ಮೊಬೈಲ್‌ ನಂಬರ್‌ಗಳು ನೆನಪಾಗದಿರಲು ಕಾರಣ ಏನು ಗೊತ್ತೇ?

By Suneel
|

ಬದಲಾದ ಜೀವನ ಶೈಲಿಯಿಂದ ಇಂದು ಸ್ಮಾರ್ಟ್‌ಫೋನ್‌ ಇಲ್ಲದೇ ಇರುವ ಲೈಫ್‌ ಅನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಜೊತೆಗೆ ಸ್ಮಾರ್ಟ್‌ಫೋನ್‌ ಅನ್ನು ಮೀರಿ ಈಗ ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ಗಳು ಸಹ ಸ್ಮಾರ್ಟ್‌ಫೋನ್‌ ಸಾಲಿಗೆ ಸೇರಿಕೊಳ್ಳುತ್ತಿವೆ.

ಈಗಿನ ಹೊಸ ಅಘಾತಕಾರಿ ಸುದ್ದಿ ಎಂದರೆ ಮನುಷ್ಯ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌ಗಳ ತೀವ್ರ ಬಳಕೆಯಿಂದ ಮಾಹಿತಿಯನ್ನು ನೆನಪಿಸಿಕೊಳ್ಳುವುದೇ ಕಠಿಣವಾಗಿದೆಯಂತೆ. ಹೀಗೆ ಹೇಳಿರುವುದು ಬ್ರಿಟೀಷ್‌ ಸಂಶೋಧಕರು. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಉದ್ಯೋಗಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಭಾರತದ ಟಾಪ್‌ ಕಂಪನಿಗಳು

ವೈರ್‌ಲೆಸ್‌ ಡಿವೈಸ್‌

ವೈರ್‌ಲೆಸ್‌ ಡಿವೈಸ್‌

ವೈರ್‌ಲೆಸ್‌ ಡಿವೈಸ್‌ಗಳಾದ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್, ಲ್ಯಾಪ್‌ಟಾಪ್‌ಗಳ ಉತ್ತಮ ಆಯ್ಕೆಗಳು ಅನಗತ್ಯ ಕಾರ್ಯಗಳಿಂದ ಮನುಷ್ಯನ ಮೆದುಳಿನ ಮಾಹಿತಿ ಸಂಪನ್ಮೂಲವನ್ನು ಖಾಲಿಮಾಡುತ್ತವೆ. ಮುಂದಿನ ಸ್ಲೈಡರ್‌ ಓದಿರಿ.

ವೈಜ್ಞಾನಿಕ ಸಾಕ್ಷಿ

ವೈಜ್ಞಾನಿಕ ಸಾಕ್ಷಿ

ಆನ್‌ಲೈನ್‌ ಮೂಲಕ ಸುಲಭವಾಗಿ ಮಾಹಿತಿ ಸರ್ಚ್‌ ಮಾಡುವ ಸರಳ ಚಟುವಟಿಕೆಯಿಂದಾಗಿ ಜನರು ಕಂಪ್ಯೂಟರ್‌ ಇಲ್ಲದೇ ಯಾವುದೇ ಮಾಹಿತಿಯನ್ನು ನೆನಪು ಮಾಡಿಕೊಳ್ಳುವುದು ಕಠಿಣವಾಗಿದೆ ಎಂಬುದಕ್ಕೆ ವೈಜ್ಞಾನಿಕ ಸಾಕ್ಷಿ ಪತ್ತೆಯಾಗಿದೆ.

ಶ್ಯಾಂ ಗಿಲ್ಬರ್ಟ್‌

ಶ್ಯಾಂ ಗಿಲ್ಬರ್ಟ್‌

"ಶಾಪಿಂಗ್‌ ಲೀಸ್ಟ್‌ ಮತ್ತು ಅಪಾಯಿಂಟ್ಮೆಂಟ್ ಸಮಯವನ್ನು ನೆನಪಿಸಿಕೊಳ್ಳುವುದು ಪರಿಣಾಮಕಾರಿಯಲ್ಲ, ಅದರೂ ಸಹ ಇಂತಹ ಟಾಸ್ಕ್‌ಗಳನ್ನು ನೆನಪಿಸಿಕೊಳ್ಳುವುದು ಹಲವು ರೀತಿಯ ಉಪಯೋಗಗಳನ್ನು ನೀಡುತ್ತದೆ" ಎಂದು ಲಂಡನ್ ವಿಶ್ವವಿದ್ಯಾಲಯ ಕಾಲೇಜಿನ 'ಅರಿವಿನ ನರವಿಜ್ಞಾನದ ಸಂಶೋಧನೆ' ಸಂಶೋಧಕರಾದ 'ಶ್ಯಾಂ ಗಿಲ್ಬರ್ಟ್‌' ಹೇಳಿದ್ದಾರೆ.

 ಅರಿವಿನ ಸಾಗಣೆ (Cognitive Offloading)

ಅರಿವಿನ ಸಾಗಣೆ (Cognitive Offloading)

ಟೆಕ್‌ ಟೂಲ್‌ಗಳನ್ನು ಹೆಚ್ಚು ಬಳಸುವುದರಿಂದ ನಮ್ಮ ಮೆದುಳಿನ ನೆನಪಿನ ಶಕ್ತಿಯನ್ನು ಬಲಗೊಳಿಸಬಹುದು, ಆದರೆ ತಜ್ಞರ ಪ್ರಕಾರ ಹೆಚ್ಚು ಟೆಕ್ನಾಲಜಿ ಪ್ರದರ್ಶನವು ಮೆದುಳಿನ ನೆನಪಿನ ಶಕ್ತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೂಗಲ್‌ ಮ್ಯಾಪ್‌ ಬಳಕೆ ಎಷ್ಟು ಉತ್ತಮ

ಗೂಗಲ್‌ ಮ್ಯಾಪ್‌ ಬಳಕೆ ಎಷ್ಟು ಉತ್ತಮ

ಡ್ರೈವರ್‌ಗಳು ಹೆಚ್ಚಾಗಿ ಗೂಗಲ್‌ ಮ್ಯಾಪ್‌ ಅನ್ನು ಬಳಸುವುದರಿಂದ ಅವರ ಪ್ರವಾಸದ ಬಗ್ಗೆ ಕಡಿಮೆ ನೆನಪು ನೀಡುತ್ತದೆ. ಇದರಿಂದ ಪುನಃ ಹಿಂದಿರುಗಿ ಹೋಗಲು ಮಾರ್ಗದ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಸಹ ಅರಿವಿನ ನರವಿಜ್ಞಾನದ ಸಂಶೋಧನೆ' ಸ್ಪಷ್ಟಪಡಿಸಿದೆ.

 ಡಿಜಿಟಲ್ ಕ್ಯಾಮೆರಾ

ಡಿಜಿಟಲ್ ಕ್ಯಾಮೆರಾ

ಸ್ಮಾರ್ಟ್‌ಫೋನ್ ಬಳಕೆದಾರರು ಹೆಚ್ಚಾಗಿ ಆಗಾಗ ಸೆಲ್ಫಿ ಕ್ಯಾಮೆರಾದಲ್ಲಿ ಫೋಟೋ ಕ್ಲಿಕ್ಕಿಸುತ್ತಿರುತ್ತಾರೆ. ಇಂತಹವರು ವಸ್ತು ಸಂಗ್ರಹಾಲಯಗಳಲ್ಲಿ ಡಿಜಿಟಲ್‌ ಕ್ಯಾಮೆರಾ ಬಳಸಿ ಫೋಟೋ ತೆಗೆದುಕೊಳ್ಳುವುದರಿಂದ ಅಲ್ಲಿನ ವಿಷಯಗಳು ಮತ್ತು ಮಾಹಿತಿಗಳ ಬಗ್ಗೆ ಹೆಚ್ಚು ನೆನಪುಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಸಹ ಸಂಶೋಧನೆ ಹೇಳಿದೆ. ಸಂಶೋಧನೆಯಿಂದ ಸ್ಪಷ್ಟವಾಗಿ ಅರ್ಥವಾಗಿರುವ ಮಾಹಿತಿ ಎಂದರೆ "ವಿವಿಧ ರೀತಿಯ ಟೆಕ್ನಾಲಜಿಗಳ ಮೇಲೆ ಹೆಚ್ಚು ಆಧಾರಿತವಾಗುವುದರಿಂದ ನಮ್ಮ ದೈಹಿಕ ಅಂಗಾಂಗಗಳ ಮೇಲೆ ಕಡಿಮೆ ಸಮಯ ಮತ್ಉತ ದೀರ್ಥ

ಗಿಜ್‌ಬಾಟ್‌

ಗಿಜ್‌ಬಾಟ್‌

ಗೂಗಲ್‌ 'ವೆಬ್‌ ಸುರಕ್ಷೆ' ಸ್ಪರ್ಧೆಯಲ್ಲಿ ಗೆದ್ದ 5 ಭಾರತೀಯ ಶಾಲಾಮಕ್ಕಳುಗೂಗಲ್‌ 'ವೆಬ್‌ ಸುರಕ್ಷೆ' ಸ್ಪರ್ಧೆಯಲ್ಲಿ ಗೆದ್ದ 5 ಭಾರತೀಯ ಶಾಲಾಮಕ್ಕಳು

ವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡುವ ಟಾಪ್‌ 8 ಆಪ್‌ಗಳುವೈಫೈ ನೆಟ್‌ವರ್ಕ್‌ ಹ್ಯಾಕ್‌ ಮಾಡುವ ಟಾಪ್‌ 8 ಆಪ್‌ಗಳು

Best Mobiles in India

Read more about:
English summary
Ease of access to online searches is making it harder for humans to remember information without the help of a computer. (Shutterstock)

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X