Subscribe to Gizbot

ಈ ಫೋನಿನ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕಾಣಿಸುವುದೇ ಇಲ್ಲ.!

Written By:

ವಿಶ್ವದ ಮೊದಲ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್ ಇಂದು ಲಾಸ್ ವೇಗಸ್ ದಲ್ಲಿ ನಡೆಯುತ್ತಿರುವ CES 2018 ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿದ್ದು, ಶೀಘ್ರವೇ ಈ ಸ್ಮಾರ್ಟ್‌ಫೋನ್ ಗ್ರಾಹಕರ ಬಳಕೆಗೆ ಮುಕ್ತವಾಗಲಿದೆ.

ಈ ಫೋನಿನ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕಾಣಿಸುವುದೇ ಇಲ್ಲ.!

ಓದಿರಿ: ಇದಕ್ಕಿಂತ ಬೆಸ್ಟ್‌ ಸಮಯ ಇನ್ನೊಂದಿಲ್ಲ: ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್ ಸೇಲ್ ..!

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ವಿವೋ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ತನ್ನ ಸ್ಮಾರ್ಟ್‌ಫೋನಿನಲ್ಲಿ ಮೊದಲ ಬಾರಿಗೆ ಅಳವಡಿಸಿದೆ ಎನ್ನಲಾಗಿದೆ. ಇದು ಸ್ಮಾರ್ಟ್‌ಫೋನ್ ಇತಿಹಾಸದಲ್ಲಿ ಮೈಲಿಗಲ್ಲಗಲಿದ್ದು, ಫುಲ್‌ಸ್ಕ್ರಿನ್‌ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಪಾಲಿಗೆ ವರವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ರೆಜಿಲ್ ಲೈಸ್ ಡಿಸ್‌ಪ್ಲೇ:

ಬ್ರೆಜಿಲ್ ಲೈಸ್ ಡಿಸ್‌ಪ್ಲೇ:

ಈಗ ಮಾರುಕಟ್ಟೆಯಲ್ಲಿ ಬ್ರೆಜಿಲ್ ಲೈಸ್ ಡಿಸ್‌ಪ್ಲೇ ವಿನ್ಯಾಸವೂ ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಫಿಂಗರ್ ಪ್ರಿಂಟ್ ಫೋನ್ ಹಿಂಭಾಗಕ್ಕೆ ಶಿಫ್ಟ್ ಆಗಿತ್ತು. ಆದರೆ ಇದನ್ನು ಸರಿಪಡಿಸುವ ಸಲುವಾಗಿ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಭಿವೃದ್ಧಿಪಡಿಸಲಾಗಿದೆ.

ಈ ವರ್ಷವೇ ಮಾರುಕಟ್ಟೆಗೆ:

ಈ ವರ್ಷವೇ ಮಾರುಕಟ್ಟೆಗೆ:

ವಿವೋ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನು ಈ ವರ್ಷವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಸ್ಮಾರ್ಟ್‌ಫೋನ್ ತಯಾರಿಕೆಯೂ ಆರಂಭವಾಗಿದ್ದು, ವರ್ಷದ ಮಧ್ಯಭಾಗದಲ್ಲಿ ಈ ಫೋನ್ ಕಾಣಿಸಿಕೊಳ್ಳಲಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
CES 2018:

CES 2018:

ಗ್ರಾಹಕರ ಎಲೆಕ್ಟ್ರಾನಿಕ್ಸ್ ಶೋ (ಸಿಇಎಸ್) ಈ ಬಾರಿ ಅಮೆರಿಕಾದ ಲಾಸ್ ವೇಗಸ್ ನಲ್ಲಿ ನಡೆಯುತ್ತಿದ್ದು, ವಿವಿಧ ಹೊಸ ತಂತ್ರಜ್ಞಾನಗಳು ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ಸಂಶೋಧನೆಗಳನ್ನು ಇಲ್ಲಿ ಲಾಂಚ್ ಮಾಡಲು ವಿಶ್ವದ ಎಲ್ಲಾ ಟೆಕ್ ದೈತ್ಯರು ತಯಾರಿಯನ್ನು ನಡೆಸಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
smartphone with in-display fingerprint sensor. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot