್ತು ಗ್ಯಾಲಕ್ಸಿ M31 ನಡುವಿನ ಭಿನ್ನತೆಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಬೆಲೆ ಎಷ್ಟು

ಬೆಲೆ ಎಷ್ಟು

ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 6GB RAM ಮತ್ತು 128GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಬೆಲೆಯು 19,499 ರೂ. ಆಗಿದೆ. ಹಾಗೆಯೇ 8GB RAM ಮತ್ತು 128GB ವೇರಿಯಂಟ್ ಬೆಲೆಯು 21,499ರೂ.ಗಳು ಆಗಿದೆ. ಅದೇ ಗ್ಯಾಲಕ್ಸಿ M31 ಫೋನ್‌ 6GB RAM/64GB ವೇರಿಯಂಟ್ ಬೆಲೆಯು 17,499ರೂ, 6GB RAM/128GB ವೇರಿಯಂಟ್ ಪ್ರೈಸ್‌ 18,499ರೂ. ಆಗಿದೆ.

ಡಿಸ್‌ಪ್ಲೇ ಡಿಸೈನ್

ಡಿಸ್‌ಪ್ಲೇ ಡಿಸೈನ್

ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.5 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಜೊತೆಗೆ sAMOLED ಡಿಸ್‌ಪ್ಲೇ ಹೊಂದಿದೆ. ಇನ್ನು ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಇನ್‌ಫಿನಿಟಿ U ಡಿಸ್‌ಪ್ಲೇ ಹೊಂದಿದೆ. ಈ ಎರಡು ಫೋನ್‌ಗಳ ಡಿಸ್‌ಪ್ಲೇ ಅನುಪಾತವು 19.5:9 ಆಗಿದೆ.

ಪ್ರೊಸೆಸರ್‌ ಕಾರ್ಯ ದಕ್ಷತೆ

ಪ್ರೊಸೆಸರ್‌ ಕಾರ್ಯ ದಕ್ಷತೆ

ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ exynos 9611 SoC ಪ್ರೊಸೆಸರ್‌ ಹೊಂದಿದ್ದು, 6GB RAM ಮತ್ತು 128GB ಸ್ಟೋರೇಜ್ ಮತ್ತು 8GB RAM ಮತ್ತು 128GB ಸಾಮರ್ಥ್ಯ ಸ್ಟೋರೇಜ್ ಆಯ್ಕೆಗಳನ್ನು ಪಡೆದಿದೆ. ಇನ್ನು ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ್‌ ಸಹ exynos 9611 SoC ಪ್ರೊಸೆಸರ್‌ ಹೊಂದಿದ್ದು, 6GB RAM ಮತ್ತು 64GB ಮತ್ತು 6GB RAM ಮತ್ತು 128GB ಸ್ಟೋರೇಜ್‌ನ ಆಯ್ಕೆ ಪಡೆದಿದೆ. ಈ ಎರಡು ಫೋನ್‌ಗಳು ಆಂಡ್ರಾಯ್ಡ್‌10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ ಸೆನ್ಸಾರ್

ಕ್ಯಾಮೆರಾ ಸೆನ್ಸಾರ್

ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದೆ. ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್, ಸೆಕೆಂಡರಿ ಕ್ಯಾಮೆರಾವು 12ಎಂಪಿ ಸೆನ್ಸಾರ್, ಇನ್ನು ತೃತೀಯ ಹಾಗೂ ನಾಲ್ಕನೇ ಕ್ಯಾಮೆರಾವು ಕ್ರಮವಾಗಿ 5ಎಂಪಿ ಸೆನ್ಸಾರ್ ಬಲವನ್ನು ಪಡೆದಿವೆ. ಇನ್ನು ಗ್ಯಾಲಕ್ಸಿ M31 ಸಹ ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದ್ದು, ಕ್ರಮವಾಗಿ 64ಎಂಪಿ+8ಎಂಪಿ+5ಎಂಪಿ+5ಎಂಪಿ ಸೆನ್ಸಾರ್‌ನಲ್ಲಿವೆ. ಎರಡು ಫೋನ್‌ಗಳಲ್ಲಿ ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ನಲ್ಲಿದೆ.

ಬ್ಯಾಟರಿ ಪವರ್

ಬ್ಯಾಟರಿ ಪವರ್

ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಇನ್ನು ಗ್ಯಾಲಕ್ಸಿ M31 ಸ್ಮಾರ್ಟ್‌ಫೋನ ಸಹ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಇದರೊಟ್ಟಿಗೆ 15W ವೇಗದ ಚಾರ್ಜಿಂಗ್‌ಅನ್ನು ಬೆಂಬಲಿಸಲಿದೆ. ಎರಡು ಫೋನ್‌ಗಳು 6,000mAh ಬ್ಯಾಟರಿ ಪವರ್ ಪಡೆದಿವೆ ಆದರೆ ಚಾರ್ಜಿಂಗ್ ಬಲದಲ್ಲಿ ಭಿನ್ನತೆ ಇದೆ.

ಕೊನೆಯ ಮಾತು

ಕೊನೆಯ ಮಾತು

ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಹೊಸ M31s ಸ್ಮಾರ್ಟ್‌ಫೋನ್‌ 20000ರೂ ಪ್ರೈಸ್‌ಟ್ಯಾಗ್‌ನಲ್ಲಿ ಒಂದು ಉತ್ತಮ ಫೋನ್‌ ಆಗಿದೆ. ಗ್ಯಾಲಕ್ಸಿ M31 ಫೋನಿನ ಮುಂದುವರಿದ ಭಾಗವಾಗಿ ಕಾಣಿಸಿಕೊಂಡಿದ್ದು, ಕೆಲವು ಫೀಚರ್ಸ್‌ಗಳಲ್ಲಿ ಅಪ್‌ಡೇಟ್ ಆಗಿದೆ. ಹೀಗಾಗಿ ಗ್ಯಾಲಕ್ಸಿ M31 ಫೋನ್‌ ಖರೀದಿಸುವವರು ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ನತ್ತ ಮನಸು ಮಾಡಬಹುದು.

Best Mobiles in India

English summary
Samsung M31 looks like Galaxy M31s phone. But Difference in Specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+