Just In
Don't Miss
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Movies
Super Queen:ರಜಿನಿಯ ಕಲ್ಪನಾ ಪರ್ಫಾಮೆನ್ಸ್ಗೆ ಫುಲ್ ಫಿದಾ : ರಿಪ್ಲೆ ಮಾಡೋಕಾಗದೆ ನಟಿ ಸುಸ್ತು..!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಇಲ್ಲಿವೆ ಬಹುಶಃ ನಿಮಗೆ ಗೊತ್ತಿರದ 9 ಸ್ಮಾರ್ಟ್‍ಫೋನ್ ಸೆನ್ಸರ್ಸ್
ಸ್ಮಾರ್ಟ್‍ಫೋನ್ ಇತ್ತೀಚಿನ ದಿನಗಳಲ್ಲಿ ಆಗಿರುವ ಕ್ರಾಂತಿ, ಎಲ್ಲಾ ವಯಸ್ಸಿನ ಜನರು ಸ್ಮಾರ್ಟ್‍ಫೋನ್ ಉಪಯೋಗಿಸುತ್ತಿದ್ದಾರೆ. ನಾವು 3 ವರ್ಷದ ಚಿಕ್ಕ ಮಗುವಿನಿಂದ ಹಿಡಿದು 100 ವರ್ಷದ ಮನುಷ್ಯನ ತನಕ ಸ್ಮಾರ್ಟ್‍ಫೋನ್ ಉಪಯೋಗಿಸುವವರನ್ನು ಕಾಣುತ್ತೇವೆ, ಇದಕ್ಕೆ ಕಾರಣ ಅದು ಅಷ್ಟೊಂದು ಪ್ರಯೋಜನಕಾರಿಯಾಗಿದೆ.

ಓದಿರಿ: ಮೊಬೈಲ್ ನಂಬರ್‌ಗಳು ನೆನಪಾಗದಿರಲು ಕಾರಣ ಏನು ಗೊತ್ತೇ?
ಕಳೆದ ಎರಡು ಮೂರು ವರ್ಷಗಳಲ್ಲಿ ಹೇಗೆ ಸ್ಮಾರ್ಟ್‍ಫೋನ್ಸ್ ತಡೆಹಿಡಿಯಲಾಗದ ಶಕ್ತಿಯಾಗಿದೆ ?ಹೇಗೆಂದರೆ ಕಂಪನಿಗಳು ಸ್ಮಾರ್ಟ್‍ಫೋನ್ ನಿನ ಉಪಯುಕ್ತತೆಯನ್ನು ಸುಧಾರಣೆಗೊಳಿಸಿದ್ದಾರೆ ಬಹಳಷ್ಟು ಸೆನ್ಸರ್ಸ್ ಗಳನ್ನು ಸೇರಿಸಿ. ಇಲ್ಲಿಯವರೆಗೆ, ಸ್ಮಾರ್ಟ್‍ಫೋನ್ ಗಳು 9 ಸೆನ್ಸರ್ಸ್ ನೊಂದಿಗೆ ಬಿಡುಗಡೆಗೊಂಡಿವೆ, ಕೆಲವೊಂದರಲ್ಲಿ ಕೆಲವು ಇರಬಹುದು ಕೆಲವು ಇರಲಿಕ್ಕಿಲ್ಲಾ, ಹೈ-ಎಂಡ್ ಫೋನ್‍ಗಳಲ್ಲಿ ಖಂಡಿತ ಎಲ್ಲಾ ಸೆನ್ಸರ್ಸ್ ಇರಲಿಕ್ಕಿದೆ. ಇಲ್ಲಿವರೆಗೆ ಫೋನ್‍ಗಳಲ್ಲಿ ಉಪಯೋಗಿಸಲ್ಪಟ್ಟ ಸೆನ್ಸರ್ ಗಳ ಪಟ್ಟಿ ಇಲ್ಲಿದೆ.

ಎಕ್ಸೆಲೆರೊಮೀಟರ್
ಪಟ್ಟಿಯಲ್ಲಿ ಮೊದಲನೆಯದು ಎಕ್ಸೆಲೆರೊಮೀಟರ್, ಇದು ನಿಮ್ಮ ಫೋನಿನ ಚಲಿಸುವಿಕೆಯನ್ನು ಕಂಡುಹಿಡಿಯುತ್ತದೆ. ಫೋನ್ ತಯಾರಕರು ಈ ಸೆನ್ಸರ್ ಅನ್ನು ಸ್ಮಾರ್ಟ್‍ಫೋನ್ ಚಲಿಸಿದೊಡನೆ ಸ್ಕ್ರೀನ್ ಚಾಲ್ತಿ ಆಗುವುದು ಇತ್ಯಾದಿ, ಹೀಗೆ ವಿವಿಧ ಉದ್ದೇಶ ಗಳಿಗಾಗಿ ಬಳಸುತ್ತಿದ್ದಾರೆ. ಈ ಸೆನ್ಸರ್ ಸ್ಕ್ರೀನ್ ಒರಿಯೆಂಟೆಷನ್ ಗೆ ಕೂಡ ಜವಾಬ್ದಾರಿಯಾಗಿದೆ ಮತ್ತು ಪೊರ್ಟೆಟ್ ಅಥವಾ ಲ್ಯಾಂಡ್‍ಸ್ಕೇಪ್ ನಲ್ಲಿದ್ದಾಗ ಸ್ಕ್ರೀನ್ ಒರಿಯೆಂಟೆಷನ್ ಕಂಡು ಹಿಡಿಯುವಲ್ಲಿ ಆಪ್ಸ್ ಗಳಿಗೆ ಸಹಾಯ ಮಾಡುತ್ತದೆ.

ಲೈಟ್ ಸೆನ್ಸರ್
ಈ ಸೆನ್ಸರ್ ಫೋನ್ ನಲ್ಲಿನ ‘ಆಟೊ ಬ್ರೈಟ್‍ನೆಸ್' ಸೆಟ್ಟಿಂಗ್ ನ ಜವಾಬ್ದಾರಿ ಹೊಂದಿದೆ, ಲೈಟ್ ಗೆ ಅನುಗುಣವಾಗಿ ಡಿಸ್ಪ್ಲೆ ಬ್ರೈಟ್‍ನೆಸ್ ಸೆಟ್ ಆಗುತ್ತದೆ.

ಪ್ರೊಕ್ಸಿಮಿಟಿ ಸೆನ್ಸರ್
ಫೋನ್‍ಗಳಲ್ಲಿ ಹೆಚ್ಚು ಉಪಯೋಗಿಸಲ್ಪಡುತ್ತಿರುವ ಸೆನ್ಸರ್ ಇದು. ಕಾಲ್ ನಲ್ಲಿ ಇದ್ದಾಗ ಈ ಸೆನ್ಸರ್ ಆಫ್ ಆಗುತ್ತದೆ, ಇದು ನಿಜಕ್ಕೂ ಒಳ್ಳೆಯ ಫೀಚರ್ ಯಾಕೆಂದರೆ ಬಹಳಷ್ಟು ಜನ ಆಶ್ಚರ್ಯ ಪಡುತ್ತಾರೆ ಯಾಕೆ ಅವರ ಕಾಲ್ಸ್ ಯಾವಾಗಲೂ ಡಿಸ್‍ಕನೆಕ್ಟ್ ಆಗುತ್ತದೆ ಎಂದು. ಈ ಸಮಸ್ಯೆಯನ್ನು ಬಗೆಹರಿಸುತ್ತದೆ ಈ ಸೆನ್ಸರ್. ಇತ್ತೀಚೆಗೆ ಸ್ಮಾರ್ಟ್‍ಫೋನ್ ಕಂಪನಿಯೊಂದು ಈ ಸೆನ್ಸರ್ ಗೆ ಇನ್ನಷ್ಟು ಫಂಕ್ಷನಾಲಿಟಿ ಸೇರಿಸಿದೆ. ಉದಾ: ನಿಮ್ಮ ಕೈ ಯನ್ನು ಸೆನ್ಸರ್ ಮೇಲೆ ಆಡಿಸಿದಾಗ ಸೆನ್ಸರ್ ಫೋನನ್ನು ಆಕ್ಟಿವ್ ಮಾಡುತ್ತದೆ ಅದಕ್ಕೆ ‘ಆಂಬಿಯೆಂಟ್ ಡಿಸ್ಪ್ಲೆ' ಎನ್ನುವರು. ಈ ಸೆನ್ಸರ್ ಹೆಚ್ಚಾಗಿ ಫ್ರಂಟ್ ಫೇಸಿಂಗ್ ಕ್ಯಾಮೆರಾ ಪಕ್ಕದಲ್ಲಿ ಸಿಗುತ್ತದೆ ಮತ್ತು ಕಾಲ್ ನಲ್ಲಿ ಇರುವಾಗ ನೀವು ರೆಡ್ ಲೈಟ್ ಬೆಳಗುವುದನ್ನು ಕಾಣಬಹುದು ಅದೇ ಸೆನ್ಸರ್.

ಮ್ಯಾಗ್ನೆಟೊಮೀಟರ್
ಇದು ಫೋನಿನ ಮ್ಯಾಗ್ನೆಟಿಕ್ ಫೀಲ್ಡ್ ಕಂಡುಹಿಡಿದು ಉತ್ತರ ದಿಕ್ಕನ್ನು ತೋರಿಸು ಸಹಾಯ ಮಾಡುತ್ತದೆ. ಇದು ನಿಮಗೆ ಒರಿಯೆಂಟೆಷನ್ ಹುಡುಕಲು ಸಹಾಯ ಮಾಡುತ್ತದೆ ನ್ಯಾವಿಗೇಷನ್ ನಲ್ಲಿ ಇರುವಾಗ ಮತ್ತು ನಿಮ್ಮ ದಿಕ್ಕನ್ನು ಹುಡುಕಲು ಸಹಾಯ ಮಾಡುತ್ತದೆ. ನ್ಯಾವಿಗೇಷನ್ ಆಪ್ಸ್ ಗೂಗಲ್ ಮಾಪ್ಸ್, ಹಿಯರ್ ಮಾಪ್ಸ್ ಇತ್ಯಾದಿ ಗಳು ಕೆಲಸ ಮಾಡುತ್ತವೆ ಈ ಸೆನ್ಸರ್ ಉಪಯೋಗಿಸಿ ಮತ್ತು ನಿಮ್ಮ ಫೋನಿನ ಜಿಪಿಎಸ್ ಲೊಕ್ ಮಾಡಲು ಸಹಾಯ ಮಾಡುತ್ತದೆ.

ಗೈರೊಸ್ಕೊಪ್
ಇದಕ್ಕೆ ಇನ್ನೊಂದು ಅರ್ಥದಲ್ಲಿ ಎಕ್ಸೆಲೆರೊಮೀಟರ್ ಎಂದೆನ್ನಬಹುದು ಏಕೆಂದರೆ ಇದೆರಡರ ಕೆಲಸ ಒಂದೇ ಆದರೆ ಇದರ ಫಲಿತಾಂಶ ದಲ್ಲಿ ಹೆಚ್ಚು ಖಚಿತ.

ಹಾರ್ಟ್ ರೇಟ್ ಸೆನ್ಸರ್ಸ್
ಇದನ್ನು ನೀವು ಸಾಮಾನ್ಯವಾಗಿ ಸ್ಮಾರ್ಟ್‍ಬ್ಯಾಂಡ್ಸ್ ಅಥವಾ ಸ್ಮಾರ್ಟ್‍ವಾಚಸ್ ನಲ್ಲಿ ಕಾಣಬಹುದು. ಆದರೆ ಈಗ ಫೋನ್ ಗಳಲ್ಲಿ ಕೂಡ ಕಾಣಬಹುದಾಗಿದೆ. ಈ ಸೆನ್ಸರ್ ನೊಂದಿಗೆ ಬಂದ ಮೊದಲ ಫೋನ್ ಸ್ಯಾಮ್ಸಂಗ್ ಗ್ಯಾಲಾಕ್ಸಿ ಎಸ್5, ಆದರೆ ಈ ಪ್ರಯತ್ನ ಕಂಪನಿಗೆ ಬಹು ದೊಡ್ಡ ಸೋಲಾಯಿತು. ಈ ಸೆನ್ಸರ್ ಮೂಲತಃ ವಾಗಿ ನಿಮ್ಮ ಹಾರ್ಟ್ ರೇಟ್ ಮೊನಿಟರ್ ಮಾಡುತ್ತದೆ ಮತ್ತು ನಿಮ್ಮ ಫೋನಿನಲ್ಲಿ ತೋರಿಸುತ್ತದೆ ಅಡಿಷನಲ್ ಅಪ್ಲಿಕೇಷನ್ ಸಹಾಯದಿಂದ.

ಫಿಂಗರ್‍ಪ್ರಿಂಟ್ ಸೆನ್ಸರ್
ಇದು ಇತ್ತೀಚೆಗೆ ಫೋನಿನಲ್ಲಿ ಸೇರಿಕೊಂಡಿರುವಂತಹುದು. ಈಗ ಇತ್ತೀಚೆಗೆ ಬಿಡುಗಡೆಯಾಗುವ ಎಲ್ಲಾ ಸ್ಮಾರ್ಟ್‍ಫೋನ್‍ಗಳಲ್ಲಿ ಕಾಣಬಹುದಾಗಿದೆ. ಫಿಂಗರ್‍ಪ್ರಿಂಟ್ ಸೆನ್ಸರ್ ನಿಂದ ನೀವು ನಿಮ್ಮ ಫೋನ್ ಅನ್ಲೊಕ್ ಮಾಡಬಹುದು ಮತ್ತು ಹೆಚ್ಚಿನ ಸುರಕ್ಷತೆಯನ್ನು ನಿಮ್ಮ ಫೋನ್ ಗೆ ನೀಡುತ್ತದೆ.

ಪೆಡೊಮೀಟರ್
ಈ ಸೆನ್ಸರ್ ಕೂಡ ಸ್ಮಾರ್ಟ್‍ಬ್ಯಾಂಡ್ಸ್ ಅಥವಾ ಸ್ಮಾರ್ಟ್‍ವಾಚಸ್‍ಗಳಲ್ಲಿ ಕಾಣಬಹುದು, ಆದರೆ ಕೆಲ ಫೋನ್ ಗಳು ಈ ಸೆನ್ಸರ್ ನೊಂದಿಗೆ ಹೊಸದಾಗಿ ಬಿಡುಗಡೆಯಾಗಲಿವೆ ಅದರಲ್ಲಿ ಒಂದು ಹುಆವೈ ಪಿ9. ಈ ಸೆನ್ಸರ್ ನ ಕೆಲಸ ನಿಮ್ಮ ಹೆಜ್ಜೆಗಳನ್ನು ಗುರುತಿಸಿ ತೋರಿಸುವುದು ನೀವು ಎಷ್ಟು ಕ್ಯಾಲೊರಿಸ್ ನಿಮ್ಮ ದೇಹದಿಂದ ಕಳೆದುಕೊಂಡಿದ್ದೀರಿ ಎಂದು. ಇದು ನಿಜಕ್ಕೂ ಫೋನಿನಲ್ಲಿರಬೇಕಾದ ಒಂದೊಳ್ಳೆಯ ಸೆನ್ಸರ್.

ಬ್ಯಾರೊಮೀಟರ್
ನಮ್ಮ ಪಟ್ಟಿಯಲ್ಲಿರುವ ಕೊನೆಯ ಸೆನ್ಸರ್ ಇದು. ಇದೊಂದ್ ಥರ ವಿಚಿತ್ರ ಸೆನ್ಸರ್ ಫೋನಿನಲ್ಲಿ ಇರಲು, ಈ ಸೆನ್ಸರ್ ನಿಮ್ಮ ಸುತ್ತಮುತ್ತ ವಾತಾರಣದ ಒತ್ತಡವನ್ನು ಅಳೆಯುತ್ತದೆ ಮತ್ತು ಮಳೆಯ ಸಂಭವದ ಬಗ್ಗೆ ತಿಳಿಸುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470