Home
ಮೊಬೈಲ್

smartphones: ಡಿಸೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್‌ ಆಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು: ಗ್ರಾಹಕರಲ್ಲಿದೆ ಭಾರೀ ಕಾತುರ!

ಸ್ಮಾರ್ಟ್‌ಫೋನ್‌ಗಳು (Smartphones) ಪ್ರತಿ ತಿಂಗಳು ಅನಾವರಣ ಆಗುತ್ತಿದ್ದು, ಈ ಮೂಲಕ ಗ್ರಾಹಕರು ಅವರ ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ಫೋನ್‌ಗಳನ್ನು ಖರೀದಿ ಮಾಡುತ್ತಿದ್ದಾರೆ. ಅದರಲ್ಲೂ ಕೆಲವು ಬ್ರ್ಯಾಂಡ್‌ಗಳ ಫೋನ್‌ಗಳಿಗೆ ಗ್ರಾಹಕರು ಕಾದು ಕುಳಿತಿದ್ದು, ಈ ಫೋನ್‌ಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ಲೀಕ್‌ ಆಗಿವೆ.

ಹೌದು, ಹೊಸ ಸ್ಮಾರ್ಟ್‌ಫೋನ್‌ಗೆ ಅಪ್‌ಗ್ರೇಡ್‌ ಆಗುವುದು ಹಲವಾರು ಜನರ ಆಸೆ. ಅದರಲ್ಲೂ ಇತ್ತೀಚಿಗೆ ಸಾಕಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಿದ್ದರೂ ಸಹ ಗ್ರಾಹಕರು ಈ ತಿಂಗಳು ಲಾಂಚ್‌ ಆಗಲಿರುವ ಸ್ಮಾರ್ಟ್‌ವಾಚ್‌ಗಳನ್ನು ಖರೀದಿ ಮಾಡಲು ಕಾಯುತ್ತಿದ್ದಾರೆ. ಈ ವಿಭಾಗದಲ್ಲಿ ಐಕ್ಯೂ, ಒನ್‌ಪ್ಲಸ್, ರಿಯಲ್‌ಮಿ, ಪೊಕೊ, ರೆಡ್ಮಿ, ಹಾನರ್ (IQOO, OnePlus, Realme, Poco, Redmi, Honor) ಫೋನ್‌ಗಳು ಸೇರಿವೆ. ಹಾಗಿದ್ರೆ, ಈ ತಿಂಗಳು ಯಾವೆಲ್ಲಾ ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ?, ಇವುಗಳ ಫೀಚರ್ಸ್‌ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್‌ ಆಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ಐಕ್ಯೂ 12 5G : ಈ ಸ್ಮಾರ್ಟ್‌ಫೋನ್ (IQOO 12 5G) 12 ಡಿಸೆಂಬರ್ 2023 ರಂದು ಲಾಂಚ್‌ ಆಗಲಿದೆ ಎಂದು ತಿಳಿದುಬಂದಿದೆ. ಇದು ಐಕ್ಯೂ 12 ಸರಣಿಯನ್ನು ಈಗಾಗಲೇ ಚೀನಾದಲ್ಲಿ ಪ್ರಾರಂಭಿಸಲಾಗಿದ್ದು, ಇದು ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್ ಅನ್ನು ಪ್ಯಾಕ್ ಮಾಡುವ ಮೊದಲ ಫೋನ್‌ ಆಗಿ ಹೆಸರು ಪಡೆಯಲಿದೆ. ಇದರೊಂದಿಗೆ ಈ ಸರಣಿಯಲ್ಲಿ ಐಕ್ಯೂ 12 5G ಮತ್ತು ಐಕ್ಯೂ 12 ಪ್ರೊ 5G ಫೋನ್‌ಗಳು ಇರಲಿವೆ ಎನ್ನಲಾಗಿದೆ. ಜೊತೆಗೆ ಈ ಫೋನ್ HDR10+ ಮತ್ತು 144Hz ರಿಫ್ರೆಶ್ ರೇಟ್‌ನೊಂದಿಗೆ 6.78 ಇಂಚಿನ 1.5K ಅಮೋಲೆಡ್‌ ಡಿಸ್ಪ್ಲೇಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

ಒನ್‌ಪ್ಲಸ್‌ 12: ಈ ಸ್ಮಾರ್ಟ್‌ಫೋನ್ (OnePlus 12) ಸಹ ಈ ತಿಂಗಳು ಲಾಂಚ್‌ ಆಗುವ ಸಂಭವ ಇದೆ. ಈ ಫೋನ್ ಒನ್‌ಪ್ಲಸ್‌ ಅಧ್ಯಕ್ಷ ಲಿ ಜಿಯೋ ಲೂಯಿಸ್ ವೈಬೋ ಪ್ಲಾಟ್‌ಫಾರ್ಮ್ ಮೂಲಕ ಇದನ್ನು ಘೋಷಣೆ ಮಾಡಿದ್ದಾರೆ. ಅದರಂತೆ ಭಾರತದಲ್ಲಿ ಈ ಫೋನ್‌ 12 ಜನವರಿ ಅಥವಾ ಫೆಬ್ರವರಿ 2024 ರಲ್ಲಿ ಲಾಂಚ್‌ ಆಗಲಿದೆ ಎನ್ನಲಾಗಿದೆ. ಇದರೊಂದಿಗೆ ಈ ಫೋನ್ ಓಮ್ನಿವಿಷನ್ OV64B ಸೆನ್ಸರ್‌ನೊಂದಿಗೆ 64MP ಪೆರಿಸ್ಕೋಪ್ ಕ್ಯಾಮೆರಾ ಮತ್ತು ಸೋನಿ LYT 808 ಸಂವೇದಕದೊಂದಿಗೆ 50MP ಮುಖ್ಯ ಕ್ಯಾಮೆರಾ ಹೊಂದಿರಲಿದೆ ಎನ್ನಲಾಗಿದೆ.

ಡಿಸೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್‌ ಆಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ರಿಯಲ್‌ಮಿ GT 5 ಪ್ರೊ: ಈ ಸ್ಮಾರ್ಟ್‌ಫೋನ್ (Realme GT 5 Pro) ಚೀನಾದಲ್ಲಿ 7 ಡಿಸೆಂಬರ್ 2023 ರಂದು ಲಾಂಚ್‌ ಆಗುವ ನಿರೀಕ್ಷೆಯಿದೆ. ಈ ಫೋನ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, 24GB RAM ಮತ್ತು 1TB ಸ್ಟೋರೇಜ್‌ ಆಯ್ಕೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಇದರೊಂದಿಗೆ 6.78 ಇಂಚಿನ ಅಮೋಲೆಡ್‌ ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆಯನ್ನು ಪಡೆದಿದೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್‌ 14 ಆಧಾರಿತ ರಿಯಲ್‌ಮಿ UI 5 ಅನ್ನು ಈ ಫೋನ್ ರನ್ ಮಾಡುತ್ತದೆ ಎಂದು ಹೇಳಲಾಗಿದೆ.

ಪೊಕೊ X6 ನಿಯೋ : ಈ ಫೋನ್‌ (Poco X6 Neo) ಸಹ ಈ ತಿಂಗಳಲ್ಲಿ ಲಾಂಚ್‌ ಆಗುವ ನಿರೀಕ್ಷೆ ಇದೆ. ಈ ಫೋನ್ ಶಿಯೋಮಿ 13R ಪ್ರೊ ನ ಮರುಬ್ರಾಂಡ್ ಆಗಿರಬಹುದು ಎಂದು ಹೇಳಲಾಗಿದೆ. ಜೊತೆಗೆ ವಿಶ್ವಾಸಾರ್ಹ ಟಿಪ್‌ಸ್ಟರ್ Kacper Skrzypek ಕೂಡ ಈ ಫೋನ್‌ ರೆಡ್ಮಿ ನೋಟ್‌ 13R ಪ್ರೊ ನ ಮರುಬ್ರಾಂಡ್ ಆಗಿರಲಿದೆ ಎಂದು ಉಲ್ಲೇಖಿಸಿದೆ. ಈ ವಿಶೇಷ ಸ್ಮಾರ್ಟ್‌ಫೋನ್ 50MP ಅಥವಾ 108MP ಮುಖ್ಯ ಕ್ಯಾಮರಾ ಮತ್ತು 2MP ಡೆಪ್ತ್ ಸೆನ್ಸಾರ್ ಆಯ್ಕೆ ಪಡೆದಿರಲಿದೆ ಎನ್ನಲಾಗಿದೆ.

ಪೊಕೊ X6 ಪ್ರೊ: ಈ ಫೋನ್ (Poco X6 Pro) ಕೂಡ ಇದೇ ತಿಂಗಳಲ್ಲಿ ಲಾಂಚ್‌ ಆಗುವ ನಿರೀಕ್ಷೆ ಇದೆ. ಈ ಸ್ಮಾರ್ಟ್‌ಫೋನ್‌ IMEI ಡೇಟಾಬೇಸ್‌ನಲ್ಲಿ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹಾಗೆಯೇ ಈ ಫೋನ್ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಆಯ್ಕೆಯೊಂದಿಗೆ ಸ್ನಾಪ್ಡ್ರಾಗನ್ 7s ಜನ್ 2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ. ಜೊತೆಗೆ ಇದು 5100mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದ್ದು, 67W ವೈರ್ಡ್ ಫಾಸ್ಟ್ ಚಾರ್ಜಿಂಗ್‌ ಬೆಂಬಲ ಹೊಂದಿದೆ ಎಂದು ತಿಳಿದುಬಂದಿದೆ.

ಡಿಸೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್‌ ಆಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ಹಾನರ್‌ 100: ಈ ಸ್ಮಾರ್ಟ್‌ಫೋನ್‌ (Honor 100) ಅನ್ನು ಈಗಾಗಲೇ ಚೀನಾದಲ್ಲಿ ಲಾಂಚ್ ಮಾಡಲಾಗಿದೆ. ಇದು ಹಾನರ್‌ 90 ರ ಉತ್ತರಾಧಿಕಾರಿಯಾಗಿದ್ದು, 120Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ ಫುಲ್‌ ಹೆಚ್‌ಡಿ + OLED ಡಿಸ್ಪ್ಲೇ ಯೊಂದಿಗೆ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದ್ದು, ಸ್ನಾಪ್‌ಡ್ರಾಗನ್ 7 ಜನ್ 3 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ಪ್ರೊ ಮಾದರಿಯು ಸ್ನಾಪ್ಡ್ರಾಗನ್ 8 ಜನ್ 2 SoC ಅನ್ನು ಹೊಂದಿರುತ್ತದೆ ಎಂದು ಲೀಕ್‌ ಮಾಹಿತಿಯಿಂದ ತಿಳಿದುಬಂದಿದೆ.

ಒಪ್ಪೋ ರೆನೋ 11 ಸರಣಿ: ಈ ವಿಭಾಗದಲ್ಲಿ ಎರಡು ಫೋನ್‌ಗಳು ಲಾಂಚ್‌ ಆಗಲಿವೆ ಎನ್ನಲಾಗಿದೆ. ಅಂದರೆ ಒಪ್ಪೋ ರೆನೋ 11 5G (Oppo Reno 11) ಮತ್ತು ಒಪ್ಪೋ ರೆನೋ 11 ಪ್ರೊ 5G ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿದೆ. ಈ ಫೋನ್‌ ಅನ್ನು TDRA ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಮಾಡೆಲ್ ಸಂಖ್ಯೆ CPH2607 ನೊಂದಿಗೆ ವೀಕ್ಷಣೆ ಮಾಡಲಾಗಿದೆ. ಈ ಫೋನ್ 120Hz ರಿಫ್ರೆಶ್ ರೇಟ್ ಮತ್ತು 1600 ನಿಟ್ಸ್‌ ಬ್ರೈಟ್‌ನೆಸ್‌ನೊಂದಿಗೆ 6.74 ಇಂಚಿನ FHD+ ಕರ್ವ್ಡ್ OLED ಪ್ಯಾನೆಲ್ ಡಿಸ್‌ಪ್ಲೇ ಹೊಂದಿರಬಹುದು ಎಂದು ಊಹಿಸಲಾಗಿದೆ.

ಡಿಸೆಂಬರ್‌ನಲ್ಲಿ ಭಾರತದಲ್ಲಿ ಲಾಂಚ್‌ ಆಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಿವು...

ರೆಡ್ಮಿ K70 : ಈ ಫೋನ್‌ (Redmi K70) ಚೀನಾದಲ್ಲಿ ಈಗಾಗಲೇ ಲಾಂಚ್‌ ಆಗಿದೆ. ಈ ಸರಣಿಯು 3 ಸ್ಮಾರ್ಟ್‌ಫೋನ್‌ಗಳನ್ನು ಹೊಂದಿದ್ದು ಅದರಲ್ಲಿ ರೆಡ್ಮಿ K70 , ರೆಡ್ಮಿ K70E , ಮತ್ತು ರೆಡ್ಮಿ K70 ಪ್ರೊ ಸೇರಿವೆ. ಇನ್ನು ಈ ರೆಡ್ಮಿ K70 ಸ್ಮಾರ್ಟ್‌ಫೋನ್‌ನ ಭಾರತದಲ್ಲಿ ಡಿಸೆಂಬರ್‌ನಲ್ಲಿ ಪೊಕೊ F6 ಆಗಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಡಿವೈಸ್‌ ಇತ್ತೀಚೆಗೆ ಗೀಕ್‌ಬೆಂಚ್‌ನಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಹೊಸ ಪ್ರೊಸೆಸರ್ ಅದರ ಹಿಂದಿನದಕ್ಕಿಂತ 20% ಉತ್ತಮವಾಗಿದೆ.

Best Mobiles in India

English summary
OnePlus, Realme, Poco, Redmi, Honor, IQ12 5G, OnePlus 12, Realme GT 5 Pro, Poco X6 Neo, Poco X6 Pro, Honor 100, Oppo Reno 11 series, Redmi K70 smartphones will be launched this month.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+