Subscribe to Gizbot

ಹಳೇ ಸ್ಮಾರ್ಟ್‌ಫೋನ್ ನೀಡಿ,ಹೊಸ ಸ್ಯಾಮ್‌ಸಂಗ್‌ ಫ್ಯಾಬ್ಲೆಟ್‌ ಖರೀದಿಸಿ

Posted By:

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2 ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಒಂದು ಗುಡ್‌ ನ್ಯೂಸ್‌. ಗೆಲಾಕ್ಸಿ ನೋಟ್‌ 2 ಮೇಲೆ ಸ್ಯಾಮ್‌ಸಂಗ್‌ ಹೊಸ ಆಫರ್‌ ಪ್ರಕಟಿಸಿದೆ. ನೀವು ಬಳಸುತ್ತಿರುವ ಫೋನ್ ನೀಡಿ ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2 ಖರೀದಿಸಬಹುದು.

ಸದ್ಯ ಗೆಲಾಕ್ಸಿ ನೋಟ್‌ 2 ಮಾರುಕಟ್ಟೆ ಬೆಲೆ 37,500 ರೂ. ಇದೆ. ಆದರೆ ನೀವು ಆಫರ್‌ನಲ್ಲಿ 10 ಸಾವಿರ ರೂ. ಡಿಸ್ಕೌಂಟ್‌ನಲ್ಲಿ ಈ ಫ್ಯಾಬ್ಲೆಟ್‌ನ್ನು ಸ್ಯಾಮ್‌ಸಂಗ್‌ ಇಸ್ಟೋರ್‌ನಲ್ಲಿ ಖರೀದಿಸಬಹುದು. ಅಷ್ಟೇ ಅಲ್ಲದೇ 6 ಇಎಂಐಯಲ್ಲೂ ಇದನ್ನು ಖರೀದಿಸಬಹುದು. ಜೂನ್‌ 30ವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ ಎಂದು ಇಸ್ಟೋರ್‌ನಲ್ಲಿ ಸ್ಯಾಮ್‌ಸಂಗ್‌ ಪ್ರಕಟಿಸಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 2 ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

 ಹಳೇ ಸ್ಮಾರ್ಟ್‌ಫೋನ್ ನೀಡಿ,ಹೊಸ ಸ್ಯಾಮ್‌ಸಂಗ್‌ ಫ್ಯಾಬ್ಲೆಟ್‌ ಖರೀದಿಸಿ

ಈ ಯೋಜನೆಯಲ್ಲಿ 5 ಸಾವಿರ ರೂ ಸ್ಯಾಮ್‌ಸಂಗ್‌ ಈ ಸ್ಟೋರ್‌ ಆಫರ್‌ ಪ್ರಕಟಿಸಿದ್ರೆ, ಉಳಿದ ಐದು ಸಾವಿರ ರೂ ಈಗ ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್‌ ಆಫರ್‌ ಅನ್ವಯವಾಗುತ್ತದೆ. ಈ ಹಿಂದೆ ಆಪಲ್‌ ತನ್ನ ಐಫೋನ್‌ಗೆ ಇದೇ ರೀತಿಯ ಆಫರ್‍ ಪ್ರಕಟಿಸಿತ್ತು. ಈ ಆಪಲ್‌ ಆಫರ್‌ನಲ್ಲಿ ಎಲ್ಲಾ ರಿಟೇಲ್‌ ಅಂಗಡಿಯಲ್ಲಿ ನೀವು ಹಳೇ ಫೋನ್‌ ನೀಡಿ ಖರೀದಿಸಬಹುದಿತ್ತು. ಆದರೆ ಇಲ್ಲಿ ಸ್ಯಾಮ್‌ಸಂಗ್‌ ಇಸ್ಟೋರ್‌ನಲ್ಲಿ ಯಾರು ಖರೀದಿಸುತ್ತಾರೋ ಅವರಿಗೆ ಮಾತ್ರ ಆಫರ್‌ ಅನ್ವಯವಾಗಲಿದೆ.

ಈ ಆಫರ್‌ ಯಾವ ಮೊಬೈಲ್‌ಗಳಿಗೆ ಅನ್ವಯವಾಗುತ್ತದೆ ಮತ್ತು ಇದನ್ನು ಹೇಗೆ ಖರೀದಿಸಬೇಕು ಎನ್ನುವ ಮಾಹಿತಿಗಾಗಿ ಇಲ್ಲಿ ಭೇಟಿ ನೀಡಿ: ಸ್ಯಾಮ್‌ಸಂಗ್‌ ಇ ಸ್ಟೋರ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot